ಶಿವಮೊಗ್ಗ ಕಾಂಗ್ರೆಸ್‌ ಕಚೇರಿ ಮುಂದೆ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ, ಭಾವುಕರಾದ ಜಿಲ್ಲಾಧ್ಯಕ್ಷ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 16 APRIL 2023

SHIMOGA : ಟಿಕೆಟ್‌ ಕೈ ತಪ್ಪಿದ್ದಕ್ಕೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹೆಚ್‌.ಎಸ್.ಸುಂದರೇಶ್‌ ಅವರ ಬೆಂಬಲಿಗರು ಅವರ ಕಾರಿಗೆ ಮುತ್ತಿಗೆ ಹಾಕಿದರು. ಕಾಂಗ್ರೆಸ್‌ ಕಚೇರಿ ಮುಂದೆ ಟೈರ್‌ಗೆ ಬೆಂಕಿ ಹಚ್ಚಿ ಹೈಕಮಾಂಡ್‌ ವಿರುದ್ಧ ಘೋಷಣೆ (Protest) ಕೂಗಿದರು. ಈ ವೇಳೆ ಸುಂದರೇಶ್‌ ಅವರು ಭಾವುಕರಾದರು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Protest-by-Sundresh-Followers-in-Shimoga

ಹೆಚ್‌.ಎಸ್.ಸುಂದರೇಶ್‌ ಅವರು ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್‌ ಕೈ ತಪ್ಪಿದ್ದರಿಂದ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ. ಇವತ್ತು ಸುಂದರೇಶ್‌ ಅವರು ಕಾಂಗ್ರೆಸ್‌ ಕಚೇರಿಗೆ ಆಗಮಿಸುತ್ತಿದ್ದಂತೆ ಬೆಂಬಲಿಗರು ಅವರ ಕಾರಿಗೆ ಮುತ್ತಿಗೆ (Protest) ಹಾಕಿದರು.

ʼಇಷ್ಟೆಲ್ಲ ಕೆಲಸ ಮಾಡಿದರೂ..ʼ

ʼಇಷ್ಟೆಲ್ಲ ಕೆಲಸ ಮಾಡಿದರೂ ನಿಮಗೆ ಟಿಕೆಟ್‌ ಕೈ ತಪ್ಪಿದೆ. ಸುತ್ತು ಹೋಗಿದ್ದ ಪಕ್ಷಕ್ಕೆ ಜೀವ ತುಂಬಿದ್ದೆ ನೀವು. ಈಗ ನೀವು ಕಾಂಗ್ರೆಸ್‌ ಕಚೇರಿಗೆ ಬರುವುದು ಬೇಡ. ವಾರ್ಡ್‌ಗಳಲ್ಲಿ ನಾವೂ ಕೆಲಸ ಮಾಡುದಿಲ್ಲʼ ಎಂದು ಬೆಂಬಲಿಗರು ಸಿಟ್ಟಾದರು. ಈ ವೇಳೆ ಸುಂದರೇಶ್‌ ಅವರು ಬೆಂಬಲಿಗರನ್ನು ಸಮಾಧಾನಪಡಿಸಲು ಮುಂದಾದರು. ಇದ್ಯಾವುದಕ್ಕೂ ಬೆಂಬಲಿಗರು ತಣ್ಣಗಾಗದಿದ್ದರಿಂದ ಸುಂದರೇಶ್‌ ಅವರು ಭಾವುಕರಾದರು.

HS sundaresh followers protest in Shimoga

ಟೈರ್‌ಗೆ ಬೆಂಕಿ ಹಚ್ಚಿದರು

ಇದೇ ವೇಳೆ ಆಕ್ರೋಶಗೊಂಡ ಸುಂದರೇಶ್‌ ಅವರ ಬೆಂಬಲಿಗರು ಕಾಂಗ್ರೆಸ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಟೈರ್‌ಗೆ ಬೆಂಕಿ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ನಾಯಕರ ವಿರುದ್ಧ ಘೋಷಣೆ ಕೂಗಿದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಿಡಿದೆದ್ದ ಬೆಂಬಲಿಗರು, ಮಾಜಿ ಶಾಸಕರ ಮನೆ ಬಳಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ

shivamogga live news whatsappa number

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment