ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 SEPTEMBER 2023
RIPPONPETE : ಅರಸಾಳು ರೈಲ್ವೆ ಗೇಟ್ (Railway Gate) ಬಳಿ ಕೂಲಿ ಕಾರ್ಮಿಕ ಮಹಿಳೆ ಮರಕ್ಕೆ ನೇಣು ಬಿಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರೋಗ್ಯ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.
ಇದನ್ನೂ ಓದಿ – ರೈಲ್ವೆ ಪೊಲೀಸರಿಂದ ಶಿವಮೊಗ್ಗದ 3 ಕಡೆ ದಾಳಿ, ಮೂವರು ಅರೆಸ್ಟ್, ಲಕ್ಷ ಲಕ್ಷ ಮೌಲ್ಯದ ಇ-ಟಿಕೆಟ್ ವಶಕ್ಕೆ, ಏನಿದು ಕೇಸ್?
ಮಧ್ಯಪ್ರದೇಶದ ದಿಂಡೂರಿ ಜಿಲ್ಲೆಯ ಡಾನ್‌ಬಿಚೋಯ್ ಗ್ರಾಮದ ಊರ್ಮಿಳಾ ಬಾಯಿ (27) ಮೃತ ಮಹಿಳೆ. ರೈಲ್ವೆ ಹಳಿ ಪಕ್ಕದ ಚರಂಡಿ ಸ್ವಚ್ಛತಾ ಕಾರ್ಯಕ್ಕೆ ಊರ್ಮಿಳಾ ಬಾಯಿ ತನ್ನ ಪತಿಯೊಂದಿಗೆ ಬಂದಿದ್ದರು. ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಇದೆ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422