SHIVAMOGGA LIVE NEWS | 3 FEBRUARY 2023
HOSANAGARA : ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಲ್ಲಿ ಮಂಗನ ಕಾಯಿಲೆಯ (Monkey Fever) ಲಕ್ಷಣ ಕಂಡು ಬಂದಿದೆ. ಅವರಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೊಸನಗರ ತಾಲೂಕು ಗರ್ತಿಕೆರೆ ಸಮೀಪದ ಕಮ್ಮಚ್ಚಿ ಗ್ರಾಮದ ರಾಮಪ್ಪ (45) ಎಂಬುವವರಲ್ಲಿ ಕೆ.ಎಫ್.ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಲಕ್ಷಣ ಕಂಡು ಬಂದಿದೆ. ಕೆಲವು ದಿನದಿಂದ ಜ್ವರದಿಂದ ಬಳಲುತ್ತಿದ್ದ ರಾಮಪ್ಪ ಅವರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಶಿವಮೊಗ್ಗದ ಖಾಸಗಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯಲ್ಲಿ ಇವರಿಗೆ ಕೆ.ಎಫ್.ಡಿ ಇರುವುದು ದೃಢವಾಗಿಲ್ಲ. ಆದರೆ ಐಜಿಎಂ ಎಲಿಸಾ ಪರೀಕ್ಷೆಯಲ್ಲಿ ಮಂಗನ ಕಾಯಿಲೆ ಲಕ್ಷಣ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ನಡೆಸಲಾಗುತ್ತಿದೆ.
ಇನ್ನು, ರಾಮಪ್ಪ ಅವರಲ್ಲಿ ಕೆ.ಎಫ್.ಡಿ ಲಕ್ಷಣ ಕಂಡು ಬಂದ ಹಿನ್ನೆಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಜ್ವರದ ಸಮೀಕ್ಷೆ ಆರಂಭಿಸಿದ್ದಾರೆ. ಕಮ್ಮಚ್ಚಿ ಗ್ರಾಮದ ಸುತ್ತಮುತ್ತ 5 ಕಿ.ಮೀ ವ್ಯಾಪ್ತಿಯಲ್ಲಿ ಜ್ವರ ಸಮೀಕ್ಷೆ ನಡೆಸಲಾಗುತ್ತಿದೆ. ಜ್ವರ ಅಥವಾ ಯಾವುದೆ ಕಾಯಿಲೆ ಲಕ್ಷಣ ಕಂಡು ಬಂದರು ಕೂಡಲೆ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಗುತ್ತಿದೆ.
ಇದನ್ನೂ ಓದಿ – ಟ್ರಾಫಿಕ್ ಬಾಕಿ ದಂಡ ಶೇ.50ರಷ್ಟು ರಿಯಾಯಿತಿ, ಯಾರಿಗೆ ಈ ನಿಯಮ ಅನ್ವಯ? ಇಲ್ಲಿದೆ ಡಿಟೇಲ್ಸ್