ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 19 FEBRUARY 2024
ANAVATTI : ಯಾರೂ ಇಲ್ಲದ ವೇಳೆ ಮನೆ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಲಾಗಿದೆ. ಸೊರಬ ತಾಲೂಕು ಜಡೆ ಮಾಕೊಪ್ಪ ಗ್ರಾಮದ ಸದಾಶಿವಗೌಡ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ.
ಸದಾಶಿವಗೌಡ ಮತ್ತು ಅವರ ಪತ್ನಿ ಶಿರಸಿಯಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದಾಗ ಘಟನೆ ಸಂಭವಿಸಿದೆ. ಪಕ್ಕದ ಮನೆಯವರು ಕರೆ ಮಾಡಿ ಮನೆ ಬಾಗಿಲು ತೆಗೆದಿದ್ದು, ಕಳ್ಳತನವಾಗಿರುವ ಶಂಕೆ ಇದೆ ಎಂದು ತಿಳಿಸಿದರು. ಕೂಡಲೆ ಸದಾಶಿವಗೌಡ ಅವರು ಶಿರಸಿಯಿಂದ ಮನೆಗೆ ಮರಳಿದಾಗ ಬಾಗಿಲಿನ ಬೀಗ ಮುರಿದಿರುವುದು ಗೊತ್ತಾಗಿದೆ.
ಕೊಠಡಿಯಲ್ಲಿ ಇದ್ದ ಕೀ ಬಳಸಿ ಬೀರು ತೆಗೆದು ಬಟ್ಟೆ ಮತ್ತು ಇತರೆ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಬೀರುವಿನ ಒಳಗೆ ಇಟ್ಟಿದ್ದ 9.35 ಲಕ್ಷ ರೂ. ಮೌಲ್ಯದ ವಿವಿಧ ಆಭರಣಗಳು, 1.30 ಲಕ್ಷ ರೂ. ನಗದು ಕಳುವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇದನ್ನೂ ಓದಿ – ಶಿರಾಳಕೊಪ್ಪದಲ್ಲಿ ಸ್ಪೋಟ ಪ್ರಕರಣ, ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದೇನು?
LATEST NEWS
- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

- ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

- ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

About The Editor
ನಿತಿನ್ ಆರ್.ಕೈದೊಟ್ಲು
















