ಉದ್ಯಮಿ ರುದ್ರೇಗೌಡರ ಯಶಸ್ಸಿನ ಸೀಕ್ರೆಟ್‌ ತಿಳಿಸಿದ ಮಾಜಿ ಸಿಎಂ ಯಡಿಯೂರಪ್ಪ, ಏನದು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 27 JANUARY 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : 75 ವರ್ಷ ಪೂರೈಸಿದ ಕೈಗಾರಿಕೋದ್ಯಮಿ, ವಿಧಾನ ಪರಿಷತ್‌ ಸದಸ್ಯ ಎಸ್‌.ರುದ್ರೇಗೌಡ ಅವರಿಗೆ ಅಮೃತಮಯಿ ಹೆಸರಿನಲ್ಲಿ ಗೌರವಿಸಲಾಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ವಿ.ಪಾಟೀಲ್‌ ಅವರು ಅಭಿನಂದಿಸಿದರು.

ನವುಲೆಯ ಸರ್ಜಿ ಕನ್ವೆನ್‌ಷನ್‌ ಹಾಲ್‌ ಆವರಣದಲ್ಲಿ ಆಯೋಜಿಸಿದ್ದ ಅಮೃತಮಯಿ ಅಭಿನಂದನಾ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉದ್ಘಾಟಿಸಿದರು. ಇದೇ ವೇಳೆ ರುದ್ರೇಗೌಡ ಅವರ ಸಾಕ್ಷ್ಯ ಚಿತ್ರ ಪ್ರದರ್ಶನ, ಎಸ್‌.ರುದ್ರೇಗೌಡ ದಿ ಐರನ್‌ ಮ್ಯಾನ್‌ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಯಾರೆಲ್ಲ ಏನೇನು ಹೇಳಿದರು?

ಮಾನವೀಯ ಮೌಲ್ಯಕ್ಕೆ ಆದ್ಯತೆ

ಬಿ.ವೈ.ರಾಘವೇಂದ್ರ, ಸಂಸದ : ಎಸ್.ರುದ್ರೇಗೌಡ ಅವರು ಮಾನವೀಯ ಮೌಲ್ಯಕ್ಕೆ ಆದ್ಯತೆ ನೀಡುವ ಮತ್ತು raghavendraಅತ್ಯಂತ ಸೂಕ್ಷ್ಮಮತಿಯಾಗಿದ್ದಾರೆ. ಜಿಲ್ಲೆ ಮತ್ತು ರಾಜ್ಯದಲ್ಲಿ ಎಲೆಮರೆ ಕಾಯಿಯಂತೆ ಧಾರ್ಮಿಕ ಕ್ಷೇತ್ರದಲ್ಲು ಸೇವೆ ಸಲ್ಲಿಸುತ್ತಿದ್ದಾರೆ. ಲೋಕಸೇವೆ ಆಯೋಗದ ಸದಸ್ಯರಾಗಿ, ರಾಜಕಾರಣಿಯಾಗಿ, ಉದ್ಯಮಿಯಾಗಿ ಯಶಸ್ವಿಯಾಗಿದ್ದಾರೆ. ಯುವ ಪೀಳಿಗೆಗೆ ಅವರ ಜೀವನ ಮಾರ್ಗದರ್ಶನ ಆಗಲಿದೆ.

ಗೊನೆ ಹೊತ್ತ ಬಾಳೆಯ ಹಾಗೆ

ಬಿ.ಎಲ್.ಶಂಕರ್‌, ಮಾಜಿ ಸಭಾಪತಿ, ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ : ಶ್ರೀಮಂತಿಕೆ, ಅಧಿಕಾರ ಬಂದಾಗ bl-shankarಸಾಮಾನ್ಯರ ನಡವಳಿಕೆ ಬದಲಾಗುವುದು ಪ್ರಕೃತಿ ನಿಯಮ ಎಂಬಂತೆ ವರ್ತಿಸುತ್ತಾರೆ. ಅದರೆ ರುದ್ರೇಗೌಡ ಅವರು ಗೊನೆ ಹೊತ್ತ ಬಾಳೆಯ ಹಾಗೆ, ತನೆ ಹೊತ್ತ ದಂಟು, ಫಲ ಹೊತ್ತ ರೆಂಬೆಯ ಹಾಗೆ ಬಾಗಿದ್ದಾರೆ. ಅವರೆಂದು ಬೀಗಿದವರಲ್ಲ. ಉದ್ಯಮಿಯಾಗಿ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 15ಕ್ಕೂ ಹೆಚ್ಚು ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದಾರೆ. ಉದ್ಯಮಿಯಾಗಿ ಒಬ್ಬರೆ ಬೆಳೆಯದೆ ನೂರಾರು ಮಂದಿಯನ್ನು ಉದ್ಯಮಿಗಳನ್ನಾಗಿಸಿದ್ದಾರೆ.  ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿದ್ದಾಗ 38 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ. ಎಲ್ಲಾ ಜಿಲ್ಲೆಗಳಿಗು ಪ್ರಾತಿನಿಧ್ಯ ಸಿಗುವಂತೆ ಮಾಡಿದ್ದರು. ಲೋಕಸೇವಾ ಆಯೋಗದ ಹಿಂದಿನ ಸಿಲಬಸ್‌ ಬದಲಾಯಿಸುವ ಸಾಹಸದ ಕೆಲಸ ಮಾಡಿದ್ದರು. ಕೊನೆಗೆ ಯುಪಿಎಸ್‌ಸಿ ಕೂಡ ಇದೇ ಮಾದರಿಯ ಸಿಲಬಸ್‌ ಅಳವಡಿಸಿಕೊಂಡಿದೆ.

ಮೃಗತ್ವದಿಂದ ಮನುಷ್ಯತ್ವದೆಡೆ, ದೈವತ್ವದೆಡೆ ಸಾಗಬೇಕು

ನ್ಯಾ.ಶಿವರಾಜ್‌ ವಿ.ಪಾಟೀಲ್‌, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ : ಜೀವನ ಪ್ರತಿ ವ್ಯಕ್ತಿಗೆ ಭಗವಂತ shivaraj-patilಕೊಟ್ಟ ದೊಡ್ಡ ಅವಕಾಶ. ಅರ್ಥಪೂರ್ಣವಾಗಿ ಜೀವನ ನಡೆಸಬೇಕು. ಜೀವನ ಪ್ರಯೋಜನಕ್ಕೆ ಹೊರತು ಪ್ರಚಾರಕ್ಕಲ್ಲ. ಜೀವನವಿರುವುದು ಸಾರ್ಥಕತೆಗೆ ಹೊರತು ಸ್ವಾರ್ಥಕ್ಕಲ್ಲ. ಹಾಗಾಗಿ ಸಾಧಕರನ್ನು ಗುರುತಿಸಿ, ಗೌರವಿಸುವುದು ಸಮಾಜ ಮತ್ತು ಸರ್ಕಾರದ ಕರ್ತವ್ಯ. ಉತ್ತಮರನ್ನು ಗುರುತಿಸುವುದು ಶ್ರೇಷ್ಠ ಕೆಲಸ ಅನ್ನುತ್ತೇವೆ. ಆದರೆ ಉತ್ತಮ ಮನುಷ್ಯರಾಗಿರುವುದು ಎಲ್ಲಕ್ಕಿಂತಲು ದೊಡ್ಡ ಪ್ರಶಸ್ತಿ. ಪ್ರತಿಯೊಬ್ಬರು ಮೃಗತ್ವದಿಂದ ಮನುಷ್ಯತ್ವದೆಡೆ ಸಾಗಬೇಕು. ಮನುಷ್ಯತ್ವದಿಂದ ದೈವತ್ವ ಕಡೆಗೆ ಸಾಗಬೇಕು. ಅದೇ ಸಾರ್ಥಕ್ಯ. ಅಂತೆಯೇ ರುದ್ರೇಗೌಡ ಅವರು ಎಂದೂ ಸನ್ಮಾನಕ್ಕಾಗಿ ಕೆಲಸ ಮಾಡಿದವರಲ್ಲ.

‘ಇದೇ ರುದ್ರೇಗೌಡರ ಯಶಸ್ಸಿಗೆ ಕಾರಣʼ

ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ : ಅಮೃತಮಯಿ ಎಂಬ ಹೆಸರೆ ರೋಮಾಂಚನಕಾರಿ. ಇದು ಪರಿಶುದ್ಧ yedyurappaವ್ಯಕ್ತಿತ್ವಕ್ಕೆ ಸಿಕ್ಕ ಗೌರವ. ರುದ್ರೇಗೌಡರ ಜೀವನ ಎಲ್ಲರಿಗು ಮಾದರಿ. ಯುವಕರಿಗೆ ಸ್ಪೂರ್ತಿ. ವಯಸ್ಸು ದೇಹಕ್ಕೆ ಆಗುತ್ತದೆ. ಮನಸಿಗಲ್ಲ. ರುದ್ರೇಗೌಡರಲ್ಲಿ ಇನ್ನೂ ಸಾದಿಸುವ ಛಲ, ಹಂಬಲ ಇರುವುದು ಇದಕ್ಕೆ ಸಾಕ್ಷಿ. ವ್ಯಕ್ತಿ ಶ್ರೀಮಂತನಾಗಿ, ವಿದ್ಯಾವಂತ, ಪ್ರತಿಭಾವಂತನಾಗಿದ್ದರೆ ಪರಿಗಣನೆ ಸಿಗುವುದಿಲ್ಲ. ಬದಲಾಗಿ ಸಾರ್ವಜನಿಕ ಸೇವೆಯಿಂದ ಜೀವನೋತ್ಸಾಹ ಹೆಚ್ಚಲಿದೆ. ರುದ್ರೇಗೌಡ ಅವರು ಎಂದಿಗೂ ಸ್ಥಾವರವಾಗಲಿಲ್ಲ. ಬದಲಿಗೆ ಜಂಗಮವಾದರು. ಇದೆ ಅವರ ಯಶಸ್ಸಿಗೆ ಕಾರಣ.

