‘ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ನಗರದ 35 ವಾರ್ಡಿಗು ಜೆನರ್ಮ್ ಬಸ್ ಬಿಡಬೇಕು’

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 NOVEMBER 2022

SHIMOGA | ನಗರಕ್ಕೆ ರೈಲುಗಳು ಬರುವ ಮತ್ತು ಹೊರಡುವ ಸಮಯಕ್ಕೆ ಹೊಂದಿಕೆ ಆಗುವಂತೆ ಜೆನರ್ಮ್ ಯೋಜನೆಯ ನಗರ ಸಾರಿಗೆ (city bus) ಬಸ್ಸುಗಳ ವ್ಯವಸ್ಥೆ ಮಾಡಬೇಕು ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿ ಮನವಿ ಮಾಡಿದೆ.

Shimoga Nanjappa Hospital

ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರನ್ನು ಭೇಟಿಯಾದ ಅಣ್ಣಾ ಹಜಾರೆ ಹೋರಾಟ ಸಮಿತಿ ಸದಸ್ಯರು, ಮನವಿ ಸಲ್ಲಿಸಿದರು.

ಮನವಿಯಲ್ಲಿದೆ 3 ಪ್ರಮುಖಾಂಶ

POINT%201ಜೆನರ್ಮ್ ಯೋಜನೆ ಅಡಿ ಶಿವಮೊಗ್ಗ – ಭದ್ರಾವತಿ ನಗರಗಳಿಗೆ 100 ಸಾರಿಗೆ ಬಸ್ ಮಂಜೂರಾಗಿದೆ. 65 ಜೆನರ್ಮ್ ಬಸ್ಸುಗಳು ಮಾತ್ರ ಬಂದಿವೆ. ಈ ಪೈಕಿ 36 ಬಸ್ಸುಗಳು ಶಿವಮೊಗ್ಗ ನಗರದೊಳಗೆ (city bus) ಸಂಚರಿಸಬೇಕಿತ್ತು. ಆದರೆ ಈ ಬಸ್ಸುಗಳು ಪಾಲಿಕೆ ವ್ಯಾಪ್ತಿಯೊಳಗೆ ಸಂಚರಿಸುವ ಬದಲು ಹೊರಭಾಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದು ಕಾನೂನು ಬಾಹಿರವಾಗಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದ ಆಟೋ ಚಾಲಕರಿಗೆ ಪೊಲೀಸರಿಂದ 8 ಖಡಕ್ ಸೂಚನೆ

POINT%202ನಗರ ವ್ಯಾಪ್ತಿಯಲ್ಲಿ ಜೆನರ್ಮ್ ಬಸ್ಸುಗಳು ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು ಆರ್.ಟಿ.ಒ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಈತನಕ ಈ ಬಸ್ಸುಗಳಿಗೆ ಅವಕಾಶ ನೀಡಿಲ್ಲ. ಜೆನರ್ಮ್ ಬಸ್ಸುಗಳ ಫುಟ್ ಬೋರ್ಡ್ ಕೆಳಗಿದೆ. ಹಿರಿಯ ನಾಗರಿಕರು ಸುಲಭವಾಗಿ ಹತ್ತಿ, ಇಳಿಯಬುದಾಗಿದೆ. ಆದ್ದರಿಂದ ನಗರ ವ್ಯಾಪ್ತಿಯಲ್ಲಿ ಜೆನರ್ಮ್ ಬಸ್ಸುಗಳ ಓಡಾಟಕ್ಕೆ ವ್ಯವಸ್ಥೆ ಮಾಡಬೇಕು.

POINT%203ರೈಲ್ವೆ ನಿಲ್ದಾಣದಿಂದ ನಗರದ ವಿವಿಧೆಡೆಗೆ ತೆರಳಲು ಆಟೋಗಳಲ್ಲಿ ದುಬಾರಿ ದರ ವಿಧಿಸಲಾಗುತ್ತಿದೆ. ಆದ್ದರಿಂದ ಶಿವಮೊಗ್ಗ ನಗರಕ್ಕೆ ರೈಲುಗಳು ಬಂದಾಗ ಮತ್ತು ರೈಲುಗಳು ಹೊರಡುವ ಸಮಯಕ್ಕೆ ಬಸ್ಸುಗಳ ವ್ಯವಸ್ಥೆ ಬೇಕಿದೆ. ಈ ಬಸ್ಸುಗಳು 35 ವಾರ್ಡುಗಳನ್ನು ಸಂಪರ್ಕಿಸುವಂತಿರಬೇಕು. ಎಲ್ಲೆಡೆಯಿಂದ ರೈಲ್ವೆ ನಿಲ್ದಾಣಕ್ಕೆ ಜನರು ಬಂದು ಹೋಗಲು ಅನುಕೂಲವಾಗಲಿದೆ.

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದಲ್ಲಿ ಆಟೋ ಪ್ರಯಾಣ ದರ ಹೆಚ್ಚಳಕ್ಕೆ ನಿರ್ಧಾರ, ಮೀಟರ್ ಬಳಕೆ ಕಡ್ಡಾಯಕ್ಕೆ ಗಡುವು ಫಿಕ್ಸ್

Anna Hajaare Horata samithi in Shimoga

ಅಣ್ಣಾ ಹಜಾರೆ ಹೋರಾಟ ಸಮಿತಿಯ ಅಧ್ಯಕ್ಷ ಡಾ. ಬಿ.ಎಂ.ಚಿಕ್ಕಸ್ವಾಮಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಕಸೆಟ್ಟಿ, ಕಾರ್ಯದರ್ಶಿ ಸುಬ್ರಹ್ಮಣ್ಯ, ಸಹ ಕಾರ್ಯದರ್ಶಿ ಆರ್.ಶ್ರೀಕಾಂತ್ ಸೇರಿದಂತೆ ಹಲವರು ಈ ಸಂದರ್ಭ ಇದ್ದರು.

Shimoga Nanjappa HOspital

ADVERTISEMENT (city bus)

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment