ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 21 MAY 2023
SHIMOGA : 108 ಆಂಬುಲೆನ್ಸ್ (Ambulance) ಡಿಕ್ಕಿಯಾಗಿ ಬೈಕ್ ಸವಾರರೊಬ್ಬರಿಗೆ ಗಂಭೀರ ಗಾಯವಾಗಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಇದೆ ವೇಳೆ ಮಂಗಳೂರಿನಲ್ಲಿ ಅವರ ಪುತ್ರ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಈ ಹಿನ್ನೆಲೆ ಅಪಘಾತದ ಕುರಿತು ತಡವಾಗಿ ದೂರು ದಾಖಲಾಗಿದೆ.
ಏನಿದು ಪ್ರಕರಣ?
ಸಂತೆ ಕಡೂರು ಗ್ರಾಮದ ರಾಂಪುರದ ಬಸವರಾಜಪ್ಪ ಎಂಬುವವರು ಗಾರೆ ಕೆಲಸ ಮಾಡಿಕೊಂಡಿದ್ದಾರೆ. ಮೇ.14ರಂದು ಸಂಜೆ ಕೆಲಸ ಮುಗಿಸಿ ಪರಿಚಯದವರ ಬೈಕಿನಲ್ಲಿ ರಾಂಪುರ ಕ್ರಾಸ್‌ವರೆಗೆ ಬಂದಿದ್ದಾರೆ. ಅದೆ ಬೈಕಿನಲ್ಲಿ ಮನೆ ಕಡೆಗೆ ಹೋಗುವಾಗ ಶಿವಮೊಗ್ಗ ಕಡೆಯಿಂದ ಬಂದ 108 ಆಂಬುಲೆನ್ಸ್ (Ambulance) ಡಿಕ್ಕಿ ಹೊಡೆದಿದೆ. ಬಸವರಾಜಪ್ಪ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು ಡಿಕ್ಕಿ ಹೊಡೆದ ಆಂಬುಲೆನ್ಸ್‌ನಲ್ಲೇ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸೈಟ್ ಖರೀದಿಸುವ ಮುನ್ನ ಹುಷಾರ್, ಯಾರದ್ದೋ ಸೈಟ್ ಮತ್ಯಾರಿಗೋ ಮಾರಲು ಯತ್ನ
ಆತ್ಮಹತ್ಯೆ ಮಾಡಿಕೊಂಡ ಮಗ
ಬಸವರಾಜಪ್ಪ ಅವರ ತಲೆಗೆ ಗಂಭೀರ ಪೆಟ್ಟಾಗಿದ್ದರಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚೇತರಿಸಿಕೊಳ್ಳುವ ಹೊತ್ತಿಗೆ ಬಸವರಾಜಪ್ಪ ಅವರ ಮಗ ರಾಜು ಮೇ.16ರಂದು ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ಕುಟುಂಬದವರು ಆಘಾತಕ್ಕೊಳಗಾಗಿದ್ದರು. ಸದ್ಯ ಬಸವರಾಜಪ್ಪ ಅವರು ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿದ್ದಾರೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಬಸವರಾಜಪ್ಪ ಅವರಿಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಳಿಸಿದ 108 ಆಂಬುಲೆನ್ಸ್ ಚಾಲಕನ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ದೂರು ನೀಡಲಾಗಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.