ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 DECEMBER 2023
SHIMOGA : ನಗರದಲ್ಲಿ ನೈಋತ್ಯ ರೈಲ್ವೆ ಬಳಕೆದಾರರ ಸಭೆ ನಡೆಯಿತು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಘದ ಶಾಂತಲಾ ಸ್ಪೆರೋಕಾಸ್ಟ್ ಸಭಾಂಗಣದಲ್ಲಿ ಸಭೆ ಆಯೋಜಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯ ರೈಲ್ವೆ ಕುರಿತು ಪ್ರಮುಖ ವಿಚಾರಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಹುಬ್ಬಳ್ಳಿ ವಲಯದ ನೈಋತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ನೇಮಕವಾಗಿರುವ ಕೆ.ವಿ.ವಸಂತ ಕುಮಾರ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ರೈಲ್ವೆ ಬಳಕೆದಾರರ ಅಹವಾಲು ಆಲಿಸಿದರು.
ಏನೇನೆಲ್ಲ ಸಲಹೆಗಳು ಬಂದವು?
ಸಲಹೆ 1 : ಜನಶತಾಬ್ದಿ ರೈಲು
ಶಿವಮೊಗ್ಗದ ಜನಶತಾಬ್ದಿ ರೈಲಿನಲ್ಲಿ ಶೌಚಾಲಯದ ಕೆಟ್ಟ ವಾಸನೆ ಬರುತ್ತದೆ. ಎಸಿ ಬೋಗಿಯಲ್ಲಿಯು ಇದೆ ಸ್ಥಿತಿ ಇದೆ. ರೈಲಿನಲ್ಲಿ ಕೆಲವು ಸೀಟುಗಳು ಹಾಳಾಗಿವೆ. ಅವುಗಳ ರಿಪೇರಿ ಕಾರ್ಯ ನಡೆಯುತ್ತಿಲ್ಲ.
ಸಲಹೆ 2 : ಇಂಟರ್ ಸಿಟಿ ರೈಲು
ತಾಳಗುಪ್ಪ – ಬೆಂಗಳೂರು ಇಂಟರ್‌ಸಿಟಿ ರೈಲು ತಡವಾಗಿ ಸಂಚರಿಸುತ್ತಿದೆ. ಭದ್ರಾವತಿಗೆ ತಡವಾಗಿ ಬರುತ್ತಿದೆ. ಈ ರೈಲಿನಲ್ಲಿ ಮೂರು ಹಳೆಯ ಬೋಗಿಗಳನ್ನು ಹಾಕಲಾಗಿದೆ. ಇದರಲ್ಲಿ ಸೀಟಿಂಗ್ ವ್ಯವಸ್ಥೆ ಕೂಡ ಸರಿ ಇಲ್ಲ.
ಸಲಹೆ 3 : ಹೆಚ್ಚುವರಿ ರೈಲು ಬೇಕು
ಶಿವಮೊಗ್ಗ – ಬೆಂಗಳೂರು ಮಧ್ಯೆ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ಆದ್ದರಿಂದ ಹೆಚ್ಚುವರಿ ರೈಲಿನ ಅಗತ್ಯವಿದೆ. ಯಶವಂತಪುರ – ಶಿವಮೊಗ್ಗ ರಾತ್ರಿ ರೈಲು ವಾರದಲ್ಲಿ ಮೂರು ದಿನ ಮಾತ್ರ ಸಂಚರಿಸುತ್ತಿದೆ. ಇದನ್ನು ವಾರ ಪೂರ್ತಿ ಓಡಿಸಬೇಕು.
ಸಲಹೆ 4 : ಶಿವಮೊಗ್ಗ ರೈಲ್ವೆ ನಿಲ್ದಾಣ
ಶಿವಮೊಗ್ಗ ರೈಲ್ವೆ ನಿಲ್ದಾಣದ ಶೌಚಾಲಯ ಸ್ವಚ್ಛವಾಗಿಲ್ಲ. ಕಳೆದ ಕೆಲ ದಿನದಿಂದ ಕ್ಯಾಂಟೀನ್ ಬಂದ್ ಆಗಿದೆ.
ಸಲಹೆ 5 : ಆಟೋ ನಿಲ್ದಾಣ ಮತ್ತು ಬಸ್ ವ್ಯವಸ್ಥೆ
ರೈಲ್ವೆ ನಿಲ್ದಾಣದ ಪ್ರವೇಶ ದ್ವಾರದಲ್ಲಿಯೇ ಆಟೋಗಳನ್ನು ನಿಲ್ಲಿಸಲಾಗುತ್ತದೆ. ಪ್ರತಿ ರೈಲು ಬಂದಾಗಲು ಪ್ರಯಾಣಿಕರು ಹೊರ ಬರಲು ಕಷ್ಟವಾಗುತ್ತದೆ. ಆಟೋಗಳ ನಿಲುಗಡೆಗೆ ವ್ಯವಸ್ಥೆ ಇದೆ. ಅಲ್ಲಿಯೇ ಅವು ನಿಲ್ಲುವಂತೆ ಮಾಡಬೇಕು. ಪ್ರೀಪೇಡ್ ಆಟೋ ವ್ಯವಸ್ಥೆ ಜಾರಿಗೊಳಿಸಬೇಕು. ಇನ್ನು, ರೈಲ್ವೆ ನಿಲ್ದಾಣಕ್ಕೆ ಬಸ್ ವ್ಯವಸ್ಥೆ ಬೇಕು.
