ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 DECEMBER 2022
ಶಿವಮೊಗ್ಗ : ಕೆಲಸಕ್ಕೆ ಹೊರಡಲು ಬೆಳಗಿನ ಜಾವ ಮನೆಯಿಂದ ಹೊರ ಬಂದ ಯುವಕನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆತನ ಬಳಿ ಇದ್ದ ಮೊಬೈಲ್ ಕಸಿದು (mobile phone) ಪರಾರಿಯಾಗಿದ್ದರು. ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಾನಗರ ಪಾಲಿಕೆ ನೀರು ಗಂಟಿಯಾಗಿ ಕೆಲಸ ಮಾಡುತ್ತಿರುವ ತೇಜೇಶ್ ಎಂಬುವವರ ಮೇಲೆ ದಾಳಿ ನಡೆಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
(mobile phone)
ಬೆಳಗಿನ ಜಾವ ನಡೆದ ಘಟನೆ
ತೇಜೇಶ್ ಅವರು ಸೀಗೆಹಟ್ಟಿ ಭಾಗದಲ್ಲಿ ನೀರು ಗಂಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಭಾಗದ ಎಲ್ಲಾ ಬೀದಿಗಳಿಗೆ ನೀರು ಬಿಡುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕೆಲಸಕ್ಕೆ ಹೊರಡಲು ಬೆಳಗಿನ ಜಾವ 5 ಗಂಟೆ ಹೊತ್ತಿಗೆ ಮನೆಯಿಂದ ಹೊರ ಬಂದು, ಬೈಕ್ ಶುರು ಮಾಡುವ ಹೊತ್ತಿಗೆ ದುಷ್ಕರ್ಮಿಗಳು ಹಿಂಬದಿಯಿಂದ ಬಂದು ಹಿಡಿದುಕೊಂಡಿದ್ದಾರೆ. ಹಣ, ಮೊಬೈಲ್ ಏನಿದ್ದರು ಕೊಡುವಂತೆ ಬೆದರಿಸಿದ್ದಾರೆ. ತೇಜೇಶ್ ಒಪ್ಪದಿದ್ದಾಗ ಹೊಡೆಯಲು ಆರಂಭಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಶಬ್ದ ಕೇಳಿ ತೇಜೇಶ್ ಪೋಷಕರು ಮನೆಯಿಂದ ಹೊರ ಬಂದಿದ್ದಾರೆ. ಆಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ವೇಳೆ ತೇಜೇಶ್ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನು ಕಸಿದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಪ್ರಾಪರ್ಟಿ ರಿಟರ್ನ್ ಪರೇಡ್, ವಾರಸುದಾರರಿಗೆ ಮರಳಿತು ಕೋಟಿ ಕೋಟಿಯ ವಸ್ತುಗಳು
ಘಟನೆ ಸಂಬಂದ ಆರೋಪಿಗಳನ್ನು ಬಚ್ಚಾ ಫೈಸಲ್ ಮತ್ತು ಅಫ್ತಾಬ್ ಕುಯ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.