ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | ARECA | 4 ಜೂನ್ 2022
ಶಿವಮೊಗ್ಗದಿಂದ ಗುಜರಾತ್ ರಾಜ್ಯದ ಅಹಮದಾಬಾದ್’ಗೆ 1.26 ಕೋಟಿ ರೂ. ಮೌಲ್ಯದ ಅಡಕೆ ತುಂಬಿಕೊಂಡು ತೆರಳಿದ್ದ ಲಾರಿ ನಾಪತ್ತೆಯಾಗಿದೆ. ಚಾಲಕನ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದು ಪ್ರಕರಣ?
ಶಿವಮೊಗ್ಗದ ಮಲೆನಾಡು ಅಡಕೆ ಮಾರಾಟಗಾರರ ಸಹಕಾರ ಸಂಘಕ್ಕೆ (ಮ್ಯಾಮ್ಕೋಸ್) ಸಂಬಂಧಿಸಿದ ಅಡಕೆ ನಾಪತ್ತೆಯಾಗಿದೆ. ಕೋಟೆ ರಸ್ತೆಯಲ್ಲಿರುವ ಮ್ಯಾಮ್ಕೋಸ್ ಖರೀದಿ ಶಾಖೆ ಉಗ್ರಾಣದಿಂದ ಗುಜರಾತ್’ನ ಅಹಮದಾಬಾದ್’ಗೆ ಅಡಕೆ ಕಳುಹಿಸಲಾಗಿತ್ತು.
350 ಚೀಲದಲ್ಲಿ 245 ಕ್ವಿಂಟಾಲ್ ಅಡಕೆಯನ್ನು ಲಾರಿಯಲ್ಲಿ ಕಳುಹಿಸಲಾಗಿದೆ. ಮೇ 25ರಂದು ಲಾರಿ ಶಿವಮೊಗ್ಗದಿಂದ ತೆರಳಿದೆ. ಮೇ 30ರ ಒಳಗೆ ಅದು ಅಹಮದಾಬಾದ್ ತಲುಪಬೇಕಿತ್ತು. ಆದರೆ ಈತನಕ ಲಾರಿ ಅಲ್ಲಿಗೆ ತಲುಪಿಲ್ಲ. ಅಲ್ಲದೆ ಚಾಲಕ ಟಿಪ್ಪು ನಗರದ ಮಹಮ್ಮದ್ ಗೌಸ್ ಮೊಬೈಲ್ ನಂಬರ್ ಸ್ವಿಚ್ ಆಫ್ ಎಂದು ಬರುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಲಾರಿಯಲ್ಲಿದ್ದ ಅಡಕೆ ಮೌಲ್ಯ 1.26 ಕೋಟಿ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಡಕೆ ಮತ್ತು ಲಾರಿಯನ್ನು ಹುಡುಕಿಕೊಡುವಂತೆ ಉದ್ಯಮಿ ದೋಲಾರಾಮ್ ಅವರು ಕೋಟೆ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ಅಡಕೆ ಧಾರಣೆ | 3 ಜೂನ್ 2022 | ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಧಾರಣೆ?
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.