ಸಲಹೆ 6 : ಭದ್ರಾವತಿ ರೈಲ್ವೆ ನಿಲ್ದಾಣ
ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ. ಕೆಲವು ರೈಲು ತಡವಾಗಿ ಬಂದಾಗ ಅವುಗಳ ಕುರಿತು ವಿಚಾರಿಸಿದಾಗ ಸೂಕ್ತ ವಿವರಣೆ ನೀಡುವುದಿಲ್ಲ. ರೈಲು ಟಿಕೆಟ್ ಬುಕ್ ಮಾಡಲು ತೆರಳಿದರೆ ಪ್ರಯಾಣಿಕರಿಂದಲೇ ರೈಲಿನ ನಂಬರ್ ಕೇಳಿ ಕಿರಿಕಿರಿ ಮಾಡುತ್ತಾರೆ. ಶೌಚಾಲಯದ ಸಮಸ್ಯೆ ಇದೆ. ಮಳೆ ಬಂದರೆ ನಿಲ್ದಾಣ ಸೋರುತ್ತದೆ.
ಇದನ್ನೂ ಓದಿ – ಬೆಂಗಳೂರು – ಶಿವಮೊಗ್ಗ ಎಷ್ಟು ಎಕ್ಸ್‌ಪ್ರೆಸ್ ರೈಲುಗಳಿವೆ? ಯಾವ್ಯಾವ ರೈಲಿನ ಟೈಮಿಂಗ್ ಏನು?
ಸಲಹೆ 7 : ಲೈನ್ ಡಬ್ಲಿಂಗ್, ಹೊಸ ಮಾರ್ಗ
ಬೀರೂರು – ಶಿವಮೊಗ್ಗ ಮಧ್ಯೆ ರೈಲ್ವೆ ಲೇನ್ ಡಬ್ಲಿಂಗ್ ಆಗಬೇಕು. ತಾಳಗುಪ್ಪ – ಹೊನ್ನಾವರ ರೈಲ್ವೆ ಮಾರ್ಗ ನಿರ್ಮಿಸಿದರೆ ಗೋವಾ, ಮುಂಬೈ ಸಂಪರ್ಕಕ್ಕೆ ಅನುಕೂಲ. ಶಿವಮೊಗ್ಗ – ಚಿಕ್ಕಜಾಜೂರು ರೈಲ್ವೆ ಮಾರ್ಗ ನಿರ್ಮಿಸಿದರೆ ಬಳ್ಳಾರಿ, ಚಿತ್ರದುರ್ಗ ಪ್ರಯಾಣಕ್ಕೆ ಅನುಕೂಲ. ಶಿವಮೊಗ್ಗದಿಂದ – ಹಾಸನ ಸಕಲೇಶಪುರ ಮಾರ್ಗದಲ್ಲಿ ರೈಲು ವ್ಯವಸ್ಥೆ ಮಾಡಿದರೆ ಕೇರಳ ಸಂಪರ್ಕ ಅನುಕೂಲ. ಶಿವಮೊಗ್ಗ – ಚಿಕ್ಕಮಗಳೂರು ರೈಲು ಸರಿಯಾದ ಟೈಮ್‌ಗೆ ಸಂಚರಿಸುತ್ತಿಲ್ಲ.
ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಕೆ.ವಿ.ವಸಂತ ಕುಮಾರ್ ಮಾತನಾಡಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ರೈಲ್ವೆ ಸಮಸ್ಯೆಗಳ ಕುರಿತ ಹೋರಾಟಕ್ಕೆ ಹಿಂದಿನಿಂದ ಸ್ಪಂದಿಸಿದೆ. ರೈಲ್ವೆ ನಿಲ್ದಾಣದಲ್ಲಿ ಆಟೋಗಳ ನಿಲುಗಡೆ ಸಮಸ್ಯೆ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಭೇಟಿಯಾಗಿ ಚರ್ಚೆ ನಡೆಸುತ್ತೇವೆ. ಭದ್ರಾವತಿ ರೈಲ್ವೆ ನಿಲ್ದಾಣಕ್ಕೂ ಭೇಟಿ ನೀಡಲಿದ್ದೇವೆ. ಇನ್ನು, ಸಭೆಯಲ್ಲಿನ ಸಲಹೆಗಳ ಕುರಿತು ರೈಲ್ವೆ ಇಲಾಖೆಯ ವಿಭಾಗೀಯ ಮತ್ತು ವಲಯ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಬಜೆಟ್‌ನಲ್ಲಿ ತರಲು ಸೂಕ್ತವೆನಿಸುವ ಸಂಗತಿಗಳಿದ್ದರೆ ಸಂಸದರೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದರು.
ಇದನ್ನೂ ಓದಿ – ಮೈಸೂರು-ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲುಗಳು, ಯಾವ್ಯಾವ ರೈಲಿನ ಟೈಮಿಂಗ್ ಏನು? ಇಲ್ಲಿದೆ ಲಿಸ್ಟ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422