SHIVAMOGGA LIVE NEWS | 28 NOVEMBER 2023
HOLEHONNURU : ರಾಷ್ಟ್ರೀಯ ಹೆದ್ದಾರಿ ಡಾಂಬರೀಕರಣ ಹಿನ್ನೆಲೆ ಶಿವಮೊಗ್ಗ–ಚಿತ್ರದುರ್ಗ ರಸ್ತೆಯಲ್ಲಿ (road) ನ.28 ರಿಂದ 30ರವರೆಗೆ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
ಹೊಳೆಹೊನ್ನೂರು ಪಟ್ಟಣ ಮತ್ತು ಭದ್ರಾ ಸೇತುವೆ ಮೇಲೆ ಡಾಂಬರೀಕರಣ ಕಾರ್ಯ ನಡೆಸಲಾಗುತ್ತಿದೆ. ಸಂಚಾರ ದಟ್ಟಣೆ ತಪ್ಪಿಸಲು ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ.
ಇದನ್ನೂ ಓದಿ- ಸವಳಂಗ ರಸ್ತೆ ರೈಲ್ವೆ ಸೇತುವೆ ಕಾಮಗಾರಿ ಸ್ಥಳದಲ್ಲಿ ಅವಘಡ, ಮಣ್ಣು ಕುಸಿದು ಕಾರ್ಮಿಕ ಸಾವು
ಪರ್ಯಾಯ ಮಾರ್ಗ ಯಾವುದು?
ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ತೆರಳುವ ವಾಹನಗಳು : ಶಿವಮೊಗ್ಗ–ಹೊಳಲೂರು–ಮಂಗೋಟೆ–ಅರಹತೊಳಲು–ಕೈಮರ ಮೂಲಕ ತೆರಳಬೇಕು.
ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ತೆರಳುವ ವಾಹನಗಳು: ಕೈಮರದಿಂದ ಆನವೇರಿ ರಸ್ತೆ (road) ಮೂಲಕ ಮಂಗೋಟೆ – ಹೊಳಲೂರು ಮಾರ್ಗವಾಗಿ ಮತ್ತು ಕೈಮರದಿಂದ ದಾಸರಕಲ್ಲಹಳ್ಳಿ– ಅಗಸನಹಳ್ಳಿ – ನಾಗತಿಬೆಳಗಲು – ತಳ್ಳಿಕಟ್ಟೆ – ಬಾಬಳ್ಳಿ – ಭದ್ರಾವತಿ ಮೂಲಕ ಶಿವಮೊಗ್ಗದ ಕಡೆಗೆ ಸಂಚರಿಸಬಹುದು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200