‘ಸಿದ್ದರಾಮಯ್ಯ ನೇತೃತ್ವದ ನಾಟಕ ಕಂಪನಿ, ಸರ್ಕಾರದ ದುಡ್ಡಲ್ಲಿ ಶಾಸಕರನ್ನು ದೆಹಲಿಗೆ ಕರೆದೊಯ್ಯುತ್ತಿದೆʼ

SHIVAMOGGA LIVE NEWS | 7 FEBRUARY 2024

SHIMOGA : ಸಿದ್ದರಾಮಯ್ಯ ನೇತೃತ್ವದ ನಾಟಕ ಕಂಪನಿ ಸಾಮಾನ್ಯ ಜನರ ತೆರಿಗೆ ಹಣದಲ್ಲಿ ದೆಹಲಿಗೆ ಹೋಗುತ್ತಿದೆ. ಚುನಾವಣೆ ಪ್ರಚಾರಕ್ಕಾಗಿ ಕಾಂಗ್ರೆಸ್‌ ನಡೆಸುತ್ತಿರುವ ಕುತಂತ್ರ ಇದು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್‌ ಹೋರಾಟವನ್ನು ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದೆ ಕೆ.ಎಸ್.ಈಶ್ವರಪ್ಪ, ಮಹಾತ್ಮ ಗಾಂಧೀಜಿ ಫೋಟೊ ಪಕ್ಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಭಾವಚಿತ್ರವಿರುವ ಜಾಹೀರಾತು ಪ್ರಕಟಿಸಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಹೋರಾಟ ಹಮ್ಮಿಕೊಂಡಿದ್ದರೆ ತಕರಾರು ಇರುತ್ತಿರಲಿಲ್ಲ. ಆದರೆ ಸರ್ಕಾರದ ಖರ್ಚಿನಲ್ಲಿ ಹೋರಾಟ ನಡೆಸಲಾಗುತ್ತಿದೆ. ಇದರ ಜಾಹೀರಾತು, ದೆಹಲಿಗೆ ಹೋಗಿ ಬರುವ ಖರ್ಚು ವೆಚ್ಚವನ್ನು ಸರ್ಕಾರವೆ ಭರಿಸಬೇಕಾಗುತ್ತದೆ. ಚುನಾವಣೆ ಪ್ರಚಾರಕ್ಕಾಗಿ ಕಾಂಗ್ರೆಸ್‌ ನಡೆಸುತ್ತಿರುವ ಕುತಂತ್ರ ಇದು ಎಂದು ಟೀಕಿಸಿದರು.  

ಪಾಪರ್‌ ಸರ್ಕಾರ, ತೆರಿಗೆ ಹಣದಲ್ಲಿ ಟ್ರಿಪ್‌

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿದ್ದರು. ತರಿಗೆ ವಿಚಾರವಾಗಿ ಎಲ್ಲವನ್ನು ಸ್ಪಷ್ಟಪಡಿಸಿದ್ದೇನೆ ಎಂದು ನಿರ್ಮಿಲಾ ಸೀತಾರಾಮನ್‌ ಅವರು ಲೋಕಸಭೆಯಲ್ಲಿ ತಿಳಿಸಿದ್ದಾರೆ. ಉತ್ತರ ಸಮಾಧಾನ ಆಗದಿದ್ದರೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಬ್ಬರೆ ಪುನಃ ತೆರಳಿ ಸ್ಪಷ್ಟನೆ ಕೇಳಬಹುದಿತ್ತು ಎಂದು ಈಶ್ವರಪ್ಪ ತಿಳಿಸಿದರು.

ಇದನ್ನೂ ಓದಿ – ಡಿಸಿ ಕಚೇರಿಗೆ ಗೋವುಗಳನ್ನು ತಂದು ಹೋರಾಟ, ‘ಸರ್ಕಾರಕ್ಕೆ ರೈತರು, ಗೋವುಗಳ ಶಾಪ ಶತಸಿದ್ಧ’

ಸರ್ಕಾರ ಪಾಪರ್‌ ಆಗಿದೆ. ಈಗ ಎಲ್ಲ ಶಾಸಕರನ್ನು ಸರ್ಕಾರದ ದುಡ್ಡಿನಲ್ಲಿ ದೆಹಲಿ ಟ್ರಿಪ್‌ ಕರೆದೊಯ್ಯುತ್ತಿದ್ದಾರೆ. ಸಾಮಾನ್ಯ ಜನರ ತೆರಿಗೆ ಹಣದಲ್ಲಿ ಸಿದ್ದರಾಮಯ್ಯ ನೇತೃತ್ವದ ನಾಟಕ ಕಂಪನಿ ದೆಹಲಿಗೆ ಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

KS-Eshwarappa-Press-meet

Leave a Comment