ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿಗೆ ದಿಢೀರ್‌ ಮುತ್ತಿಗೆ, ಕಾರಿಗೆ ಅಡ್ಡಲಾಗಿ ಕುಳಿತು ಆಕ್ರೋಶ, ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 26 DECEMBER 2023

SHIMOGA : ಜಿಲಾ ಪಂಚಾಯಿತಿ ಮಾಜಿ ಸದಸ್ಯರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಗೆ ಅವಕಾಶವಿದ್ದರೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೀನಮೇಷ ಎಣಿಸುತ್ತಿದ್ದಾರೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಸಚಿವರಿಗೆ ತಿಳಿಸಿದರೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಿಗೆ ಸಿಇಒ ಅವರು ಅಗೌರವ ತೋರಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿಗೆ ದಿಢೀರ್‌ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಕೆಲಕಾಲ ಗೊಂದಲದ ಪರಿಸ್ಥಿತಿ ಉಂಟಾಗಿತ್ತು.

ಕಾರಿಗೆ ಅಡ್ಡ ಕುಳಿತ ಕಾರ್ಯಕರ್ತರು

ತಮ್ಮ ಬೇಡಿಕೆ ಈಡೇರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಸಿಇಒ ಅವರಿಗೆ ಆಗ್ರಹಿಸಿದರು. ಆದರೆ ಸಿಇಒ ಸ್ನೇಹಲ್‌ ಸುಧಾಕರ್‌ ಲೋಖಂಡೆ ಅವರು ಸಮರ್ಪಕ ಉತ್ತರ ನೀಡಲಿಲ್ಲ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಅವರ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ ಸಿಇಒ ಅವರು ಕಚೇರಿಯಿಂದ ಹೊರ ಬಂದು ಕಾರು ಹತ್ತಲು ಮುಂದಾದರು. ಆಗ ಕಾಂಗ್ರೆಸ್‌ ಕಾರ್ಯಕರ್ತರು ಅವರ ಕಾರಿಗೆ ಅಡ್ಡಲಾಗಿ ಕುಳಿತು ಆಕ್ರೋಶ ವ್ಯಕ್ತಪಡಿಸಿದರು.

ಹಾಗಾಗಿ ತಮ್ಮ ಕಚೇರಿಯ ಮೀಟಿಂಗ್‌ ಚೇಂಬರ್‌ಗೆ ತರಳಿ ಬಾಗಿಲು ಬಂದ್‌ ಮಾಡಿಕೊಂಡರು. ಅವರ ಹಿಂದೆಯೇ ಕಾಂಗ್ರೆಸ್‌ ಕಾರ್ಯಕರ್ತರು ಕಚೇರಿಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಸಮಾಧಾನಪಡಿಸಲು ಯತ್ನಿಸಿದರು.

ಕಾಂಗ್ರೆಸಿಗರು ಹೇಳಿದ್ದೇನು?

ಸುದ್ದಿಗಾರರೊಂದಿಗೆ ಮಾತನಾಡಿದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಮುಖಂಡ ಡಾ. ಶ್ರೀನಿವಾಸ್‌ ಕರಿಯಣ್ಣ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಬೈಲಾ ಪ್ರಕಾರ ಸ್ಥಳೀಯ ಜನಪ್ರತಿನಿಧಿಗಳಿಗೆ ಅನುದಾನ ಹಂಚಿಕೆಗೆ ಅವಕಾಶವಿದೆ. ಆದರೆ ಸಿಇಒ ಅವರು ಒಮ್ಮೆ ಅನುದಾನ ಕೊಡುತ್ತೇನೆ ಎನ್ನುತ್ತಾರೆ. ಮತ್ತೊಮ್ಮೆ ಶಾಸಕರಿಗೆ ಮಾತ್ರ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸುತ್ತಿದ್ದಾರೆ. ಅನುದಾನ ಕೇಳಿದ ಜಿಲಾ ಪಂಚಾಯಿತಿ ಮಾಜಿ ಸದಸ್ಯರನ್ನು ನಿಂದಿಸುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವರು ಅನುದಾನ ಬಿಡುಗಡೆಗೆ ಸೂಚಿಸಿದ್ದರೂ ಸಿಇಒ ಅವರು ಅದರಂತೆ ನಡೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Congress leaders protest against Zilla Panchayat CEO in Shimoga

ಸಿಇಒ ಜೊತೆಗೆ ಸಭೆ

ಇನ್ನು, ವಿಷಯ ತಿಳಿಯುತ್ತಿದ್ದಂತೆ ಕಾಂಗ್ರೆಸ್‌ ಪಕ್ಷದ ಮತ್ತಷ್ಟು ಮುಖಂಡರು ಜಿಲ್ಲಾ ಪಂಚಾಯಿತಿ ಕಚೇರಿಗೆ ಆಗಮಿಸಿ ಸಿಇಒ ಅವರ ಜೊತೆಗೆ ಸಭೆ ನಡೆಸಿದರು. ಪೊಲೀಸರು ಕೂಡ ಕಾಂಗ್ರೆಸ್‌ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.

Congress leaders protest against Zilla Panchayat CEO in Shimoga

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶಾಂತವೀರ ನಾಯ್ಕ್‌, ಗಿರೀಶ್‌, ಕಾಂಗ್ರೆಸ್‌ ಮುಖಂಡರಾದ ಹೆಚ್‌.ಸಿ.ಯೋಗೇಶ್‌, ದೇವೇಂದ್ರಪ್ಪ, ಸೂಡೂರು ಶಿವಣ್ಣ ಸೇರಿದಂತೆ ಹಲವರು ಈ ಸಂದರ್ಭ ಹಾಜರಿದ್ದರು.

Congress leaders protest against Zilla Panchayat CEO in Shimoga

ಇದನ್ನೂ ಓದಿ – ರಸ್ತೆ ಅಪಘಾತ, ಶಾಸಕ ಸಂಗಮೇಶ್ವರ್‌ ಆಪ್ತ ಸಹಾಯಕ ಸಾವು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 26, 2023

ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಬ್ಯಾಂಕ್‌ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಯಾಕೆ?

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್‌ 2026 – ಅಡಿಕೆ ಧಾರಣೆ

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್‌, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್‌

Leave a Comment