ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | CAR ATTACK | 09 ಮೇ 2022
ಕಾರಿನ ಹಿಂಬದಿ ಗ್ಲಾಸ್’ಗೆ ರಾಡ್’ನಿಂದ ಹೊಡೆದಿದ್ದರಿಂದ ಸೂಳೆಬೈಲಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣಗಿತ್ತು. ಈ ಪ್ರಕರಣ ಮಾಸುವ ಮುನ್ನ ಪಕ್ಕದ ಬಡಾವಣೆಯಲ್ಲಿ ಮೂರು ಕಾರುಗಳ ಗಾಜುಗಳನ್ನು ಒಡೆಯಲಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಹಾನಿ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸೂಳೆಬೈಲು ಪಕ್ಕದ ಬಡಾವಣೆ ಊರುಗಡೂರಿನಲ್ಲಿ ಘಟನೆ ಸಂಭವಿಸಿದೆ. ಮನೆ ಮುಂದೆ ನಿಲ್ಲಿಸಿದ್ದ ಮೂರು ಕಾರುಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ನಡುರಾತ್ರಿಯಲ್ಲಿ ನಾಲ್ವರು ಮುಸುಕುಧಾರಿಗಳು
ಊರುಗಡೂರು ಬಡಾವಣೆಯ ಕೊನೆ ಭಾಗದಲ್ಲಿ ಘಟನೆ ಸಂಭವಿಸಿದೆ. ಪಕ್ಕದಲ್ಲಿರುವ ಚಾನಲ್ ಕಡೆಯಿಂದ ನಾಲ್ವರು ದುಷ್ಕರ್ಮಿಗಳು ಬಡಾವಣೆಗೆ ಪ್ರವೇಶಿಸುತ್ತಾರೆ. ಮುಖ ಕಾಣದಂತೆ ಸಂಪೂರ್ಣವಾಗಿ ಮುಚ್ಚಿಕೊಂಡಿದ್ದಾರೆ. ನಾಲ್ವರ ಕೈಯಲ್ಲೂ ರಾಡ್’ಗಳು ಇರಿವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.
ಮೂರು ಕಾರುಗಳ ಗ್ಲಾಸ್ ಪೀಸ್ ಪೀಸ್
ಮನೆ ಮುಂದೆ ನಿಲ್ಲಿಸಿದ್ದ ಮೂರು ಕಾರುಗಳ ಮೇಲೆ ಮುಸುಕುಧಾರಿಗಳು ದಾಳಿ ನಡೆಸಿದ್ದಾರೆ. ಡಸ್ಟರ್, ಇಗ್ನಿಸ್ ಮತ್ತು ಫೋರ್ಡ್ ಐಕಾನ್ ಕಾರುಗಳ ಗಾಜುಗಳನ್ನು ಒಡೆಯುತ್ತಾರೆ. ಈ ದುಷ್ಕರ್ಮಿಗಳು ಗಾಜುಗಳನ್ನು ಒಡೆಯುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ದಾಖಲಾಗಿದೆ. ನಿನ್ನೆ ಮಧ್ಯೆ ರಾತ್ರಿ ಈ ಘಟನೆ ಸಂಭವಿಸಿದೆ.
ಒಬ್ಬನ ಸುಳಿವು ಪತ್ತೆ
ಘಟನೆ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ‘ನಾಲ್ವರು ಮುಸುಕುಧಾರಿಗಳ ಪೈಕಿ ಒಬ್ಬನ ಸುಳಿವು ಪತ್ತೆಯಾಗಿದೆ. ಶೀಘ್ರದಲ್ಲೇ ದುಷ್ಕರ್ಮಿಗಳನ್ನು ಬಂಧಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ.
ಇನ್ನು, ಘಟನೆ ಸಂಬಂಧ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ‘ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಘಟನೆ ಹಿಂದೆ ಯಾರೆ ಇದ್ದರೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದ್ದಾರೆ.
♦ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ – ಕಾರಿನ ಮೇಲೆ ದಾಳಿ ಬೆನ್ನಿಗೆ ಸೂಳೆಬೈಲಿನಲ್ಲಿ ಮನೆಗಳ ಮೇಲೆ ಕಲ್ಲು ತೂರಾಟ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422