ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 4 DECEMBER 2022
ಶಿವಮೊಗ್ಗ : ಜಿಲ್ಲೆಯ ಮತ್ತಿಬ್ಬರು ನಾಯಕರು ಇವತ್ತು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಶಿವಮೊಗ್ಗದ ಮಕ್ಕಳ ತಜ್ಞ ಡಾ. ಧನಂಜಯ ಸರ್ಜಿ ಮತ್ತು ಮಾಜಿ ಸಂಸದ ಕೆ.ಜಿ.ಶಿವಪ್ಪ ಅವರ ಪುತ್ರ ಸಾಗರದ ಕೆ.ಎಸ್.ಪ್ರಶಾಂತ್ ಅವರು ಪಕ್ಷ (party joining) ಸೇರ್ಪಡೆಯಾದರು.
ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಇಬ್ಬರು ಬಿಜೆಪಿಗೆ ಸೇರ್ಪಡೆಯಾದರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಆಯನೂರು ಮಂಜುನಾಥ್, ಡಿ.ಎಸ್.ಅರುಣ್ ಅವರು ಬಿಜೆಪಿ ಶಾಲು ಹೊದೆಸಿ ಡಾ. ಧನಂಜಯನ ಸರ್ಜಿ ಮತ್ತು ಪ್ರಶಾಂತ್ ಅವರನ್ನು ಬಿಜೆಪಿಗೆ (party joining) ಸೇರಿಸಿಕೊಂಡರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾರೆಲ್ಲ ಏನೇನು ಹೇಳಿದರು?
ಇದೆ ವೇಳೆ ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆಗೊಳಿಸಿ ಎಂದು ಗಾಂಧೀಜಿ ಅವರು ತಿಳಿಸಿದ್ದರು. ಸ್ವಾರ್ಥಿಗಳು ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಿಡಿಯಲಿದ್ದಾರೆ ಎಂಬುದು ಅವರಿಗೆ ಮೊದಲೆ ಗೊತ್ತಾಗಿತ್ತು. ಈಗ ಕಾಂಗ್ರೆಸ್ ಪಕ್ಷದ ದುರಾಡಳಿ, ಧರ್ಮಾಧಾರಿತ ರಾಜಕಾರಣ ಜನರಿಗೆ ಅರ್ಥವಾಗಿದೆ. ಹಾಗಾಗಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗುತ್ತಿದೆ. ಡಾ. ಧನಂಜಯ ಸರ್ಜಿ ಮತ್ತು ಪ್ರಶಾಂತ್ ಅವರಂತಹ ವಿದ್ಯಾವಂತರು ಕೂಡ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಡಾ. ಧನಂಜಯ ಸರ್ಜಿ ಮತ್ತು ಪ್ರಶಾಂತ್ ಅವರ ಸೇರ್ಪಡೆಯಿಂದ ಪಕ್ಷದ ಶಿಕ್ತಿ ಹೆಚ್ಚಾಗಿದೆ. ಜವಾಬ್ದಾರಿ ದುಪ್ಪಟ್ಟಾಗಿದೆ. ಎಲ್ಲರು ಒಗ್ಗೂಡಿ ಶಿವಮೊಗ್ಗವನ್ನು ಮಾದರಿ ಜಿಲ್ಲೆ ಮಾಡೋಣ ಎಂದರು. (party joining)
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಡಾ. ಧನಂಜಯ ಸರ್ಜಿ ಅವರು, ಆರ್.ಎಸ್.ಎಸ್ ಪ್ರಮುಖರ ಗರಡಿಯಲ್ಲಿ ಬೆಳೆದಿದ್ದೇನೆ. ಶಿಸ್ತು, ಸಂಸ್ಕಾರ, ಉದಾರತೆಯನ್ನು ಸಂಘಟನೆ ಕಲಿಸಿದೆ. ಬಿಜೆಪಿಯಲ್ಲಿಯು ಶಿಸ್ತು, ಉದಾರತೆ ಇದೆ. ಹಾಗಾಗಿ ಪಕ್ಷ ಸೇರ್ಪಡೆಯಾಗಿದ್ದೇನೆ. ಪಕ್ಷ ಯಾವುದೆ ಜವಾಬ್ದಾರಿ ವಹಿಸಿದರು ನಿಷ್ಠೆಯಿಂದ ಮಾಡುತ್ತೇನೆ ಎಂದರು.
ಕೆ.ಎಸ್.ಪ್ರಶಾಂತ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ, ಯುವಕರನ್ನು ಮುಂದೆ ತರುವ ಪ್ರಯತ್ನವಾಗುತ್ತಿಲ್ಲ. ಇದೆ ಕಾರಣಕ್ಕೆ ಪ್ರತ್ಯೇಕ ವೇದಿಕೆ ಸೃಷ್ಟಿಸಿಕೊಂಡು ಉದ್ಯೋಗ ಕೊಡಿಸುವ ಪ್ರಯತ್ನ ಮಾಡಿದ್ದೆವು. ಬಜರಂಗದಳ ಕಾರ್ಯಕರ್ತರು ಈ ಮುಂಚಿನಿಂದಲು ಪರಿಚಯವಿದ್ದರು. ಅವರಿಂದ ಸಂಘದ ಪರಿಚಯವಾಯಿತು. ಮನ ಪರಿವರ್ತನೆಯಾಗಿ ಬಿಜೆಪಿಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದೇನೆ ಎಂದರು.
ಇದೆ ವೇಳೆ ಡಾ.ಧನಂಜಯ ಸರ್ಜಿ ಮತ್ತು ಕೆ.ಎಸ್.ಪ್ರಶಾಂತ್ ಅವರ ಸಹವರ್ತಿಗಳು, ಬೆಂಬಲಿಗರು ಬಿಜೆಪಿ ಸೇರ್ಪಡೆಯಾದರು. ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು.
ALSO READ – ಶರಾವತಿ ಹಿನ್ನೀರು ಭಾಗದಲ್ಲಿ ಸಾಲು ಸಾಲು ಕಳ್ಳತನ, ರಸ್ತೆ ತಡೆ ಮಾಡಿ ಜನರ ಆಕ್ರೋಶ