SHIVAMOGGA LIVE NEWS | 11 AUGUST 2023
BHADRAVATHI : ವಿಐಎಸ್ಎಲ್ ಕಾರ್ಖಾನೆಯ ಬಾರ್ ಮಿಲ್ (Bar Mill) ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹಾಗಾಗಿ ಆ.10ರಂದು ಆರಂಭವಾಗಿದ್ದ ಘಟಕ ತನ್ನ ಉತ್ಪಾದನಾ ಚಟುವಟಿಕೆ ಮುಂದೂಡಿದೆ.
![]() |
ಆ.10ರಿಂದ ಬಾರ್ ಮಿಲ್ (Bar Mill) ಘಟಕದಲ್ಲಿ ಉತ್ಪಾದನಾ ಚಟುವಟಿಕೆ ಪುನಾರಂಭವಾಗಲಿದೆ ಎಂದು ಸೇಲ್ ಆಡಳಿತ ಮಂಡಳಿ ತಿಳಿಸಿತ್ತು. ಅದರಂತೆ ಸಿದ್ಧತೆ ಮಾಡಿಕೊಳ್ಳುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಈಗ ರಿಪೇರಿ ಕಾರ್ಯ ನಡೆಸಲಾಗುತ್ತಿದ್ದು, ಆ ಬಳಿಕ ಘಟಕದಲ್ಲಿ ಕೆಲಸ ಶುರುವಾಗಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ – ಗೃಹ ಜ್ಯೋತಿ ಉಚಿತ ವಿದ್ಯುತ್ ನಿರೀಕ್ಷೆಯಲ್ಲಿದ್ದ ಗ್ರಾಹಕನಿಗೆ ಮೆಸ್ಕಾಂನಿಂದ ಶಾಕ್
ತಾಂತ್ರಿಕ ದೋಷವೇನು?
ಬಾರ್ ಮಿಲ್‌ನಲ್ಲಿ ಕಳೆದ 7 ತಿಂಗಳಿಂದ ಉತ್ಪಾದನೆ ಸ್ಥಗಿತವಾಗಿತ್ತು. ಘಟಕ ಪುನಾರಂಭದ ಕುರಿತು ಸೇಲ್ ಆಡಳಿತ ಮಂಡಳಿ ಸೂಚನೆ ನೀಡಿದ ಬೆನ್ನಿಗೆ ಪರಿಶೀಲನೆ ಆರಂಭಿಸಲಾಯಿತು. ಈ ಹೊತ್ತಿಗೆ ವಿದ್ಯುತ್ ಘಟಕದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ದಟ್ಟ ಹೊಗೆ ಆವರಿಸಿಕೊಂಡಿದೆ. ರಿಪೇರಿ ಬಳಿಕವೆ ಘಟಕದಲ್ಲಿ ಉತ್ಪಾದನೆ ಆರಂಭಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ನಿರೀಕ್ಷೆಯಲ್ಲಿದ್ದ ಕಾರ್ಮಿಕರಲ್ಲಿ ನಿರಾಸೆ
ಆ.10ರಂದು ಬಾರ್ ಮಿಲ್ ಪುನಾರಂಭವಾಗಲಿದೆ. ಆ ಬಳಿಕ ಪ್ರೈಮರಿ ಮಿಲ್ ಕಾರ್ಯನಿರ್ವಹಿಸಲಿದೆ ಎಂದು ಸೇಲ್ ಅಡಳಿತ ಮಂಡಳಿ ತಿಳಿಸಿತ್ತು. ಅದರಂತೆ ಕಾರ್ಖಾನೆಯ ನೊಟೀಸ್ ಬೋರ್ಡ್‌ನಲ್ಲಿಯು ಸೂಚನೆ ಪ್ರಕಟಿಸಲಾಗಿತ್ತು. ಕಾರ್ಮಿಕರಲ್ಲಿಯೂ ನಿರೀಕ್ಷೆ ಮೂಡಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ನಿಗದಿತ ದಿನಾಂಕದಂದು ಘಟಕ ಆರಂಭವಾಗದೆ ನಿರಾಸೆ ಮೂಡಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200