SHIVAMOGGA LIVE NEWS | 30 OCTOBER 2023
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
SHIMOGA : ಸೈಟ್ (site) ಕೊಡಿಸುವುದಾಗಿ ನಂಬಿಸಿ ಆಸ್ಪತ್ರೆಯೊಂದರ ಡಿ ಗ್ರೂಪ್ ನೌಕರನಿಗೆ 19.80 ಲಕ್ಷ ರೂ. ಹಣ ವಂಚನೆ ಮಾಡಲಾಗಿದೆ. ಹಂತ ಹಂತವಾಗಿ ಹಣ ಪಡೆದು ಸೈಟು ಕೊಡಿಸದೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಾಗರ ಆಸ್ಪತ್ರೆಯೊಂದರಲ್ಲಿ ಹೃತ್ವಿಕ್ ಎಂಬುವವರು ಡಿ ಗ್ರೂಪ್ ನೌಕರನಾಗಿದ್ದಾರೆ. ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾಗ ಅವರೊಂದಿಗೆ ಬಂದಿದ್ದ ವಿಶ್ವನಾಥ್ ಎಂಬಾತ ಹೃತ್ವಿಕ್‌ಗೆ ಪರಿಚಯವಾಗಿದ್ದ. ತಾನು ರಿಯಲ್ ಎಸ್ಟೇಟ್ ಉದ್ಯಮಿ ಎಂದು ನಂಬಿಸಿದ್ದ. ಶಿವಮೊಗ್ಗದಲ್ಲಿ ಸೈಟ್ ಕೊಡಿಸುವುದಾಗಿ ಭರವಸೆ ಮೂಡಿಸಿ ಮುಂಗಡ ಹಣ ಪಾವತಿಸುವಂತೆ ತಿಳಿಸಿದ್ದ.
ಇದನ್ನೂ ಓದಿ- ತುಂಗಾ ನದಿಯಲ್ಲಿ ಹಾಲು ವ್ಯಾಪಾರಿಯ ಮೃತದೇಹ ಪತ್ತೆ
ವಿಶ್ವನಾಥ್‌ನ ಮಾತು ನಂಬಿದ್ದ ಹೃತ್ವಿಕ್, ಹಂತ ಹಂತವಾಗಿ ಹಣವನ್ನು ಫೋನ್ ಪೇ ಮಾಡಿದ್ದ. ನಂತರ ವಿಶ್ವನಾಥ್, ರಾಮಚಂದ್ರ ಎಂಬಾತನನ್ನು ಪರಿಚಯಿಸಿದ್ದ. ಆತ ಸೈಟ್ ತೋರಿಸುವ ಭರವಸೆ ಕೊಟ್ಟು ಮತ್ತಷ್ಟು ಹಣ ಪಡೆದಿದ್ದ. ಒಟ್ಟು 19.80 ಲಕ್ಷ ರೂ. ಹಣ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ. ಸೈಟ್ ತೋರಿಸಿದ ಹಣವನ್ನು ಹಿಂತಿರುಗಿಸದೆ ವಂಚಿಸಲಾಗಿದೆ ಎಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ- ಶಿವಮೊಗ್ಗದಲ್ಲಿ ಫೈನಾನ್ಸ್ ಸಂಸ್ಥೆಯ ಬಾಗಿಲು ತೆಗೆದು ಒಳ ಹೋದ ಮ್ಯಾನೇಜರ್, ಸಿಬ್ಬಂದಿಗೆ ಕಾದಿತ್ತು ಶಾಕ್
LATEST NEWS
- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

- ಬಿಆರ್ಪಿ ಲೆಜೆಂಡ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ನೇಹ ಸಮ್ಮಿಲನ

- ನೆಹರು ರಸ್ತೆಯ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರ, ಯಾರೆಲ್ಲ ಬರ್ತಾರೆ? ಏನೆಲ್ಲ ಚರ್ಚೆಯಾಗಲಿದೆ?

About The Editor
ನಿತಿನ್ ಆರ್.ಕೈದೊಟ್ಲು






