ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 19 JANUARY 2023
SHIMOGA | ಕಾಮಗಾರಿಯ ಹಿನ್ನೆಲೆ ಮೈಸೂರು – ಶಿವಮೊಗ್ಗ ಟೌನ್ ಎಕ್ಸ್ ಪ್ರೆಸ್ ರೈಲು ಮತ್ತು ಕುವೆಂಪು ಎಕ್ಸ್ ಪ್ರೆಸ್ ರೈಲನ್ನ (Mysore Train) ನಾಲ್ಕು ದಿನ ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದರಿಂದ ಈ ಎರಡು ರೈಲುಗಳು ನಾಲ್ಕು ದಿನ ನಿಗದಿಗಿಂತಲು ತಡವಾಗಿ ನಿಲ್ದಾಣ ತಲುಪುಲಿವೆ.
ನಿಯಂತ್ರಣಕ್ಕೆ ಕಾರಣವೇನು?
ಹೊಳೆನರಸೀಪುರ ನಿಲ್ದಾಣದ ಯಾರ್ಡ್‌ನಲ್ಲಿ ಇಂಜಿನಿಯರಿಂಗ್ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆ ಲೈನ್ ಬ್ಲಾಕ್ ಇರಲಿದೆ. ಹಾಗಾಗಿ ಜನವರಿ 20, 21, 23 ಮತ್ತು 25ರಂದು ಎರಡು ರೈಲುಗಳನ್ನು (Mysore Train) ಮಾರ್ಗ ಮಧ್ಯೆ ನಿಯಂತ್ರಿಸಲಾತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಎಷ್ಟು ಹೊತ್ತು ನಿಯಂತ್ರಣ?
ಮೈಸೂರು – ಶಿವಮೊಗ್ಗ ಟೌನ್ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16225) ರೈಲನ್ನು ಈ ನಾಲ್ಕು ದಿನ ಮಾರ್ಗ ಮಧ್ಯೆ 90 ನಿಮಿಷ ನಿಯಂತ್ರಿಸಲಾಗುತ್ತಿದೆ.
ಇನ್ನು, ತಾಳಗುಪ್ಪ – ಮೈಸೂರು ಕುವೆಂಪು ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16221) ರೈಲನ್ನು ನಾಲ್ಕು ದಿನ ಮಾರ್ಗ ಮಧ್ಯೆ 30 ನಿಮಿಷ ನಿಯಂತ್ರಿಸಲಾಗುತ್ತದೆ ಎಂದು ರೈಲ್ವೆ ಇಲಾಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ – ಶಿವಮೊಗ್ಗ ನಿಲ್ದಾಣದಲ್ಲಿ ನೀರಿನ ಬಾಟಲಿ ಕೊಂಡು ಬಸ್ ಹತ್ತಿದ ವಿದ್ಯಾರ್ಥಿನಿಗೆ ಕಾದಿತ್ತು ಆಘಾತ