ವಿಶ್ವಕ್ಕೆ ಶಿವಮೊಗ್ಗವನ್ನು ಪರಿಚಯಿಸಿದರು

ಕೆ.ಎಸ್.ಈ‍ಶ್ವರಪ್ಪ, ಮಾಜಿ ಸಚಿವ : ವಿಶ್ವಕ್ಕೆ ಶಿವಮೊಗ್ಗವನ್ನು ಪರಿಚಯಿಸಿದ ಹಿರಿಮೆ ರುದ್ರೇಗೌಡ ಅವರದ್ದು. ಆದ್ದರಿಂದ ಅವರಿಗೆ ಹೆಚ್ಚಿನ ಆಯಸ್ಸು ಕರುಣಿಸಲಿ.

ಸಂಘದ ಜವಾಬ್ದಾರಿ ನಿಭಾಯಿಸುತ್ತೇನೆ ಎಂದಿದ್ದರು

ಪಟ್ಟಾಭಿರಾಮ್‌, ಆರ್‌ಎಸ್‌ಎಸ್‌ ಸಹ ಕಾರ್ಯವಾಹ : ರಾಘವೇಂದ್ರ ಅವರು ಸಂಸತ್‌ ಚುನಾವಣೆಗೆ ಪ್ರವೇಶಿಸುವ pattabhiramಮೊದಲು ಸಂಘದಲ್ಲಿ ರುದ್ರೇಗೌಡ ಅವರ ಹೆಸರು ಚರ್ಚೆಯಾಗಿತ್ತು. ಅವರ ಮನೆಗೆ ಹೋಗಿ ಚರ್ಚಿಸಿದಾಗ ರಾಜಕೀಯಕ್ಕೆ ಬರುವುದಿಲ್ಲ. ಸಂಘದ ಜವಾಬ್ದಾರಿ ನಿಭಾಯಿಸುತ್ತೇನೆ ಎಂದಿದ್ದರು. ರುದ್ರೇಗೌಡ ಅವರು ಉತ್ತಮ ಶೀಲ ಹೊಂದಿರುವ ಸ್ವಯಂ ಸೇವಕ.

ನಂಜಪ್ಪ ಆಸ್ಪತ್ರೆ ಮ್ಯಾನೇಜಿಂಗ್‌ ಟ್ರಸ್ಟಿ ಬೆನಕಪ್ಪ ಅಧ್ಯಕ್ಷತೆ ವಹಿಸಿದ್ದರು. ಕೈಗಾರಿಕೋದ್ಯಮಿ ಬಿ.ಸಿ.ನಂಜುಂಡ ಶೆಟ್ಟಿ, ಶಾಂತಲಾ ಡಿ.ಜಿ ಶಿವಣ್ಣೆಗೌಡ, ಹೊನ್ನಾಳಿ ಶಾಸಕ ಶಾಂತನಗೌಡ, ಎಂ.ಬಿ.ಭಾನುಪ್ರಕಾಶ್‌, ಕೆ.ಬಿ.ಅಶೋಕ ನಾಯ್ಕ್‌, ಜ್ಯೋತಿ ಪ್ರಕಾಶ್‌, ಆರ್.ಕೆ.ಸಿದ್ದರಾಮಣ್ಣ, ಹೆಚ್.ಎಂ.ಚಂದ್ರಶೇಖರಪ್ಪ, ಕೆ.ಬಿ.ಪ್ರಸನ್ನ ಕುಮಾರ್‌, ಎನ್.ಗೋಪಿನಾಥ್‌, ಮಾಚೇನಹಳ್ಳಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಮೇಶ್‌ ಹೆಗಡೆ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಇದ್ದರು. 

ಇದನ್ನೂ ಓದಿ – ಸಾಗರದಲ್ಲಿ ಸಾಹಿತಿ ನಾ.ಡಿಸೋಜಾಗೆ ನಾಗರಿಕರ ಪರವಾಗಿ ಸನ್ಮಾನ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment