ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 02 OCTOBER 2023
SHIMOGA : ರಾಗಿಗುಡ್ಡದಲ್ಲಿ (ragi gudda) ಕಲ್ಲು ತೂರಾಟ ಪ್ರಕರಣದ ಹಿನ್ನಲೆ ಶಿವಮೊಗ್ಗ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಷೇಧಾಜ್ಞೆ ಜಾರಿಯಿಂದ ನಗರದಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಗಿದೆ.
ವಾಸ್ತವದಲ್ಲಿ ಹೇಗಿದೆ ನಮ್ಮೂರು?
ಬಸ್, ಆಟೋ, ಟ್ರ್ಯಾಕ್ಸ್ ಸಂಚಾರ
ಶಿವಮೊಗ್ಗ ನಗರದ ರಾಗಿಗುಡ್ಡ (ragi gudda) ಹೊರತು ಉಳಿದೆಲ್ಲೆಡೆ ನಗರ ಶಾಂತವಾಗಿದೆ. ಜನಜೀವನ ಎಂದಿನಂತೆಯೆ ಇದೆ. ಕೆಎಸ್ಆರ್ಟಿಸಿ, ಖಾಸಗಿ ಮತ್ತು ಸಿಟಿ ಬಸ್ಸುಗಳು ಎಂದಿನಂತೆ ಸಂಚರಿಸುತ್ತಿವೆ. ಪ್ರಯಾಣಿಕರ ಸಂಖ್ಯೆಯು ಸಾಮಾನ್ಯವಾಗಿದೆ. ಆಟೋಗಳು, ಶಿವಮೊಗ್ಗ- ಭದ್ರಾವತಿ ಟ್ರ್ಯಾಕ್ಸ್ಗಳು ಸಂಚರಿಸುತ್ತಿವೆ.
ಇದನ್ನೂ ಓದಿ- ರಾಗಿಗುಡ್ಡದಲ್ಲಿ ಕಲ್ಲು ತೂರಿ ಅಡಗಿ ಕುಳಿತಿದ್ದವರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದ ಪೊಲೀಸರು
ಅಂಗಡಿಗಳನ್ನು ಬಂದ್ ಮಾಡಿಸಿದ ಪೊಲೀಸ್
ಗಾಂಧಿ ಬಜಾರ್ ಮತ್ತು ಸುತ್ತಮುತ್ತ, ನೆಹರೂ ರಸ್ತೆ, ದುರ್ಗಿಗುಡಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಹಾಗಾಗಿ ಪ್ರಮುಖ ವಾಣಿಜ್ಯ ಕೇಂದ್ರದಲ್ಲಿ ವಾಣಿಜ್ಯೋದ್ಯಮ ಸ್ಥಗಿತವಾಗಿದೆ. ಉಳಿದೆಡೆ ವ್ಯಾಪಾರ ವಾಹಿವಾಟಿಗೆ ಯಾವುದೇ ಸಮಸ್ಯೆ ಆಗಿಲ್ಲ.
ಸಿಟಿಗೆ ಬರುತ್ತಿದ್ದಾರೆ ಜನ
ನಗರದಾದ್ಯಂತ ಜನ ಸಂಚಾರವು ಸಹಜವಾಗಿದೆ. ಗಾಂಧಿ ಜಯಂತಿ ಅಂಗವಾಗಿ ಸರ್ಕಾರಿ ರಜೆ ಇದೆ. ಹಾಗಾಗಿ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಬಂದ್ ಆಗಿವೆ. ರಜೆ ಇರುವುದರಿಂದ ಜನರು ಕುಟುಂಬ ಸಹಿತ ನಗರ ಸಂಚಾರಕ್ಕೆ ಬರುತ್ತಿದ್ದಾರೆ. ಆದರೆ ಅಂಗಡಿಗಳು ಬಂದ್ ಆಗಿದ್ದರಿಂದ ಶಾಪಿಂಗ್ ಮಾಡಲಾಗದೆ ನಿರಾಶರಾಗಿದ್ದಾರೆ.
ಇದನ್ನೂ ಓದಿ- JOBS – ಶಿವಮೊಗ್ಗದ ಎರಡು ಕಡೆ ಕೆಲಸ ಖಾಲಿ ಇದೆ
ಶಿವಮೊಗ್ಗ ನಗರ ಸಂಪೂರ್ಣ ಶಾಂತಿಯುತವಾಗಿದೆ. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಎಲ್ಲಡೆ ಗಸ್ತು ತಿರುಗುತ್ತಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422