ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 7 MARCH 2023
SHIMOGA : ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರ ಮಹಿಳಾ ಉದ್ಯೋಗಿಯ ಲ್ಯಾಪ್ ಟಾಪ್ (Laptop theft) ಕಳ್ಳತನವಾಗಿದೆ. ಶೌಚಾಲಯಕ್ಕೆ ಹೋಗಿದ್ದ ವೇಳೆ ಘಟನೆ ಸಂಭವಿಸಿದೆ.

ಬೆಂಗಳೂರು ಕೋರಮಂಗಲದ ಪ್ರೀತಿ ಎಂಬುವವರು ಪತಿ ದೇವೇಂದ್ರ ಅವರೊಂದಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದಾಗ ಘಟನೆ (Laptop theft) ಸಂಭವಿಸಿದೆ.
ಹೇಗಾಯ್ತು ಘಟನೆ?
ಪ್ರೀತಿ, ಪತಿ ದೇವೇಂದ್ರ ಅವರೊಂದಿಗೆ ಸಾಗರದ ಆನಂದಪುರದಲ್ಲಿ ಕ್ಯಾನ್ಸರ್ ಔಷಧಿ ಖರೀದಿಸಲು ಬಂದಿದ್ದರು. ಬೆಂಗಳೂರಿನಿಂದ ಐರಾವತ ಬಸ್ಸಿನಲ್ಲಿ ಬೆಳಗಿನ ಜಾವ 5.30ರ ಹೊತ್ತಿಗೆ ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ಬಸ್ ನಿಲ್ದಾಣದ ಶೌಚಾಲಯಕ್ಕೆ ತೆರಳಿದ್ದರು. ಶೌಚಾಲಯದಲ್ಲಿ ಕೆಲಸ ಮಾಡುವ ಮಹಿಳೆಗೆ ತಿಳಿಸಿ ಬ್ಯಾಗನ್ನು ಇಟ್ಟು ಹೋಗಿದ್ದರು.
ಇದನ್ನೂ ಓದಿ – ಕೆಲಸ ಹುಡುಕುತ್ತಿರುವವರೆ ಹುಷಾರ್, ಕೆಲಸ ಕೊಡುವುದಾಗಿ ಶಿವಮೊಗ್ಗದ ಯುವಕನಿಗೆ ಲಕ್ಷ ಲಕ್ಷ ವಂಚನೆ, ಹೇಗಾಯ್ತು?
ಶೌಚಾಲಯದಿಂದ ಹೊರ ಬಂದು ನೋಡಿದಾಗ ಬ್ಯಾಗ್ ನಾಪತ್ತೆಯಾಗಿತ್ತು. ಮಹಿಳೆಗೆ ವಿಚಾರಿಸಿದಾಗ ತನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಕ್ಯಾನ್ಸರ್ ಔಷಧಿ ತರಬೇಕಿದ್ದರಿಂದ ಪ್ರೀತಿ ಅವರು ತಮ್ಮ ಪತಿಯೊಂದಿಗೆ ಕೂಡಲೆ ಅವರು ಸಾಗರಕ್ಕೆ ಹೊರಟಿದ್ದಾರೆ.
ತಡವಾಗಿ ದೂರು ದಾಖಲು
ಜನವರಿ 8ರಂದು ಘಟನೆ ಸಂಭವಿಸಿತ್ತು. ತಮ್ಮ ಅತ್ತೆಗೆ ತುರ್ತಾಗಿ ಕ್ಯಾನ್ಸರ್ ಔಷಧಿ ನೀಡಬೇಕಿದ್ದರಿಂದ ಕೂಡಲೆ ಅವರು ಸಾಗರಕ್ಕೆ ತೆರಳಿದ್ದು, ಅಲ್ಲಿಂದ ಬೆಂಗಳೂರಿಗೆ ಮರಳಿದ್ದರು. ಮಾ.5ರಂದು ಶಿವಮೊಗ್ಗಕ್ಕೆ ಆಗಮಿಸಿ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬ್ಯಾಗಿನಲ್ಲಿ ಡೆಲ್ ಕಂಪನಿಯ ಲ್ಯಾಪ್ ಟಾಪ್ ಇತ್ತು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
[su_divider text=”Shivamogga Live | Whatsapp7411700200″ divider_color=”#000000″ link_color=”#000000″]
[su_animate type=”bounceInUp”][su_button url=”https://chat.whatsapp.com/Gw9Vd0MvljO9kI4k7LDRmj” target=”blank” style=”glass” background=”#0003ab” color=”#ffffff” size=”6″ radius=”0″ icon=”https://shivamoggalive.com/wp-content/uploads/2022/11/Whatspp-Logo.png”]CLICK HERE TO JOIN SHIVAMOGGA LIVE WHATSAPP GROUP[/su_button][/su_animate]
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















