ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 30 OCTOBER 2023
SHIMOGA : ಬಸ್ ನಿಲ್ದಾಣದಲ್ಲಿ ಜನ ದಟ್ಟಣೆ ಹೆಚ್ಚಿದ್ದಾಗ ಮಹಿಳೆಯ ಬ್ಯಾಗ್ನಿಂದ ಚಿನ್ನಾಭರಣ ಕಳ್ಳತನ (Theft) ಮಾಡಿದ್ದ ಕುಖ್ಯಾತ ಕಳ್ಳಿಯನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಮಂಜುನಾಥ ಬಡಾವಣೆ ಮುಖ್ಯರಸ್ತೆ ನಿವಾಸಿ ತಾಹೀರಾ ರೋಹಿ (30) ಬಂಧಿತಳು.
ಘಟನೆ ಹಿನ್ನೆಲೆ ಏನು?
ಭದ್ರಾವತಿಯ ಪ್ರಭು ಎಂಬುವವರನ್ನು ತಮ್ಮ ಪತ್ನಿ ಮತ್ತು ಮಕ್ಕಳನ್ನು ದಾವಣಗೆರೆಯಲ್ಲಿರುವ ಸಂಬಂಧಿಯ ಮನೆಗೆ ಕಳುಹಿಸಲು ಶಿವಮೊಗ್ಗದಲ್ಲಿ ಕೆಎಸ್ಆರ್ಟಿಸಿ ಬಸ್ ಹತ್ತಿಸಿದ್ದರು. ಬಸ್ ನ್ಯೂ ಮಂಡ್ಲಿಗೆ ತಲುಪಿದ ಸಂದರ್ಭ ಪ್ರಭು ಅವರಿಗೆ ಪತ್ನಿ ಕರೆ ಮಾಡಿದ್ದರು. ವ್ಯಾನಿಟಿ ಬ್ಯಾಗ್ನಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿದ ಎಂದು ತಿಳಿಸಿದ್ದರು. ಈ ಸಂಬಂಧ ಪ್ರಭು ಅವರು ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದರು.
ಇದನ್ನೂ ಓದಿ – ಹೆಂಡತಿ, ಮಕ್ಕಳನ್ನು ಬಸ್ ಹತ್ತಿಸಿ ಕಳುಹಿಸಿದ ಕೆಲವೇ ನಿಮಿಷಕ್ಕೆ ಬಂತು ಫೋನ್, ಪತಿಗೆ ಶಾಕ್, ಆಗಿದ್ದೇನು?
ಸಿಕ್ಕಿಬಿದ್ದಳು ಕುಖ್ಯಾತ ಕಳ್ಳಿ
ಘಟನೆ ಸಂಬಂಧ ತನಿಖೆಗೆ ದೊಡ್ಡಪೇಟೆ ಠಾಣೆ ಇನ್ಸ್ಪೆಕ್ಟರ್ ಅಂಜನ್ ಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಶ್ರೀನಿವಾಸ್, ಸಿಬ್ಬಂದಿ ಪಾಲಕ್ಷನಾಯ್ಕ್, ಲಚ್ಚಾನಾಯ್ಕ್, ಚಂದ್ರನಾಯ್ಕ್, ರಮೇಶ್, ನಿತಿನ್, ಸುಮಿತ್ರಾ ಬಾಯಿ ಅವರು ತನಿಖೆ ನಡೆಸಿದರು. ಆರೋಪಿ ತಾಹೀರಾ ರೋಹಿ ಎಂಬಾಕೆಯನ್ನು ಬಂಧಿಸಿದ್ದಾರೆ. ಈಕೆಯಿಂದ 22 ಗ್ರಾಂನ ಬಂಗಾರದ ನೆಕ್ಲೇಸ್, ಬಂಗಾರದ ಜುಮುಕಿ ವಶಕ್ಕೆ ಪಡೆದ್ದಾರೆ. ಇದರ ಮೌಲ್ಯ 1.29 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ – ಮೈಸೂರಿಗೆ ತೆರಳಿದ್ದ ಉಪನ್ಯಾಸಕಿಗೆ ಎದುರು ಮನೆಯವರಿಂದ ಬಂತು ಫೋನ್, ವಾಪಸಾದಾಗ ಕಾದಿತ್ತು ಶಾಕ್
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















