SHIVAMOGGA LIVE NEWS | 24 JANUARY 2023
SHIMOGA | ಶಿವಮೊಗ್ಗದ ಯುವಕರಿಗೆ ಕೆಲಸ (JOBS) ಕೊಡುವುದಿದ್ದರೆ ಉಚಿತ ಜಾಹೀರಾತು ಪ್ರಕಟಿಸುವ ಶಿವಮೊಗ್ಗ ಲೈವ್.ಕಾಂ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ತಮ್ಮ ಸಂಸ್ಥೆ, ಕಂಪನಿಗೆಳಿಗೆ ಉದ್ಯೋಗಿಗಳ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಅವುಗಳ ಪಟ್ಟಿ ಇಲ್ಲಿದೆ.
ಗಮನಕ್ಕೆ : ಕೆಳಗಿರುವ ಸಂಸ್ಥೆಗಳು ಉದ್ಯೋಗಿಗಳಿಗೆ ಒಡ್ಡುವ ಯಾವುದೆ ಷರತ್ತುಗಳಿಗು ಶಿವಮೊಗ್ಗ ಲೈವ್.ಕಾಂ ಸಂಸ್ಥೆಗು ಯಾವುದೆ ಸಂಬಂಧವಿಲ್ಲ. ಉದ್ಯೋಗದ (JOBS) ಮಾಹಿತಿ ನೀಡುವುದಷ್ಟೆ ನಮ್ಮ ಜವಾಬ್ದಾರಿ. ಹುದ್ದೆಗಳು, ವೇತನ ಸೇರಿದಂತೆ ಉಳಿದ್ಯಾವುದೆ ಷರತ್ತುಗಳು ನಮಗೆ ಸಂಬಂಧಿಸಿದ್ದಲ್ಲ. ನಾವು ಯಾವುದೆ ಹುದ್ದೆಗಳಿಗೆ ಶಿಫಾರಸು (INFLUENCE) ಮಾಡುವುದಿಲ್ಲ.
ಉದ್ಯೋಗ 1 : ಮಹಾಂತ್ ಮೋಟರ್ಸ್
ಶಿವಮೊಗ್ಗದ ಗಾಡಿಕೊಪ್ಪದಲ್ಲಿರುವ ಮಹಾಂತ್ ಮೋಟರ್ಸ್ ಮಹೇಂದ್ರ ಶೋ ರೂಂನಲ್ಲಿ ವಿವಿಧ ಹುದ್ದೆಗಳು ಖಾಲಿ ಇದೆ. ಅದರ ಜಾಹೀರಾತು ಈ ಕೆಳಗಿನಂತಿದೆ. ಆಸಕ್ತರು ಆರ್ಜಿ ಸಲ್ಲಿಸಬಹುದು. ಇಲ್ಲಿ ಅರ್ಜಿ ಸಲ್ಲಿಸಲು 9148018778 ಅಥವಾ 8147821066 ನಂಬರ್ ಸಂಪರ್ಕಿಸಬಹುದು.
ಉದ್ಯೋಗ 2 : ಬ್ಯಾಂಕ್ ಅಸೋಸಿಯೇಟ್
ಶಿವಮೊಗ್ಗದ ವಿನೋಬನಗರ ಪೊಲೀಸ್ ಚೌಕಿಯಲ್ಲಿರುವ ಈಸಿ ಕ್ಲಿಕ್ ಸಲ್ಯುಷನ್ ಸಂಸ್ಥೆಯಲ್ಲಿ ಉದ್ಯೋಗವಕಾಶವಿದೆ. ಆಸಕ್ತರು 9986593375 ಅಥವಾ 7204099320 ಅಥವಾ 7022522383. ಈ ಸಂಬಂದ ಜಾಹೀರಾತು ಇಲ್ಲಿದೆ.
ಉದ್ಯೋಗ 3 : ಫ್ರೀಡಂ ಆಪ್
ಫ್ರೀಡಂ ಆಪ್ ಸಂಸ್ಥೆಯಲ್ಲಿ ಉದ್ಯೋಗವಕಾಶವಿದೆ. ವರ್ಕ್ ಫ್ರಮ್ ಹೋಂ ಅವಕಾಶವು ಇದೆ. ಅಸಕ್ತರು 8550087637 ಮೊಬೈಲ್ ನಂಬರ್ ಸಂಪರ್ಕಿಸಬಹುದು. ಇದರ ಜಾಹೀರಾತು ಕೆಳಗಿದೆ.
ಉದ್ಯೋಗ 4 : ಓಂಕಾರ್ ಅಗ್ರಿಟೆಕ್
ಶಿವಮೊಗ್ಗದ ಸಾಗರ ರಸ್ತೆಯ ಓಂಕಾರ್ ಅಗ್ರಿಟೆಕ್ ಸಂಸ್ಥೆಯಲ್ಲಿ ಉದ್ಯೋಗವಕಾಶವಿದೆ.
1) ಸೇಲ್ಸ್ ಎಕ್ಸಿಕ್ಯೂಟಿವ್ : 8 ಹುದ್ದೆಗಳು ಖಾಲಿ ಇದೆ. ಟ್ರಾಕ್ಟರ್ ಅಥವಾ ಇತರೆ ವಲಯದಲ್ಲಿ ಅನುಭವ ಬೇಕು. ಭದ್ರಾವತಿ, ಸಾಗರ, ಹೊಸನಗರ, ಶಿಕಾರಿಪುರ, ಸೊರಬ, ತೀರ್ಥಹಳ್ಳಿಯಲ್ಲಿ ಕೆಲಸ. ಎಸ್ಸೆಸ್ಸೆಲ್ಸಿ ಅಥವಾ ಯಾವುದೆ ಪದವಿ ಹೊಂದಿರಬೇಕು. ಕಡ್ಡಾಯವಾಗಿ ದ್ವಿಚಕ್ರ ವಾಹನ ಇರಬೇಕು. 12 ಸಾವಿರದಿಂದ 15 ಸಾವಿರದವರೆಗೆ ವೇತನ ಇರಲಿದೆ.
2) ಮೆಕಾನಿಕ್ ಹುದ್ದೆ : 2 ಹುದ್ದೆಗಳು ಖಾಲಿ ಇದೆ. ಟ್ರಾಕ್ಟರ್ ಅಥವಾ ಇತರೆ ವಲಯದಲ್ಲಿ ಅನುಭವ ಬೇಕು. 12 ಸಾವಿರದಿಂದ 15 ಸಾವಿರದವರೆಗೆ ಸಂಬಳ. ಶಿವಮೊಗ್ಗ, ಶಿಕಾರಿಪುರದಲ್ಲಿ ಕೆಲಸ.
ಆಸಕ್ತರು 9353645369 ಅಥವಾ 9731094746 ಸಂಪರ್ಕಿಸಬಹುದು.
ಉದ್ಯೋಗ 5 : ಚಂದ್ರಗಿರಿ ಆಸ್ಪತ್ರೆ
ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ಚಂದ್ರಗಿರಿ ಆಸ್ಪತ್ರೆಯಲ್ಲಿ ಕೆಲಸ ಇದೆ. ಆಸಕ್ತರು 9019927517 ಮೊಬೈಲ್ ನಂಬರ್ ಸಂಪರ್ಕಿಸಬಹುದು. ಇದರ ಜಾಹೀರಾತು ಕೆಳಗಿದೆ.
ಉದ್ಯೋಗ 6 : ಕೆಂಪೇಗೌಡ ಸಿಟಿ ಮೋಟರ್ಸ್
ಕೆಂಪೇಗೌಡ ಸಿಟಿ ಮೋಟರ್ಸ್ ಸಂಸ್ಥೆಯಲ್ಲಿ ಕೆಲಸ ಖಾಲಿ ಇದೆ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಅವಕಾಶ. ಮಹಿಳೆಯರಿಗೆ ಮಾತ್ರ ಕೆಲಸ. ಬಿಲ್ಲಿಂಗ್ ಕೆಲಸ. ಆಸಕ್ತರು 9945340785 ಸಂಪರ್ಕಿಸಬಹುದು.
ಇದನ್ನೂ ಓದಿ – OLXನಲ್ಲಿ ಖರೀದಿಸುವಾಗ ಜೋಕೆ, ಶಿವಮೊಗ್ಗದ ಬ್ಯಾಂಕ್ ಉದ್ಯೋಗಿಗೆ ಲಕ್ಷ ಲಕ್ಷ ವಂಚನೆ, ಹೇಗಾಯ್ತು ಮೋಸ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200