ʼಬಿಜೆಪಿಗೆ ಮತ ನೀಡಿದ್ದಕ್ಕೆ ಹಲ್ಲೆ ಮಾಡಿದರುʼ ಅಂದವನು ಕೊನೆಗೆ ಹೇಳಿದ್ದೇ ಬೇರೆ, ಅಷ್ಟಕ್ಕು ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 16 MAY 2023

SHIMOGA : ಬಿಜೆಪಿಗೆ ಮತ ನೀಡಿದೆ ಎಂದು ಹೇಳಿದ್ದಕ್ಕೆ ಮುಸ್ಲಿಂ ಯುವಕರು ತನ್ನ ಮೇಲೆ ಹಲ್ಲೆ ಮಾಡಿ, ಆಟೋ (Auto) ಗಾಜು ಒಡೆದಿದ್ದಾರೆ ಎಂದು ಆರೋಪಿಸಿದ್ದ ಆಟೋ ಚಾಲಕ ಉಲ್ಟಾ ಹೊಡೆದಿದ್ದಾನೆ. ಆತನ ಮಾತು ನಂಬಿ ಬೆಂಬಲಕ್ಕೆ ನಿಂತಿದ್ದ ಬಿಜೆಪಿ ಮುಖಂಡರು ಮುಜುಗರಕ್ಕೀಡಾಗಿದ್ದಾರೆ.

Auto-Glass-Break-Sominakoppa-in-Shimoga

ಬೆಳಗ್ಗೆ ಎಸ್ಪಿ ಕಚೇರಿಯಲ್ಲಿ ಹೈಡ್ರಾಮಾ

ಹಾನಿಯಾಗಿದ್ದ ಗಾಜು, ಹರಿದ ಟಾಪ್‌ನೊಂದಿಗೆ ಹರೀಶ್‌ ರಾವ್‌ ಎಂಬ ಚಾಲಕ ತನ್ನ ಆಟೋವನ್ನು (Auto) ಸೋಮವಾರ ಬೆಳಗ್ಗೆ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ತಂದಿದ್ದ. ಇದೆ ವೇಳೆ ಎಸ್‌ಪಿ ಕಚೇರಿಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ಮುಖಂಡರು ಮತ್ತು ಮಾಧ್ಯಮದವರನ್ನು ನೋಡುತ್ತಿದ್ದಂತೆ ಹರೀಶ್‌ ರಾವ್‌ ಸಂಕಟ ಹೇಳಿಕೊಂಡಿದ್ದ. ʼಬಿಜೆಪಿಗೆ ಮತ ನೀಡಿದ್ದಕ್ಕೆ ತನ್ನ ಮೇಲೆ ಮೂವರು ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆ. ಆಟೋ ಜಖಂ ಮಾಡಿದ್ದಾರೆʼ ಎಂದು ಕಣ್ಣೀರು ಸುರಿಸಿದ್ದ. ಈಶ್ವರಪ್ಪ ಅವರ ಕಾಲಿಗೆ ಬಿದ್ದು ರಕ್ಷಣೆಗೆ ಮೊರೆ ಇಟ್ಟಿದ್ದ.

ಜೇಬಿನಿಂದ ಹಣ ತೆಗೆದು ಕೊಟ್ಟಿದ್ದರು

ಹರೀಶ್‌ ರಾವ್‌ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಕೆ.ಎಸ್.ಈಶ್ವರಪ್ಪ, ಆಟೋ ರಿಪೇರಿ ಮಾಡಿಸಿಕೊಳ್ಳುವಂತೆ ಜೇಬಿನಿಂದ ಹಣ ತೆಗೆದು ಕೊಟ್ಟಿದ್ದರು. ರಿಪೇರಿ ಮಾಡಿಸಿಕೊಂಡು ಮನೆ ಬಳಿ ಬಾ ಎಂದು ಸೂಚಿಸಿದ್ದರು. ಅಲ್ಲದೆ ಸೂಕ್ತ ತನಿಖೆ ನಡೆಸುವಂತೆ ಪೊಲೀಸರಿಗೆ ತಿಳಿಸಿದ್ದರು.

auto

ಕಿಡಿ ಹೊತ್ತಿಸಿದ ಆಟೋ ಚಾಲಕನ ಅಳಲು

ಬಿಜೆಪಿಗೆ ಮತ ನೀಡಿದ್ದಕ್ಕೆ ಮುಸ್ಲಿಮ್‌ ಯುವಕರಿಂದ ಹಲ್ಲೆ ಎಂದು ಮಾಧ್ಯಮಗಳು, ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿಡಿಯೋಗಳು ಹರಿದಾಡಿದವು. ಬಿಜೆಪಿ ಮತ್ತು ಅದರ ಬೆಂಬಲಿಗರ ವಾಟ್ಸಪ್‌ ಗ್ರೂಪ್‌, ಫೇಸ್‌ಬುಕ್‌ನಲ್ಲಿ ಘಟನೆ ವಿರುದ್ಧ ಆಕ್ರೋಶ ಹೊರಹಾಕಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಗಳು ಕೇಳಿ ಬಂದವು. ಶಿವಮೊಗ್ಗದ ಶಾಸಕ ಎಸ್‌.ಎನ್.ಚನ್ನಬಸಪ್ಪ ಅವರ ಟ್ವಿಟರ್‌ ಖಾತೆಯಲ್ಲಿಯು ಘಟನೆ ಖಂಡಿಸಿ ಪೋಸ್ಟ್‌ ಪ್ರಕಟವಾಯಿತು.

ಸಂಜೆ ವೇಳೆ ಉಲ್ಟಾ ಹೊಡೆದ ಚಾಲಕ

ವಿಷಯ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ನಿಜ ಸ್ಥಿತಿ ಅರಿಯಲು ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಕಾರ್ಪೊರೇಟರ್‌ ಹೆಚ್‌.ಸಿ.ಯೋಗೇಶ್‌ ಅವರ ನೇತೃತ್ವದ ನಿಯೋಗ ವಿನೋಬನಗರ ಠಾಣೆಗೆ ಭೇಟಿ ನೀಡಿತ್ತು. ಆಗ ಎದುರಾದ ಚಾಲಕ, ಉಲ್ಟಾ ಹೊಡೆದಿದ್ದಾನೆ. ಬಿಜೆಪಿಗೆ ಮತ ನೀಡಿದ್ದಕ್ಕೆ ದಾಳಿಯಾಯಿತು ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದ್ದಾನೆ.

WATCH VIDEO

[su_button url=”https://admission.parishramaneetacademy.com/smglive/” target=”blank” style=”glass” background=”#0003ab” color=”#ffffff” size=”6″ radius=”0″ icon=”icon: chevron-right”]ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ[/su_button]

ಆಟೋ ಚಾಲಕ ಹೇಳಿದ್ದೇನು?

ʼನಾವೆಲ್ಲ ಸ್ನೇಹಿತರು ಓಟ್ಟಿಗೆ ಎಣ್ಣೆ ಹಾಕುತ್ತಿದ್ದೆವು. ಸ್ನೇಹಿತರು ಮಧ್ಯೆ ಜಗಳವಾಗಿ ಆಗ ಆಟೋ ಟಾಪ್‌, ಗ್ಲಾಸ್‌ ಒಡೆದು ಹೋಗಿದೆ. ಅದಕ್ಕೆ ಕಂಪ್ಲೇಂಟ್‌ ಕೊಡಲು ಎಸ್‌ಪಿ ಕಚೇರಿಗೆ ಹೋಗಿದ್ದೆ. ನಾನೆಲ್ಲೂ ಬಿಜೆಪಿಗೆ ವೋಟ್‌ ಹಾಕಿದ್ದಕ್ಕೆ ಹೊಡೆದರು ಎಂದು ಹೇಳಿಲ್ಲ. ಈ‍ಶ್ವರಪ್ಪ ಅವರು ದುಡ್ಡು ಕೊಟ್ಟರು. ಆದರೆ ಅದು ಎಷ್ಟಿತ್ತು ಎಂದು ಗೊತ್ತಿಲ್ಲ. ಅದನ್ನು ಯಾರೋ ಜೇಬಿನಿಂದ ಎತ್ತಿಕೊಂಡು ಹೋಗಿದ್ದಾರೆʼ ಎಂದು ಆಟೋ ಚಾಲಕ ಹರೀಶ್‌ ರಾವ್‌ ಹೇಳಿಕೆ ನೀಡಿದ್ದಾನೆ.

