ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 18 NOVEMBER 2023
SHIMOGA : ಅಂಗಡಿಯೊಂದರ ಶೆಟರ್‌ನ ಬೀಗ ಮುರಿದು ನಗದು ಮತ್ತು ರೆಡಿಮೇಡ್ ಬಟ್ಟೆಗಳನ್ನು ಕಳ್ಳತನ (Theft) ಮಾಡಲಾಗಿದೆ. ಮರುದಿನ ಬೆಳಗ್ಗೆ ಅಂಗಡಿ ಬಾಗಿಲು ತೆಗೆಯಲು ಮಾಲೀಕರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಶಿವಮೊಗ್ಗದ ಹರ್ಷ ಕಾಂಪ್ಲೆಕ್ಸ್ ಪಕ್ಕದ ಗುರುರಾಜ ಕಾಂಪ್ಲೆಕ್ಸ್‌ನ ಮಹಡಿಯಲ್ಲಿರುವ ಸೈಬರ್ ಮತ್ತು ಬಟ್ಟೆ ಮಳಿಗೆಯಲ್ಲಿ ಘಟನೆ ಸಂಭವಿಸಿದೆ. ಸೆಂಥಿಲ್ ಕುಮಾರ್ ಅವರು ನ.16ರಂದು ರಾತ್ರಿ ಸೈಬರ್ ಮತ್ತು ಬಟ್ಟೆ ಮಳಿಗೆಯ ಬಾಗಿಲಿಗೆ ಬೀಗ ಹಾಕಿ ಹೋಗಿದ್ದರು. ನ.17ರಂದು ಬೆಳಗ್ಗೆ ಅಂಗಡಿ ಬಾಗಿಲು ತೆಗೆಯಲು ಬಂದಾಗ ಕಳ್ಳತನ (Theft) ಆಗಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ- ಬಾಕಿ ಸಾಲ 5 ಲಕ್ಷಕ್ಕೆ 1 ಕೋಟಿ ರೂ. ಬಡ್ಡಿ, ಕಂಗಾಲಾದ ರೈತ ಕುಟುಂಬ, ರೈತ ಸಂಘದಿಂದ ಬ್ಯಾಂಕ್ ಮುಂದೆ ಹೋರಾಟ
ಅಂಗಡಿಯ ಒಳಗೆ ಸೈಬರ್ ಕಂಪ್ಯೂಟರ್ ಕೆಳಗಿದ್ದ ಲಾಕರ್ ಮುರಿದು 12 ಸಾವಿರ ರೂ. ನಗದು ಕಳ್ಳತನ ಮಾಡಲಾಗಿದೆ. ಸುಮಾರು 96 ಸಾವಿರ ರೂ. ಮೌಲ್ಯದ ರೆಡಿಮೇಡ್ ಬಟ್ಟೆ ಕಳುವಾಗಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
LATEST NEWS
- ಸಹ್ಯಾದ್ರಿ ಉತ್ಸವ, ಸಮಗ್ರ ಪ್ರಶಸ್ತಿ ಇಂದಿರಾ ಗಾಂಧಿ ಮಹಿಳಾ ಕಾಲೇಜು ಮುಡಿಗೆ

- ಮಾವನ ಕುತ್ತಿಗೆ ಸೀಳಿ ಕೊಲೆಗೆ ಯತ್ನಿಸಿದ ಅಳಿಯ, ಎಲ್ಲಿ? ಕಾರಣವೇನು?

- ಗೆಜ್ಜೇನಹಳ್ಳಿಯಲ್ಲಿ ಹಿಟ್ ಅಂಡ್ ರನ್ ಅಪಘಾತ, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ಸಾವು

- ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಇವತ್ತು ಎಷ್ಟಿರಲಿದೆ ತಾಪಮಾನ?

- ತೀರ್ಥಹಳ್ಳಿಯ ಕುಡುವಳ್ಳಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸಚಿನ್ ಅಂತ್ಯಕ್ರಿಯೆ

About The Editor
ನಿತಿನ್ ಆರ್.ಕೈದೊಟ್ಲು
















