ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 APRIL 2023
SHIRALAKOPPA : ಏ.1ರಿಂದ ಏ.30ರ ಒಳಗೆ ಆಸ್ತಿ ತೆರಿಗೆ (Property Tax) ಪಾವತಿಸಿದರೆ ಶೇ.5ರಷ್ಟು ವಿನಾಯಿತಿ ನೀಡಲಾಗುತ್ತದೆ. ಆಸ್ತಿ ಮಾಲೀಕರು ಇದರ ಪ್ರಯೋಜನ ಪಡೆಯುವಂತೆ ಶಿರಾಳಕೊಪ್ಪ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2023 – 24ನೇ ಸಾಲಿನ ಆಸ್ತಿ ತೆರಿಗೆಯನ್ನು (Property Tax) ಏ.1 ರಿಂದ ಏ.30 ರವರೆಗೆ ಪಾವತಿಸಿದರೆ ಶೇ.5ರಷ್ಟು ವಿನಾಯಿತು. ಮೇ. 1 ರಿಂದ ಜೂ.30 ರವರೆಗೆ ದಂಡ ರಹಿತವಾಗಿ ಹಾಗೂ ಜು.1 ರಿಂದ ಮಾಸಿಕ ಶೇ.2% ರಂತೆ ದಂಡ ವಿಧಿಸಿ ಪಾವತಿ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಉದ್ಘಾಟನಾ ಕಾರ್ಯಕ್ರಮಕ್ಕೆ ಬಳಕೆಯಾದ KSRTC ಬಸ್ಸುಗಳೆಷ್ಟು? ಅವುಗಳ ಬಾಡಿಗೆ ಕಟ್ಟಿದ್ಯಾರು?
ಕಟ್ಟಡ ಅಥವಾ ಖಾಲಿ ನಿವೇಶನದ ಛಾಯಾಚಿತ್ರ, ಮಾಲೀಕರ ಭಾವಚಿತ್ರ, ಮಾಲೀಕತ್ವದ ದಾಖಲೆ, ಚುನಾವಣಾ ಗುರುತಿನ ಚೀಟಿ, ಇತ್ತೀಚಿನ ವಿದ್ಯುತ್ ಬಿಲ್ ಪ್ರತಿಯನ್ನು ತೆರಿಗೆ ವಿವರ ಪಟ್ಟಿಯೊಂದಿಗೆ ಸಲ್ಲಿಸಬೇಕು. ಇದರಿಂದ ಆಸ್ತಿಯ ಆನ್ ಲೈನ್ ದಾಖಲಾತಿಗೆ ಸಹಕರಿಯಾಗಲಿದೆ ಎಂದು ತಿಳಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422