ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | ESHWARAPPA | 19 ಏಪ್ರಿಲ್ 2022
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಎದುರಾಗಿರುವ ಸಮಸ್ಯೆ ನಿವಾರಣೆಗೆ ಮಹಿಳೆಯರು 101 ತೆಂಗಿನ ಕಾಯಿ ಹೊಡೆದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಳದಲ್ಲಿ ಮಾರಿಕಾಂಬ ಟ್ರಸ್ಟ್ ಮಹಿಳಾ ಸಂಯೋಜಕರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
40 ವರ್ಷದ ರಾಜಕೀಯ ಇತಿಹಾಸದಲ್ಲಿ ಕೆ.ಎಸ್. ಈಶ್ವರಪ್ಪ ಅವರು ಯಾವುದೇ ರೀತಿಯ ಕಪ್ಪು ಚುಕ್ಕಿ ಇಲ್ಲದಂತ ರಾಜಕಾರಣಿಯಾಗಿದ್ದರು. ಇತ್ತೀಚೆಗೆ ಕೆ.ಎಸ್. ಈಶ್ವರಪ್ಪ ಅವರಿಗೆ ಬಂದಿರುವ ದೋಷವನ್ನು ವಿಮೋಚನೆ ಮಾಡಲಿ ಎಂದು ಪ್ರಾರ್ಥಿಸಿ ಮಹಿಳಾ ಸಂಯೋಜಕರು 101 ಈಡುಗಾಯಿ ಹೊಡೆದು ದೇವಿಗೆ ಸಮರ್ಪಿಸಿದರು.
ಪಾಲಿಕೆ ಮಾಜಿ ಸದಸ್ಯೆ ಸೀತಾಲಕ್ಷ್ಮೀ, ಪಾಲಿಕೆ ಸದಸ್ಯರಾದ ಅನಿತಾ, ಲಕ್ಷ್ಮೀ ಶಂಕರನಾಯ್ಕ, ಸುನೀತಾ ಮೋಹನ್, ಮಂಜುಳಾ, ಪ್ರೀತಾ ಬಾಬು, ಕೆಂಪಮ್ಮ, ನಾಗವೇಣಿ, ಮಾಲಾ, ವರಲಕ್ಷ್ಮೀ, ಶಕುಂತಲಾ, ರಶ್ಮೀ, ಅನಿತಾ ಹಾಗೂ ಮಹಿಳಾ ಸಂಯೋಜಕರು ಹಾಜರಿದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ESHWARAPPA
LATEST NEWS
- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

- ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

About The Editor
ನಿತಿನ್ ಆರ್.ಕೈದೊಟ್ಲು
















