ತುಂಗಾ ನದಿ ತೀರದಲ್ಲಿ ಸಿಡಿಮದ್ದು ಪ್ರದರ್ಶನ, ಜನರ ಆಕ್ಷೇಪ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 15 DECEMBER 2022

ತೀರ್ಥಹಳ್ಳಿ : ತುಂಗಾ ನದಿ ತೀರದಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲಾಗಿದ್ದು, ದೀಪಾಲಂಕಾರ, ಸಿಡಿಮದ್ದು ಪ್ರದರ್ಶಿಸಲಾಗಿದೆ. ಯಾವುದೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೆ ಸಿಡಿಮದ್ದು (crackers burst) ಪ್ರದರ್ಶಿಸಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.

Shimoga Nanjappa Hospital

ಮಂಗಳವಾರ ರಾತ್ರಿ ಕುರುವಳ್ಳಿಯ ಮರಳು ಗುಡ್ಡೆಯ ಮೇಲೆ ಕಾರ್ಯಕ್ರಮ ನಡೆದಿದೆ. ದೊಡ್ಡಮಟ್ಟದಲ್ಲಿ ಸಿಡಿಮದ್ದು (crackers burst) ಸಿಡಿಸಲಾಗಿದೆ. ಯಾವುದೆ ಸುರಕ್ಷಿತ ಕ್ರಮಗಳನ್ನು ಅನುಸರಿಸದೆ ಸಿಡಿಮದ್ದು ಸ್ಪೋಟಿಸಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ – ಮೈಸೂರಿನಿಂದ ಐರಾವತ ಬಸ್ಸಲ್ಲಿ ಬಂದ ಇಂಜಿನಿಯರ್, ಶಿವಮೊಗ್ಗದಲ್ಲಿ ಇಳಿಯುವಾಗ ಕಾದಿತ್ತು ಶಾಕ್

ಎಳ್ಳಮಾವಾಸ್ಯೆ ಸಂದರ್ಭ ಸಿಡಿಮದ್ದು ಪ್ರದರ್ಶನಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಅನುಮತಿ ಪಡೆದು, ಸುರಕ್ಷಿತ ಕ್ರಮ ಅನುಸರಿಸಲಾಗುತ್ತದೆ. ಆದರೆ ಮಂಗಳವಾರ ನಡೆದ ಘಟನೆಯಲ್ಲಿ ಯಾವುದೆ ಸುರಕ್ಷಿತ ಕ್ರಮಗಳಿರಲಿಲ್ಲ. ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರು ಅಕ್ಕಪಕ್ಕದ ಮನೆಗಳು, ಶೆಡ್, ಸಾರ್ವಜನಿಕರಿಗೆ ಹಾನಿಯಾಗುತ್ತಿತ್ತು ಎಂದು ಆರೋಪಿಸಲಾಗಿದೆ.

Shimoga Nanjappa Hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 15, 2022

Leave a Comment