ವೈರಲ್‌ ಆಯ್ತು ಡ್ರಾಮಾ ವಿಡಿಯೋ

ಆಟೊ ಚಾಲಕ ಹರೀಶ್‌ ರಾವ್‌ ದೂರು ನೀಡಲು ಬಂದಾಗ ನಡೆದ ಘಟನೆ ಮತ್ತು ಸಂಜೆ ಆತ ಉಲ್ಟಾ ಹೊಡೆದ ವಿಡಿಯೋಗಳು ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇದನ್ನು ಷೇರ್‌ ಮಾಡಿರುವ ಹಲವರು, ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ – ಮಧ್ಯರಾತ್ರಿ 12.30ಕ್ಕೆ ಮಾಜಿ ಸಚಿವ ಈಶ್ವರಪ್ಪಗೆ ಮಿಸ್ಡ್‌ ಕಾಲ್‌, ಎಸ್ಪಿಗೆ ದೂರು, ಎಲ್ಲಿಂದ ಬಂದಿತ್ತು ಫೋನ್‌?

ಕುಡಿದ ಮತ್ತಿನಲ್ಲಿ ಆಟೋ ಚಾಲಕನ ಹೈ ಡ್ರಾಮಾ ಮತ್ತು ಅದಕ್ಕೆ ಬೆಂಬಲವಾಗಿ ನಿಂತವರು ಈಗ ಪೇಚಿಗೆ ಸಿಲುಕಿದ್ದಾರೆ.

[su_animate type=”bounceInUp”][su_button url=”https://chat.whatsapp.com/Gw9Vd0MvljO9kI4k7LDRmj” target=”blank” style=”glass” background=”#0003ab” color=”#ffffff” size=”6″ radius=”0″ icon=”https://shivamoggalive.com/wp-content/uploads/2022/11/Whatspp-Logo.png“]ಶಿವಮೊಗ್ಗ ಲೈವ್‌ ವಾಟ್ಸಪ್‌ ಗ್ರೂಪ್‌ ಸೇರಲು ಕ್ಲಿಕ್‌ ಮಾಡಿ[/su_button][/su_animate]

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 16, 2023

ಮಲವಗೊಪ್ಪದ ಭದ್ರಾ ನಾಲೆಯಲ್ಲಿ ನಾಪತ್ತೆಯಾಗಿದ್ದ ಹರಿಗೆಯ ಬಾಲಕ ಶವವಾಗಿ ಪತ್ತೆ, ಆಗಿದ್ದೇನು?

ಮಲವಗೊಪ್ಪದ ಭದ್ರಾ ನಾಲೆಯಲ್ಲಿ ನಾಪತ್ತೆಯಾಗಿದ್ದ ಹರಿಗೆಯ ಬಾಲಕ ಶವವಾಗಿ ಪತ್ತೆ, ಆಗಿದ್ದೇನು?

ಶಿವಮೊಗ್ಗದಲ್ಲಿ ಆಲಿಕಲ್ಲು ಮಳೆ, ಎಲ್ಲೆಲ್ಲಿ ಹೇಗಿತ್ತು ಭಾನುವಾರದ ವರ್ಷಧಾರೆ? ಎಲ್ಲೆಲ್ಲಿ ಹಾನಿಯಾಗಿದೆ?

ಶಿವಮೊಗ್ಗದಲ್ಲಿ ಆಲಿಕಲ್ಲು ಮಳೆ, ಎಲ್ಲೆಲ್ಲಿ ಹೇಗಿತ್ತು ಭಾನುವಾರದ ವರ್ಷಧಾರೆ? ಎಲ್ಲೆಲ್ಲಿ ಹಾನಿಯಾಗಿದೆ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

Leave a Comment