SHIVAMOGGA LIVE | 26 JULY 2023
HOLEHONNURU : ನಾರದ ಮಹರ್ಷಿಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಅವರು ಜಗಳ ಹಚ್ಚುವವರಲ್ಲ. ಭಗವಂತನ ಸಂಕಲ್ಪವನ್ನು ಪೂರ್ಣ ಮಾಡಿಸುವ ಕೈಂಕರ್ಯ ಮಾಡುತ್ತಿರುವ ಪರಮಹಂಸರು, ಸನ್ಯಾಸಿಗಳು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ (Swamiji) ಹೇಳಿದರು.
ಹೊಳೆಹೊನ್ನೂರಿನಲ್ಲಿ ನಡೆಯುತ್ತಿರುವ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಗಳು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ (Swamiji) ನೀಡಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಜ್ಜನರಿಗೆ ಅವರೊಳಗೆ ಸ್ವಾಭಾವಿಕವಾಗಿಯೇ ಇರುವ ದೇವರಲ್ಲಿನ ಭಕ್ತಿಯನ್ನು ಪ್ರವರ್ಧನ ಮಾಡುವವರು. ಉದ್ದೀಪನ ಮಾಡುವವರು. ಅದೇ ರೀತಿ ದುರ್ಜನರಿಗೆ ಅವರೊಳಗಿದ್ದ ದೋಷಗಳನ್ನು ಹೊರಹಾಕುವಂತೆ ಮಾಡುವವರೇ ಹೊರತು ನಾರದರೇ ಹೇಳಿ ದೋಷವನ್ನು ಮಾಡಿಸುವವರಲ್ಲ ಎಂದರು.
ಇದೇ ವೇಳೆ ಶ್ರೀಗಳಿಗೆ ಶ್ರೀಮುಷ್ಣಂನಿಂದ ವರಾಹದೇವರ ಶೇಷವಸ್ತು ಮತ್ತು ಪ್ರಸಾದ ಹಾಗೂ ನಿಂಬಾದ್ರಿ ಕ್ಷೇತ್ರದ ಶ್ರೀ ನರಸಿಂಹ ದೇವರ ನಿರ್ಮಾಲ್ಯ ಮತ್ತು ಗಂಧವನ್ನು ಸಮರ್ಪಣೆ ಮಾಡಲಾಯಿತು.
ಇದನ್ನೂ ಓದಿ – ಭದ್ರಾವತಿ VISL ಕಾರ್ಖಾನೆ ಆವರಣದಲ್ಲಿ ಚಿರತೆ ಪ್ರತ್ಯಕ್ಷ, ಕಾರ್ಮಿಕರಲ್ಲಿ ಆತಂಕ
ಸಭೆಯಲ್ಲಿ ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಕುಲಪತಿ ಗುತ್ತಲ ರಂಗಾಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಖಜಾಂಚಿ ರಾಮಧ್ಯಾನಿ ಅನಿಲ್, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು ಮೊದಲಾದವರಿದ್ದರು.