ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 2 OCTOBER 2023
SHIMOGA : ಕಲ್ಲು ತೂರಾಟ (Stone Pelting) ಪ್ರಕರಣದ ಬಳಿಕ ರಾಗಿಗುಡ್ಡ ಖಾಕಿ ಭದ್ರ ಕೋಟೆಯಾಗಿದೆ. ನಿಷೇಧಾಜ್ಞೆ ಜಾರಿಯಾಗಿರುವುದರಿಂದ ಜನ ಗುಂಪುಗೂಡದಂತೆ ಎಚ್ಚರ ವಹಿಸಲಾಗಿದೆ. ಬಡಾವಣೆಯ ಒಳ ಮತ್ತು ಹೊರ ಹೋಗಲು ಸ್ಪಷ್ಟ ಕಾರಣ ತಿಳಿಸಬೇಕಾಗಿದೆ.
ಶನಿವಾರ ಸಂಜೆ ಈದ್ ಮಿಲಾದ್ ಮೆರವಣಿಗೆ ವೇಳೆ ರಾಗಿಗುಡ್ಡದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ (Stone Pelting) ನಡೆಸಿದ್ದರು. ಈ ಘಟನೆ ಬೆನ್ನಿಗೆ ರಾಗಿಗುಡ್ಡದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇನ್ನೊಂದೆಡೆ ಜನ ಗುಂಪುಗೂಡದಂತೆ ತಡೆಯಲು ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ- ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಕಾವು, ವಾಸ್ತವದಲ್ಲಿ ಹೇಗಿದೆ ಗೊತ್ತಾ ನಮ್ಮೂರು?
ಒಳ, ಹೊರ ಹೋಗಲು ಬೇಕು ಅನುಮತಿ
ರಾಗಿಗುಡ್ಡ ಬಡಾವಣೆಯ ಒಳ ಮತ್ತು ಹೊರ ಹೋಗಲು ಪೊಲೀಸರ ಅನುಮತಿ ಕಡ್ಡಾಯ. ಸ್ಪಷ್ಟ ಕಾರಣವಿದ್ದರಷ್ಟೆ ರಾಗಿಗುಡ್ಡ ಬಡಾವಣೆ ಪ್ರವೇಶಕ್ಕೆ ಪೊಲೀಸರು ಅನುಮತಿಸುತ್ತಿದ್ದಾರೆ. ಇಲ್ಲವಾದಲ್ಲಿ ಹಿಂತಿರುಗಿ ಹೋಗುವಂತೆ ಸೂಚಿಸುತ್ತಿದ್ದಾರೆ. ಇನ್ನು, ಬಡಾವಣೆಯ ಒಳಗು ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ವಿನಾಕಾರಣ ಮನೆಯಿಂದ ಹೊರಬಾರದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಹಾಗಾಗಿ ಮನೆಯಿಂದ ಹೊರಗೆ ಓಡಾಡುವವರಿಗೆ ಆಗಾಗ ಎಚ್ಚರಿಕೆ ಕೊಟ್ಟು ಒಳಗೆ ಕಳುಹಿಸುತ್ತಿದ್ದಾರೆ.
ಇದನ್ನೂ ಓದಿ- ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಪ್ರೀ ಪ್ಲಾನ್ ಘಟನೆ, KA 35, KA 19, UP ನೋಂದಣಿ ವಾಹನಗಳು ಎಲ್ಲಿ?
ರಾಗಿಗುಡ್ಡದಲ್ಲಿ ಎಲ್ಲವು ಸ್ಥಬ್ಧ
ನಿಷೇಧಾಜ್ಞೆ ಹಿನ್ನೆಲೆ ರಾಗಿಗುಡ್ಡ ಸಂಪೂರ್ಣ ಸ್ಥಬ್ಧವಾಗಿದೆ. ಮುಖ್ಯ ರಸ್ತೆಯಲ್ಲಿ ವಾಹನ ಮತ್ತು ಜನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ. ಅಂಗಡಿ, ಮುಂಗಟ್ಟು ಬಂದ್ ಆಗಿದೆ. ಕ್ಲಿನಿಕ್ ಮತ್ತು ಮೆಡಿಕಲ್ ಶಾಪ್ ಹೊರತು ಉಳಿದೆಲ್ಲ ಮಳಿಗೆಗಳ ಬಾಗಿಲು ಹಾಕಲಾಗಿದೆ.
ರಾಗಿಗುಡ್ಡ ಹೇಗಿದೆ ಈಗ? ಇಲ್ಲಿದೆ ಫೋಟೊ ಆಲ್ಬಂ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422