ಚುನಾವಣೆ ಹಿನ್ನೆಲೆ, ಜನ ಎಷ್ಟು ದುಡ್ಡು ಕೊಂಡೊಯ್ಯಬಹುದು, ಹಣ ಸೀಜ್ ಆದರೆ ಏನೆಲ್ಲ ದಾಖಲೆ ಒದಗಿಸಬೇಕು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 17 APRIL 2023

SHIMOGA : ಸಾರ್ವಜನಿಕರು 50 ಸಾವಿರ ರೂ.ಗಿಂತಲೂ ಹೆಚ್ಚಿನ ಹಣ ಹೊಂದಿದ್ದರೆ ಅದನ್ನು ಚುನಾವಣಾಧಿಕಾರಿಗಳು ವಶಕ್ಕೆ (Seized) ಪಡೆಯಲಿದ್ದಾರೆ. ಸಮರ್ಪಕ ದಾಖಲೆ ಒದಗಿಸಿದರೆ ಹಣ ಹಿಂತಿರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ತಿಳಿಸಿದರು.

Shimoga-SP-Mithun-Kumar-IPS-and-DC-Dr.Selvamani-IAS

ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಹಣಕ್ಕೆ ಸೂಕ್ತ ದಾಖಲೆ ಒದಗಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಹೇಳಿದ್ದೇನು?

ಬೇರೆ ಸಮಯದಲ್ಲಿಯು 50 ಸಾವಿರ ರೂ.ಗಿಂತಲು ಹೆಚ್ಚಿನ ಹಣವನ್ನು ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ. ಚುನಾವಣೆ ಸಮಯದಲ್ಲಿ 50 ಸಾವಿರಕ್ಕಿಂತಲೂ ಹೆಚ್ಚು ಹಣ ಹೊಂದಿದ್ದರೆ ಅಥವಾ ಸಾಗಿಸುತ್ತಿದ್ದರೆ ಅದನ್ನು ಚುನಾವಣಾಧಿಕಾರಿಗಳು ವಶಕ್ಕೆ (Seized) ಪಡೆಯಲಿದ್ದಾರೆ. ಸೂಕ್ತ ದಾಖಲೆ ಒದಗಿಸಿದರೆ ಹಣವನ್ನು ಮರಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು.

ಇದನ್ನೂ ಓದಿ – ಶಿವಮೊಗ್ಗಕ್ಕೆ ಬರ್ತಿದ್ದಾರೆ ಮತ್ತಷ್ಟು ಯೋಧರು, ಚೆಕ್ ಪೋಸ್ಟ್‌ಗಳು ಇನ್ನಷ್ಟು ಟೈಟ್, ಸ್ಟ್ರಾಂಗ್ ರೂಂಗಳಿಗೆ ಹೈ ಸೆಕ್ಯೂರಿಟಿ

ಎಟಿಎಂನಿಂದ ಹಣ ಬಿಡಿಸಿಕೊಂಡಿದ್ದರೆ ಅದರ ಸ್ಲಿಪ್ ತೋರಿಸಬಹುದು. ಬ್ಯಾಂಕಿನಿಂದ ಹಣ ಬಿಡಿಸಿಕೊಂಡಿದ್ದರೆ ರಶೀದಿಯನ್ನು ಒದಗಿಸಬೇಕು. ಮೊಬೈಲ್ ಮೂಲಕವು ಅಕೌಂಟ್ ತೋರಿಸಬಹುದು. ಸೂಕ್ತ ದಾಖಲೆ ಒದಗಿಸಿದರೆ ಹಣ ಹಿಂತಿರುಗಿಸಲಾಗುತ್ತದೆ.

ಎರಡೇ ಗಂಟೆಯಲ್ಲಿ ಹಣ ವಾಪಸ್‍

ಜಿಲ್ಲಾ ರಕ್ಷಣಾಧಿಕಾರಿ ಮಿಥನ್ ಕುಮಾರ್ ಅವರು ಮಾತನಾಡಿ, 50 ಸಾವಿರ ರೂ. ವರೆಗೂ ಹಣ ಕೊಂಡೊಯ್ಯಲು ಅವಕಾಶವಿದೆ. ಎಟಿಎಂ ವಾಹನಗಳಲ್ಲಿ ಹಣ ಕೊಂಡೊಯ್ಯಲು ಸೂಕ್ತ ದಾಖಲೆ ಇರಬೇಕು. ಹಣ ಎಲ್ಲಿಂದ ಎಲ್ಲಿಗೆ ಎಷ್ಟು ಹೊತ್ತಿಗೆ ಕೊಂಡೊಯ್ಯಲಾಗುತ್ತಿದೆ ಎಂಬ ದಾಖಲೆ ಇರಲಿದೆ. ಇಬ್ಬರು ಸಶಸ್ತ್ರ ಗಾರ್ಡ್‍ ಇರಬೇಕು. ಸಾರ್ವಜನಿಕರು ಕೂಡ ಹಣಕ್ಕೆ ಸೂಕ್ತ ದಾಖಲೆ ಇಟ್ಟುಕೊಂಡಿದ್ದರೆ ಸಮಸ್ಯೆ ಆಗುವುದಿಲ್ಲ ಎಂದರು.

shivamogga live news whatsappa number

ಇನ್ನು, ಜಿಲ್ಲಾ ಪಂಚಾಯಿತಿ ಸಿಇಒ ಅವರ ನೇತೃತ್ವದಲ್ಲಿ ಕ್ಯಾಶ್ ಸೀಜರ್ ಕಮಿಟಿ ರಚಿಸಲಾಗಿದೆ. ಸಾರ್ವಜನಿಕರು ತಮ್ಮ ಹಣ ಸೀಜ್ ಆಗಿದ್ದರೆ ಈ ಸಮಿತಿಗೆ ದಾಖಲೆಗಳನ್ನು ಒದಗಿಸಬೇಕು. ದಾಖಲೆಗಳು ಸಮರ್ಪಕವಾಗಿದ್ದರೆ ಹಣ ಹಿಂತಿರುಗಿಸಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಹಣ ಸೀಜ್ ಆದ ಎರಡೇ ಗಂಟೆಯಲ್ಲಿ ದಾಖಲೆ ಪರಿಶೀಲಿಸಿ ಹಿಂದಿರುಗಿಸಲಾಗಿದೆ ಎಂದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 17, 2023

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್‌, ಯಾಕೆ?

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಶಿವಮೊಗ್ಗದ ‘ಶಿವಚೌಡಿ ಧರಣಿ’ ಇನ್ನಿಲ್ಲ, ವಿಭಿನ್ನವಾಗಿ ತಿಥಿ ಕಾರ್ಯ ಮಾಡಿದ ಮಾಲೀಕ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

Leave a Comment