ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
[su_highlight background=”#d70000″ color=”#ffffff”]SHIVAMOGGA LIVE NEWS[/su_highlight]
SHIMOGA | ಹಿಂದೂ ಮಹಾಸಭಾ (HINDU MAHASABHA) ರಾಜಬೀದಿ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಮೆರವಣಿಗೆಯ ಹಾದಿ ಉದ್ದಕ್ಕೂ ಅಲಂಕಾರ ಮಾಡಲಾಗಿದೆ. ಹಿಂದೂ ಮಹಾಸಭಾ ಗಣಪತಿ ಕುರಿತು ಪ್ರಮುಖ 10 ವಿಚಾರಗಳು (10 POINTS) ಇಲ್ಲಿದೆ.
10 POINTS
[su_highlight background=”#f15600″ color=”#ffffff”]POINT 1[/su_highlight] ಹಿಂದೂ ಮಹಾಸಭಾ ಗಣಪತಿಯನ್ನು ಮೊದಲು ಪ್ರತಿಷ್ಠಾಪಿಸಿದ್ದೇ ಶಿವಮೊಗ್ಗದಲ್ಲಿ. ಆ ಬಳಿಕ ರಾಜ್ಯದ ವಿವಿಧೆಡೆ ಹಿಂದೂ ಸಂಘಟನೆಗಳ ಮಹಾಮಂಡಳಿ ಹೆಸರಿನಲ್ಲಿ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಆರಂಭವಾಗಿದ್ದು.
[su_highlight background=”#f15600″ color=”#ffffff”]POINT 2[/su_highlight] 1938 – 39ರ ಆಸುಪಾಸಿನಲ್ಲಿ ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಆರಂಭವಾಯಿತು. 1941ರಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಈ ಸಂದರ್ಭ ವೀರ ಸಾವರ್ಕರ್ ಅವರು ಶಿವಮೊಗ್ಗಕ್ಕೆ ಆಗಮಿಸಿದ್ದರು. ಆಗ ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಸೂಚನೆ ನೀಡಿದ್ದರು.

[su_highlight background=”#f15600″ color=”#ffffff”]POINT 3[/su_highlight] 1945ರಲ್ಲಿ ಮೊದಲ ಭಾರಿ ಹಿಂದೂ ಸಂಘಟನೆಗಳ ಮಹಾಮಂಡಳದ ವತಿಯಿಂದ ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಅಲ್ಲಿಂದ ಪ್ರತಿ ವರ್ಷ ಗಣಪತಿ ಮೂರ್ತಿ ಪ್ರತಿಷ್ಠಾಪನೆ ನೆರವೇರುತ್ತಿದೆ.
[su_highlight background=”#f15600″ color=”#ffffff”]POINT 4[/su_highlight] ಗಣಪತಿ ಮೂರ್ತಿ ಮೆರವಣಿಗೆ ಸಂದರ್ಭ, ಮಸೀದಿ ಮುಂದೆ ಮಂಗಳವಾದ್ಯ ನುಡಿಸುವಂತಿಲ್ಲ ಎಂಬ ಅಲಿಖಿತ ನಿಯಮವಿತ್ತು. 1947ರಲ್ಲಿ ಮೆರವಣಿಗೆ ಸಂದರ್ಭ, ಧರ್ಮಸಿಂಗ್ ಎಂಬುವವರು ತುತ್ತೂರಿ ಊದುತ್ತಾ ಮಸೀದಿ ಮುಂದೆ ಸಾಗಿದರು. ಆಗ ಗಲಭೆ ಸಂಭವಿಸಿ, ಶಿವಮೂರ್ತಿ ಎಂಬ ಯುವಕನ ಹತ್ಯೆಯಾಯಿತು. ನೆಹರೂ ಸ್ಟೇಡಿಯಂ ಪಕ್ಕದ ವೃತ್ತಕ್ಕೆ ಶಿವಮೂರ್ತಿ ಅವರ ಹೆಸರನ್ನೆ ಇಡಲಾಗಿದೆ.
[su_highlight background=”#f15600″ color=”#ffffff”]POINT 5[/su_highlight] ಮಸೀದಿ ಮುಂದೆ ಮಂಗಳವಾದ್ಯ ನಡಿಸಬಾರದೇಕೆ ಎಂದು ಪ್ರಶ್ನಿಸಿ ಕೆಲವರು ಕೋರ್ಟ್ ಮೆಟ್ಟಿಲೇರಿದರು. ವಿಚಾರಣೆ ನಡೆಸಿದ ನ್ಯಾಯಾಲಯ, ಮೆರವಣಿಗೆ ಸಂದರ್ಭ ಮಂಗಳವಾದ್ಯ ನುಡಿಸುವುದನ್ನು ತಡೆಯಬಾರದು ಎಂದು 1950ರಲ್ಲಿ ಆದೇಶಿಸಿತು.

[su_highlight background=”#f15600″ color=”#ffffff”]POINT 6[/su_highlight] 1947ರ ಗಲಭೆ ಹೊರತು 50 ವರ್ಷ ಯಾವುದೆ ಅಹಿತಕರ ಘಟನೆ ಸಂಭವಿಸಿರಲಿಲ್ಲ. 51ನೇ ವರ್ಷದ ಗಣಪತಿ ಮೆರವಣಿಗೆ ಸಂದರ್ಭ ಕೆಲವು ಕಿಡಿಗೇಡಿಗಳಿಂದ ಗಲಭೆಯಾಯ್ತು. ಇದರಿಂದ ಬೇಸರಗೊಂಡ ಹಿಂದೂ ಮಹಾಸಭಾದ ಮುಖಂಡರು 7 ವರ್ಷ ಗಣಪತಿಯ ಸಾರ್ವಜನಿಕ ಮೆರವಣಿಗೆ ಮಾಡಲಿಲ್ಲ.
[su_highlight background=”#f15600″ color=”#ffffff”]POINT 7[/su_highlight] ಗಣಪತಿ ಮೆರವಣಿಗೆ ನಿಲ್ಲಿಸಿದ್ದಕ್ಕೆ ಹಿಂದೂ ಮಹಾಸಭಾದ ಪ್ರಮುಖರ ವಿರುದ್ಧ ಯುವಕರು ಆಕ್ರೋಶ ವ್ಯಕ್ತಪಡಿಸಿದರು. ಪ್ರಮುಖರಿಗೆ ಸೀರೆ, ಬಳೆಗಳನ್ನು ಕಳುಹಿಸಿದ್ದರು. ಆದರೂ ಪರಿಸ್ಥಿತಿ ತಣ್ಣಗಾಗುವರೆಗೆ ಕಾದ ಸಮಿತಿ, 2003ರಲ್ಲಿ ಸಾರ್ವಜನಿಕ ಮೆರವಣಿಗೆ ಆರಂಭಿಸಿತು.
[su_highlight background=”#f15600″ color=”#ffffff”]POINT 8[/su_highlight] 2003ರಲ್ಲಿ ಸಾರ್ವಜನಿಕ ಮೆರವಣಿಗೆಗೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿತು. ಇದನ್ನು ವಿರೋಧಿಸಿ ಮಹಾಸಭಾದ ವತಿಯಿಂದ ಮೆರವಣಿಗೆಗೆ ಮುಂದಾದಾಗ, ನೊಟೀಸ್ ಜಾರಿ ಮಾಡಲಾಯಿತು. ಮೆರವಣಿಗೆಗೆ ಅನುಮತಿ ಕೊಡಲೇಬೇಕು ಎಂದು ಸಮಿತಿಯವರು ಪಟ್ಟು ಹಿಡಿದರು. ವಿಸರ್ಜನೆಯನ್ನು 13 ದಿನ ಮುಂದಕ್ಕೆ ಹಾಕಲಾಯಿತು. ಆಗ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಮಧ್ಯ ಪ್ರವೇಶಿಸಿ, ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿದರು. ‘ಗಣಪತಿ ಕೂರಿಸಿದ ಮೇಲೆ ಮೆರವಣಿಗೆ ನಡೆಯಲೆಬೇಕು. ವಿಸರ್ಜನೆ ಆಗಲೇಬೇಕು. ಮೆರವಣಿಗೆಗೆ ಅನುಮತಿ ಕೊಡಿ’ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಆ ಬಳಿಕ ಮೆರವಣಿಗೆ ನಡೆಯಿತು.

[su_highlight background=”#f15600″ color=”#ffffff”]POINT 9[/su_highlight] ಒಮ್ಮೆ ಗಣಪತಿ ಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೋಟೆ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಹಿಂದೂ ಮಹಾಸಭಾದ ಮುಖಂಡರು ಠಾಣೆಗೆ ಹೋಗಿ ಪೂಜೆ ಮಾಡುತ್ತಿದ್ದರು. ಪೊಲೀಸರು ಕೂಡ ಪೂಜೆಯಲ್ಲಿಪಾಲ್ಗೊಳ್ಳುತ್ತಿದ್ದರು.
[su_highlight background=”#f15600″ color=”#ffffff”]POINT 10[/su_highlight] ಕೋವಿಡ್ ಸಂದರ್ಭ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ನಿಷೇಧಿಸಲಾಗಿತ್ತು. 2022ರಲ್ಲಿ ಮೆರವಣಿಗೆ ಪುನಾರಂಭವಾಗಿದೆ. ರಾಜಬೀದಿ ಉತ್ಸವಕ್ಕೆ ಅದ್ಧೂರಿ ಅಲಂಕಾರ, ದೊಡ್ಡ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದಾರೆ.

ಕ್ಲಿಕ್ ಮಾಡಿ ಇದನ್ನೂ ಓದಿ | ಗಾಂಧಿ ಬಜಾರ್ ಮುಂದೆ ಮಹಾದ್ವಾರ ಕಣ್ತುಂಬಿಕೊಳ್ಳಲು ಜನವೋ ಜನ

ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















