ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 SEPTEMBER 2023
SHIMOGA : ಬೆಂಗಳೂರು – ಶಿವಮೊಗ್ಗ ಮಧ್ಯೆ ವಿಮಾನಯಾನ ಸೇವೆ ಆರಂಭವಾಗಿ ಒಂದು ವಾರ ಕಳೆಯುವುದರಲ್ಲಿ ಮತ್ತೊಂದು ಮಾರ್ಗದ ವಿಮಾನ ಹಾರಾಟ ಆರಂಭವಾಗುತ್ತಿದೆ. ಮೊದಲ ಕನೆಕ್ಟಿಂಗ್ ವಿಮಾನ (Connecting Flight) ಶಿವಮೊಗ್ಗದಲ್ಲಿ ಲ್ಯಾಂಡ್ ಆಗಲು ಸಜ್ಜಾಗುತ್ತಿದೆ.
ಬೆಂಗಳೂರಿನಿಂದ ವಿಜಯವಾಡಕ್ಕೆ ತೆರಳುವ ಇಂಡಿಗೋ ವಿಮಾನ ಇನ್ಮುಂದೆ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಲಿದೆ. ‘ಎರಡ್ಮೂರು ದಿನದಲ್ಲಿ ಬೆಂಗಳೂರು ವಿಜಯವಾಡ ವಿಮಾನ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಲಿದೆ. ಇನ್ನೊಂದು ತಿಂಗಳಲ್ಲಿ ಮತ್ತಷ್ಟು ರಾಜ್ಯಗಳಿಗೆ ಶಿವಮೊಗ್ಗದಿಂದ ಕನೆಕ್ಟಿಂಗ್ ಫ್ಲೈಟ್‌ಗಳು ಹಾರಾಡಲಿವೆʼ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಇಂಡಿಗೋ ವೆಬ್‌ಸೈಟ್‌ನಲ್ಲಿ ಪ್ರಕಟ
ಬೆಂಗಳೂರು ವಿಜಯವಾಡ ಇಂಡಿಗೋ ವಿಮಾನ ಇನ್ಮುಂದೆ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಲಿದೆ. ಇಲ್ಲಿಂದ ಪ್ರಯಾಣಿಕರನ್ನು ಹೊತ್ತೊಯ್ಯಲಿದೆ. ಈಗಾಗಲೆ ಇಂಡಿಗೋ ವೆಬ್‌ಸೈಟ್‌ನಲ್ಲಿ ಶಿವಮೊಗ್ಗ ವಿಜಯವಾಡ ಮಾರ್ಗವನ್ನು ಪ್ರಕಟಿಸಲಾಗಿದೆ. ಬುಕಿಂಗ್ ಕೂಡ ಶುರುವಾಗಲಿದೆ.
ಇದನ್ನೂ ಓದಿ – ವಿಮಾನ ನಿಲ್ದಾಣಕ್ಕೆ ಅರ್ಧ ಗಂಟೆಗೊಂದು KSRTC ಬಸ್, ರೈಲ್ವೆ ನಿಲ್ದಾಣಕ್ಕೆ ಯಾಕಿಲ್ಲ ಇಂತಹ ಸರ್ವಿಸ್?
ಶಿವಮೊಗ್ಗಕ್ಕೆ ವಂದೇ ಭಾರತ್ ಟ್ರೈನ್
ಇನ್ನು, ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಬೇಕು ಎಂಬ ಬೇಡಿಕೆಗೆ ಕೂಡ ಮನ್ನಣೆ ಸಿಗುವ ಸಾಧ್ಯತೆ ಇದೆ. ವಂದೇ ಭಾರತ್ ರೈಲಿನ ಅಗತ್ಯಗಳಲ್ಲಿ ರೈಲ್ವೆ ಲೇನ್ ವಿದ್ಯುದೀಕರಣ ಪ್ರಮುಖವಾದ್ದದ್ದು. ಈಗಾಗಲೇ ಬೆಂಗಳೂರಿನಿಂದ ಶಿವಮೊಗ್ಗದವರೆಗೆ ರೈಲ್ವೆ ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಈಗಾಗಲೆ ಜನ ಶತಾಬ್ದಿ ರೈಲು ಎಲೆಕ್ಟ್ರಿಕ್ ಇಂಜಿನ್ ಮೂಲಕವೆ ಸಂಚರಿಸುತ್ತಿದೆ. ‘ಡಿಸೆಂಬರ್ ವೇಳೆಗೆ ವಂದೇ ಭಾರತ್ ರೈಲು ಶಿವಮೊಗ್ಗಕ್ಕೆ ತರಲು ಪ್ರಯತ್ನವಾಗುತ್ತಿದೆ’ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ – ರೈಲ್ವೆ ಪೊಲೀಸರಿಂದ ಶಿವಮೊಗ್ಗದ 3 ಕಡೆ ದಾಳಿ, ಮೂವರು ಅರೆಸ್ಟ್, ಲಕ್ಷ ಲಕ್ಷ ಮೌಲ್ಯದ ಇ-ಟಿಕೆಟ್ ವಶಕ್ಕೆ, ಏನಿದು ಕೇಸ್?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422