ಶಿವಮೊಗ್ಗಕ್ಕೆ ಬಂದಿದ್ದು ಸಾಮಾನ್ಯ ವಿಮಾನವಲ್ಲ, ‘ಇಂಡಿಯಾ 1’, ಇದರ ವಿಶೇಷತೆ ಏನು ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 21 FEBRURARY 2023

SHIMOGA : ವಿಮಾನ ನಿಲ್ದಾಣದಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಿದ ವಾಯು ಸೇನೆ ವಿಮಾನಕ್ಕೆ ಇಂಡಿಯಾ 1 ಅನ್ನುವ ಹೆಸರಿದೆ. ಇದು ದೇಶದ ಅತ್ಯಂತ ಪ್ರತಿಷ್ಠಿತ ವಿಮಾನಗಳಲ್ಲಿ ಒಂದು. ಅತ್ಯಂತ ಹೈಟೆಕ್ ಸೌಲಭ್ಯವು ಇದರಲ್ಲಿದೆ. ರಾಷ್ಟ್ರಪತಿ ಮತ್ತು ಪ್ರಧಾನಿ ಮಾತ್ರ ಈ ವಿಮಾನದ (INDIA 1) ಬಳಕೆ ಮಾಡಲಿದ್ದಾರೆ.

First-Flight-landed-in-Shimoga-Airport.

ವಿಮಾನದ ಬಗ್ಗೆ 5 ಪ್ರಮುಖಾಂಶ

POINT 1 : ಬೋಯಿಂಗ್ 737 ವಿಮಾನವನ್ನು ವಾಯು ಸೇನೆ ನಿರ್ವಹಣೆ ಮಾಡುತ್ತಿದೆ. ಇದರ ಪೈಲೆಟ್ ಗಳು ವಾಯು ಸೇನೆಯಲ್ಲಿ ಅತ್ಯಂತ ಕಠಿಣ ತರಬೇತಿ ಪಡೆದಿರುತ್ತಾರೆ. ಸುದೀರ್ಘ ಅವಧಿಯ ವಿಮಾನ ಹಾರಾಟ ಅನುಭವ ಹೊಂದಿರುತ್ತಾರೆ.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಮೊಟ್ಟಮೊದಲ ವಿಮಾನ

POINT 2 : ರಾಷ್ಟ್ರಪತಿ ಮತ್ತು ಪ್ರಧಾನಿ ಅವರು ವಿದೇಶ ಪ್ರವಾಸಕ್ಕೆ ತೆರಳಲು ಏರ್ ಇಂಡಿಯಾ 1 ಎಂಬ ಅತ್ಯಾಧುನಿಕ ವಿಮಾನಗಳಿವೆ. ಭಾರತದ ಒಳಗೆ ಪ್ರವಾಸಕ್ಕೆ ಬೋಯಿಂಗ್ 737 ವಿಮಾನಗಳನ್ನು ಬಳಕೆ ಮಾಡುತ್ತಾರೆ. ಇವತ್ತು ಶಿವಮೊಗ್ಗಕ್ಕೆ ಬಂದಿದ್ದು ಇದೆ ವಿಮಾನ. ರಾಷ್ಟ್ರಪತಿ, ಪ್ರಧಾನಿ ಅವರು ವಿಮಾನದೊಳಗೆ ಕಾಲಿಟ್ಟ ತಕ್ಷಣ ಈ ವಿಮಾನಕ್ಕೆ ಇಂಡಿಯಾ 1 (INDIA 1) ಎಂಬ ಕೋಡ್ ನೇಮ್ ನಿಂದ ಕರೆಯಲಾಗುತ್ತದೆ.

First-Flight-landed-at-Shimoga-Airport-Boeing

ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನಕ್ಕೆ ವಾಟರ್ ಸಲ್ಯೂಟ್, ಏನಿದು?

POINT 3 : ಇಂಡಿಯಾ 1 ವಿಮಾನದ ಕುರಿತು ಯಾವುದೆ ಮಾಹಿತಿ, ಅದರ ಹಾರಾಟದ ಯಾವುದೆ ವಿವರಗಳು ಸೋರಿಕೆಯಾಗದಂತೆ ಹೆಚ್ಚ ನಿಗಾ ವಹಿಸಲಾಗುತ್ತದೆ.

ಇದನ್ನೂ ಓದಿ – ಶಿವಮೊಗ್ಗ ರನ್ ವೇ ಪರೀಕ್ಷಿಸಿದ ವಿಮಾನ, ದೆಹಲಿಯತ್ತ ಪಯಣ, ಹೇಗೆಲ್ಲ ಪರೀಕ್ಷೆ ನಡೆಯಿತು? | VIDEO

POINT 4 :  ಶಿವಮೊಗ್ಗಕ್ಕೆ ಇವತ್ತು ಆಗಮಿಸಿದ್ದ ವಿಮಾನಕ್ಕೆ ವಾಯುಸೇನೆಯು ರಾಜ್ ದೂತ್ ಎಂಬ ಕೋಡ್ ನೇಮ್ ಇಟ್ಟಿದೆ. 16 ವರ್ಷದಿಂದ ಈ ವಿಮಾನ ಕಾರ್ಯಾಚರಣೆ ನಡೆಸುತ್ತಿದೆ.

POINT 5 : ಮೂರು ದಿನದ ಹಿಂದೆ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಇದೆ ವಿಮಾನದಲ್ಲಿ ಮದುರೈ, ಕೊಯಮತ್ತೂರು ಪ್ರವಾಸ ಕೈಗೊಂಡಿದ್ದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment