ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 9 NOVEMBER 2022
SHIMOGA | 8 ಕೆ.ಜಿ ಚಿನ್ನ (gold scam) ಸಿಕ್ಕಿದ್ದು 20 ಲಕ್ಷ ರೂ.ಗೆ ಅದನ್ನು ಮಾರಾಟ ಮಾಡುತ್ತಿರುವುದಾಗಿ ನಂಬಿಸಿ ದಂಪತಿಗೆ ವಂಚಿಸಲಾಗಿದೆ. ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ ಜಿಲ್ಲೆಯ ಸದಾಶಿವಪ್ಪ ಮತ್ತು ಅವರ ಪತ್ನಿಗೆ ನಾಗರಾಜ ಎಂಬಾತ ವಂಚಿಸಿದ್ದಾನೆ.
ವಂಚನೆ ಮಾಡಿದ್ದು ಹೇಗೆ? (gold scam)
ನಾಗರಾಜ ಎಂಬಾತ ಬಾಗಲಕೋಟೆಯ ಸದಶಿವಪ್ಪ ಅವರಿಗೆ ಫೋನ್ ಮಾಡಿ, ತಮ್ಮ ಅಜ್ಜಿಗೆ 8 ಕೆ.ಜಿ ಬಂಗಾರದ ನಾಣ್ಯಗಳು ಸಿಕ್ಕಿವೆ. ಅವುಗಳನ್ನು ಕೇವಲ 20 ಲಕ್ಷ ರೂ.ಗೆ ಮಾರಾಟ ಮಾಡುತ್ತಿರುವುದಾಗಿ ನಂಬಿಸಿದ್ದಾನೆ. ಇದನ್ನು ನಂಬಿದ ಸದಾಶಿವಪ್ಪ ಮತ್ತು ಅವರ ಪತ್ನಿ ನಾಗರಾಜ ಹೇಳಿದಂತೆ ಆಗಸ್ಟ್ 15ರಂದು ದಾನವಾಡಿ ಗೇಟ್ ಬಳಿ ಬಂದಿದ್ದಾರೆ. ಮೊದಲಿಗೆ ಎರಡು ಚಿನ್ನದ ನಾಣ್ಯವನ್ನು ಕೊಟ್ಟು ಪರೀಕ್ಷಿಸುವಂತೆ ನಾಗರಾಜ ತಿಳಿಸಿದ್ದ. ದಂಪತಿ ನಾಣ್ಯಗಳನ್ನು ಕೊಂಡೊಯ್ದು ಪರೀಕ್ಷಿಸಿದಾಗ ಅವು ಅಸಲಿ ಚಿನ್ನ ಅನ್ನುವುದು ಗೊತ್ತಾಗಿದೆ.
ಲಕ್ಷ ಲಕ್ಷ ಹಣದ ಜೊತೆ ಬಂದರು (gold scam)
8 ಕೆ.ಜಿ. ಚಿನ್ನ ಖರೀದಿಗಾಗಿ ದಂಪತಿ ತಮ್ಮ ಜಮೀನು ಮಾರಾಟ ಮಾಡಿ, 20 ಲಕ್ಷ ರೂ. ಹಣ ಹೊಂದಿಸಿದ್ದರು. ಆಗಸ್ಟ್ 26ರಂದು ಹಣದೊಂದಿಗೆ ದಂಪತಿ ಮರಳಿದ್ದರು. ನಾಗರಾಜ ಮತ್ತು ಮಂಜುನಾಥ ಎಂಬುವವರು ದಂಪತಿಯನ್ನು ಮಾತನಾಡಿಸಿ 4-5 ನಕಲಿ ಚಿನ್ನದ ನಾಣ್ಯವನ್ನು ದಂಪತಿ ಕೈಗಿಟ್ಟಿದ್ದಾರೆ. ಉಳಿದ ನಾಣ್ಯಗಳನ್ನು ತರುವುದಾಗಿ ತಿಳಿಸಿ ಹಣ ಪಡೆದು ತೆರಳಿದ್ದಾರೆ. ಬಹು ಹೊತ್ತಿನ ತನಕ ನಾಗರಾಜ ಮತ್ತು ಮಂಜುನಾಥ ಹಿಂತಿರುಗಲಿಲ್ಲ. ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿತ್ತು. ಆಗ ಸದಾಶಿವಪ್ಪ ದಂಪತಿಗೆ ವಂಚನೆಗೊಳಗಾಗಿರುವುದು ಗೊತ್ತಾಗಿದೆ.
ನಾಗರಾಜ ಪರಿಚಯ ಆಗಿದ್ದು ಹೇಗೆ?
ಸದಶಿವಪ್ಪ ಅವರ ಕಾರಿನಲ್ಲಿ ಒಮ್ಮೆ ಸ್ನೇಹಿತರ ಜೊತೆಗೂಡಿ ನಾಗರಾಜ ಶ್ರೀಶೈಲಕ್ಕೆ ತೆರಳಿದ್ದರು. ಆಗ ಸದಾಶಿವಪ್ಪ ಅವರ ಕಾರಿನ ಚಾಲಕನಿಗೆ ನಾಗರಾಜ ಪರಿಚಯವಾಗಿದ್ದ. ಆನಂತರ ಸದಾಶಿವಪ್ಪ ಅವರನ್ನು ಪರಿಚಯ ಮಾಡಿಕೊಂಡು, ಆಗಾಗ ಕರೆ ಮಾಡುತ್ತಿದ್ದ. ವಿಶ್ವಾಸ ಗಳಿಸಿದ ಬಳಿಕ ತನ್ನ ಅಜ್ಜಿಗೆ ಚಿನ್ನದ ನಾಣ್ಯಗಳು ಸಿಕ್ಕಿವೆ ಎಂದು ನಂಬಿಸಿದ್ದ.
ಕ್ಲಿಕ್ ಮಾಡಿ ಇದನ್ನೂ ಓದಿ | ಹಾಲ್ ಟಿಕೆಟ್ ನಲ್ಲಿ ಸನ್ನಿ ಲಿಯೋನ್ ಫೋಟೊ, ಶಿವಮೊಗ್ಗದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಕೇಸ್
ಚಿನ್ನದ ನಾಣ್ಯಗಳನ್ನು ಕೊಡುವುದಾಗಿ ನಂಬಿಸಿ ವಂಚಿಸಿದ ನಾಗರಾಜ ಮತ್ತು ಮಂಜುನಾಥನ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















