SHIVAMOGGA LIVE | 8 JUNE 2023
SHIMOGA : ರಾಂಗ್ ಸೈಡ್‌ನಲ್ಲಿ (Wrong Side) ಬೈಕ್ ಚಲಾಯಿಸಿ ಕಾರಿಗೆ ಡಿಕ್ಕಿ ಹೊಡೆದ ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಅಪಘಾತದ ಸಿಸಿಟಿವಿ ದೃಶ್ಯಾವಳಿ ವೈರಲ್ ಆಗಿದೆ.
ಶಿವಮೊಗ್ಗ – ಸಾಗರ ರಸ್ತೆಯ ಪೆಸೆಟ್ ಕಾಲೇಜು ಮುಂಭಾಗ ಜೂ.5ರ ರಾತ್ರಿ ಘಟನೆ ಸಂಭವಿಸಿದೆ. ಬೈಕ್ ಸವಾರರಾದ ಸಾಗರ ತಾಲೂಕು ಕುಂಬ್ರಿ ಗ್ರಾಮದ ರಘು (28) ಮತ್ತು ಸಂದೀಪ (29) ಗಾಯಗೊಂಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದನ್ನೂ ಓದಿ – ಸಿಟಿ ಬಸ್ ಡಿಕ್ಕಿಯಾಗಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ವ್ಯಕ್ತಿ 18 ದಿನದ ಬಳಿಕ ಸಾವು, ಮೈ ಜುಮ್ ಅನಿಸುತ್ತೆ ಸಿಸಿಟಿವಿ ದೃಶ್ಯ
ಹೇಗಾಯ್ತು ಅಪಘಾತ?
ಜೂ.5ರಂದು ರಾತ್ರಿ 9.30ರ ಹೊತ್ತಿಗೆ ಸಾಗರ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಇನ್ನೋವಾ ಕಾರು ಮತ್ತು ಎದುರಿನಿಂದ ಬಂದ ಬೈಕ್ ಮಧ್ಯೆ ಅಪಘಾತವಾಗಿದೆ. ಮುಖಾಮುಖಿ ಡಿಕ್ಕಿಯಿಂದಾಗಿ ರಸ್ತೆಗೆ ಬಿದ್ದಿದ್ದ ಬೈಕ್ ಸವಾರರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಕೂಡಲೆ ಆಂಬುಲೆನ್ಸ್ ಮೂಲಕ ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬೈಕ್ ಮತ್ತು ಕಾರು ಮುಂಭಾಗ ಜಖಂ ಆಗಿದ್ದವು.
ರಾಂಗ್ ಸೈಡಿನಲ್ಲಿ ಬೈಕ್ ರೈಡಿಂಗ್
ಇನ್ನೋವಾ ಕಾರಿನಲ್ಲಿದ್ದವರು ಮಂಡ್ಯ ಜಿಲ್ಲೆಯವರು. ಧರ್ಮಸ್ಥಳ ಸೇರಿದಂತೆ ವಿವಿಧೆಡೆ ಪ್ರವಾಸ ಮುಗಿಸಿ ಸಾಗರದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ರಘು ಮತ್ತು ಸಂದೀಪ ರಾಂಗ್ ಸೈಡಿನಲ್ಲಿ (Wrong Side) ಬೈಕ್ ಚಲಾಯಿಸಿದ್ದರು ಎಂದು ಆರೋಪಿಸಲಾಗಿದೆ. ಇದರ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.
ಇದನ್ನೂ ಓದಿ – ಆಯನೂರು ಕೊಲೆ ಪ್ರಕರಣ, 3 ಪ್ರತ್ಯೇಕ ಕೇಸ್ ದಾಖಲು, ಯಾವ್ಯಾವ ಪ್ರಕರಣದಲ್ಲಿ ಏನೇನಿದೆ?
ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