ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE | 19 JULY 2023
ಶಿವಮೊಗ್ಗದಲ್ಲಿ ಡಿವೈಡರ್ಗೆ ಕಾರು ಡಿಕ್ಕಿ

SHIMOGA : ರಸ್ತೆಯಲ್ಲಿ ಡಿವೈಡರ್ಗೆ (Road Divider) ಟೊಯೋಟಾ ಫಾರ್ಚುನರ್ ಕಾರು
ಡಿಕ್ಕಿಯಾಗಿದ್ದು ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಶಿವಮೊಗ್ಗದ ಐಬಿ ಸರ್ಕಲ್ನಲ್ಲಿರುವ ಡಿವೈಡರ್ಗೆ ಕಳೆದ ರಾತ್ರಿ ಕಾರು ಅಪ್ಪಳಿಸಿದೆ. ಕುವೆಂಪು ರಸ್ತೆಯಿಂದ ವೇಗವಾಗಿ ಬಂದ ಕಾರು ಸಿಗ್ನಲ್ ಬಳಿ ಹಾಕಲಾಗಿದ್ದ ಡಿವೈಡರ್ಗೆ ಗುದ್ದಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಡಿವೈಡರ್ಗೆ ಹಾನಿಯಾಗಿದೆ. ಶಿವಮೊಗ್ಗದ ವೈದ್ಯರೊಬ್ಬರಿಗೆ ಸೇರಿದ ಕಾರು ಎಂದು ಹೇಳಲಾಗುತ್ತಿದೆ. ರಾತ್ರಿ 11 ಗಂಟೆ ಹೊತ್ತಿಗೆ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ – ನಿಂತಿದ್ದ ಕ್ಯಾಂಟರ್ಗೆ ತೀರ್ಥಹಳ್ಳಿಯಲ್ಲಿ ಓಮ್ನಿ ಡಿಕ್ಕಿ | ಭದ್ರಾವತಿಯಲ್ಲಿ ಐವರಿಗೆ ತಲಾ 10 ಸಾವಿರ ರೂ. ದಂಡ

ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಬಾಡಿಗೆ ಸೇವೆಗೆ ಮನವಿ

SHIMOGA : ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ವಾಹನದ ಬಾಡಿಗೆ
ಸೇವೆಯನ್ನು ಪ್ರವಾಸಿ ಕಾರು ಚಾಲಕರ ಸಂಘಕ್ಕೆ ನೀಡುವಂತೆ ಒತಾಯಿಸಿ ಪ್ರವಾಸಿ ಕಾರು ಚಾಲಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ವಿಮಾನ ಪ್ರಯಾಣಿಕರಿಗೆ ಬಾಡಿಗೆ ವಾಹನದ ಸೇವೆ ನೀಡಲು ನಮ್ಮ ಸಂಘಕ್ಕೆ ಅವಕಾಶ ನೀಡಬೇಕು. ಹಲವು ವರ್ಷದಿಂದ ನಮ್ಮ ಸಂಘ ಪ್ರವಾಸಿಗರಿಗೆ ಉತ್ತಮ ಸೇವೆ ನೀಡುತ್ತಿದೆ. ಇದನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು. ಸಂಘದ ಅಧ್ಯಕ್ಷ ಬಿ.ಡಿ.ಗಣೇಶ್, ಎನ್.ರಾಘವೇಂದ್ರ, ಎಸ್.ಜಿ.ನರಸಿಂಹಮೂರ್ತಿ, ರವಿ, ಕೇಶವಮೂರ್ತಿ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ರಾತ್ರಿ ಗಸ್ತು ವೇಳೆ ವ್ಯಕ್ತಿಯ ಬೆರಳಚ್ಚು ಪಡೆದ ಪೊಲೀಸ್, ಕೆಲವೇ ಕ್ಷಣದಲ್ಲಿ ಆತ ಅರೆಸ್ಟ್, ಯಾಕೆ?

ಯುವತಿ ಮಾನಭಂಗಕ್ಕೆ ಯತ್ನ ಆರೋಪ
HOLEHONNURU : ಯಾರೂ ಇಲ್ಲದ ವೇಳೆ ಯುವತಿಯೊಬ್ಬಳ
ಮಾನಭಂಗಕ್ಕೆ ಯತ್ನಿಸಿದ ಆರೋಪ ಕೇಳಿ ಬಂದಿದೆ. ಗ್ರಾಮವೊಂದರ ಮನೆಯಲ್ಲಿ ಘಟನೆ ಸಂಭವಿಸಿದೆ. ಯುವತಿಯ ತಂದೆ, ತಾಯಿ ಹೊರಗೆ ಹೋಗಿದ್ದರು. ಈ ವೇಳೆ ಯುವಕನೊಬ್ಬ ಮನೆಗೆ ನುಗ್ಗಿ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಮಾನಭಂಗ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ಥೆಯ ಹೆಸರು, ಊರು, ವಿಳಾಸ ಬಹಿರಂಗಪಡಿಸುವು ಶಿಕ್ಷಾರ್ಹ ಅಪರಾಧ. ಮಾಹಿತಿಗಾಗಿ ಮಾತ್ರ ಈ ಸುದ್ದಿ ಪ್ರಕಟಿಸಲಾಗಿದೆ.)
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು








