ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 7 DECEMBER 2023
SHIMOGA : ನಗರದ ಫ್ರೀಡಂ ಪಾರ್ಕ್‌ನಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಬೃಹತ್ ಸ್ವದೇಶಿ ಮೇಳ ಆಯೋಜಿಸಲಾಗಿದೆ. ಮೊದಲ ದಿನವೇ ಸ್ವದೇಶಿ ಮೇಳಕ್ಕೆ ದೊಡ್ಡ ಸಂಖ್ಯೆಯ ಜನರು ಆಗಮಿಸಿದ್ದರು, ವಿವಿಧ ವಸ್ತುಗಳು, ಉತ್ಪನ್ನಗಳನ್ನು ಖರೀದಿಸಿದರು. ಬಗೆ ಬಗೆ ಖಾದ್ಯ ಸವಿದರು. ಅಲ್ಲದೆ ದೇಸಿ ಉತ್ಪನ್ನಗಳ ಕುರಿತು ಮಾಹಿತಿ ಪಡೆದರು.
ಸ್ವದೇಶಿ ಮೇಳದಲ್ಲಿ ಏನೇನಿದೆ? ಇಲ್ಲಿದೆ ಟಾಟ್ 10 ಸಂಗತಿ
ಸ್ವದೇಶಿ ಮೇಳದಲ್ಲಿ 200 ಸ್ಟಾಲ್ ಹಾಕಲಾಗಿದೆ. ಬೃಹತ್ ಪೆಂಡಾಲ್‌ನ ಅಡಿಯಲ್ಲಿ ಈ ಸ್ಟಾಲ್‌ಗಳನ್ನು ನಿರ್ಮಿಸಲಾಗಿದೆ.
ಪ್ರವೇಶ ದ್ವಾರದಲ್ಲಿ ಬೃಹತ್ ರಂಗೋಲಿ ಸ್ವಾಗತಿಸಲಿದೆ. ದೇಶಿಯ ತಳಿಯ ಗೋವುಗಳನ್ನು ಇರಿಸಲಾಗಿದೆ. ಗೋವುಗಳ ಕುರಿತು ಮಾಹಿತಿ ನೀಡಲು ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ.
ಬೃಹತ್ ಪೆಂಡಾಲ್‌ನ ಒಳಾಂಗಣದಲ್ಲಿ ಸ್ವದೇಶಿ ಜಾಗರಣ ಮಂಚ್ ವತಿಯಿಂದ ಮಾಹಿತಿ ಕೌಂಟರ್ ಸ್ಥಾಪಿಸಲಾಗಿದೆ. ಸೀರೆ ಉಟ್ಟು ಬರುವ ಮಹಿಳೆಯರಿಗೆ ಕೂಪನ್ ವಿತರಣೆ ಮಾಡಲಾಗುತ್ತದೆ. ಅಂತಹ ಮಹಿಳೆಯರಿಗೆ ಲಕ್ಕಿ ಡಿಪ್ ಮೂಲಕ ಬಹುಮಾನ ದೊರೆಯಲಿದೆ.
ಬೃಹತ್ ಪೆಂಡಾಲ್‌ನ ಅಡಿ ವಿವಿಧ ಖಾದಿ ಉತ್ಪನ್ನಗಳು, ಅಲಂಕಾರಿಕ ವಸ್ತುಗಳು, ಆಟಿಕೆ, ಪುಸ್ತಕ, ಆಯುರ್ವೇದ ಔಷಧ, ಕೃಷಿ ಉಪಕರಣಗಳು ಸೇರಿದಂತೆ ವಿವಿಧ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಜನ ಸರಾಗವಾಗಿ ಓಡಾಡಲು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.
ಬೃಹತ್ ಪೆಂಡಾಲ್‌ನ ಪಕ್ಕದಲ್ಲಿ ತಿಂಡಿ, ತಿನಿಸುಗಳ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ವಿವಿಧ ದೇಶೀಯ ತಿಂಡಿ, ತಿನಿಸು, ಚಾಟ್ಸ್ ಇಲ್ಲಿ ಲಭ್ಯ. ಸ್ಥಳದಲ್ಲೇ ಅಡುಗೆ ಸಿದ್ಧಪಡಿಸಿ ಗ್ರಾಹಕರಿಗೆ ಒದಗಿಸುವ ವ್ಯವಸ್ಥೆಯು ಇಲ್ಲಿದೆ.
ತಿಂಡಿ, ತಿನಿಸು ಸವಿಯುವವರಿಗೆ ಟೇಬಲ್ ಮತ್ತು ಚೇರುಗಳ ವ್ಯವಸ್ಥೆ ಇದೆ. ಕುಟುಂಬ ಸಹಿತ, ಸ್ನೇಹಿತರೊಂದಿಗೆ ಬಂದವರು ಕುಳಿತು ಆಹಾರ ಸೇವಿಸಬಹುದಾಗಿದೆ.
ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಗೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ವಿವಿಧ ಪ್ರದರ್ಶನ ಆಯೋಜಿಸಲಾಗಿದೆ. ಕೀಟ ಪ್ರಪಂಚ, ವಿವಿಧ ತಳಿಯ ಭತ್ತ, ಅಡಿಕೆ ಸಂಶೋಧನ ಕೇಂದ್ರ, ಮೀನು ಸಾಕಾಣಿಕೆ ಸೇರಿದಂತೆ ವಿವಿಧ ಮಳಿಗೆಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಮಾಹಿತಿ ನೀಡಲು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ನಿಯೋಜನೆ ಮಾಡಲಾಗಿದೆ.
ಮಕ್ಕಳು ಆಟವಾಡಲು ಮನರಂಜನಾ ವಿಭಾಗವಿದೆ. ಗೈಂಟ್ ವೀಲ್, ಸೀಸಾ ಬೋಟ್ ಸೇರಿದಂತೆ ವಿವಿಧ ಉಪಕರಣಗಳನ್ನು ಹಾಕಲಾಗಿದೆ.
ಸ್ವದೇಶಿ ಮೇಳದಲ್ಲಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಆಸಕ್ತರು ಇವುಗಳಲ್ಲಿ ನಿತ್ಯ ಪಾಲ್ಗೊಳ್ಳಬಹುದಾಗಿದೆ.
ಡಿ. 10ರವರಗೆ ಸ್ವದೇಶಿ ಮೇಳ ನಡೆಯಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶದ ಅವಕಾಶವಿದೆ. ಮೇಳದ ಕುರಿತು ಮಾಹಿತಿ ಒದಗಿಸಲು ಸ್ವಯಂ ಸೇವಕರನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಇದೇ ಮೊದಲು ಬೃಹತ್ ಸ್ವದೇಶಿ ಮೇಳ, ಏನೇನೆಲ್ಲ ಇರುತ್ತೆ? ಯಾವೆಲ್ಲ ಕಾರ್ಯಕ್ರಮ ನಡೆಯುತ್ತೆ? ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422