ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 29 APRIL 2024
SHIMOGA : ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ಅವಕಾಶಗಳಿವೆ. ಇಸ್ರೋದ ನೆರವಿನಿಂದ ಸ್ಟಾರ್ಟ್ ಅಪ್‌ಗಳನ್ನು ತೆರೆದುಕೊಳ್ಳಲಿವೆ. ಯುವಕರು ಈ ಕುರಿತು ಗಮನ ಹರಿಸಬೇಕು ಎಂದು ಇಸ್ರೋ ವಿಜ್ಞಾನಿ ಕೆ.ಎಲ್.ಶಿವಾನಿ ತಿಳಿಸಿದರು.
ಬಹುಮುಖಿ ಸಂಸ್ಥೆ ವತಿಯಿಂದ ಕಮಲಾ ನೆಹರೂ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಇಸ್ರೋ ವಿಜ್ಞಾನಿ ಕೆ.ಎಲ್.ಶಿವಾನಿ, ಇಸ್ರೋ ಸಂಸ್ಥೆಯ ನೆರವಿನಿಂದ ದೇಶದಲ್ಲಿ 100ಕ್ಕೂ ಹೆಚ್ಚು ಸ್ಟಾರ್ಟ್ ಅಪ್‌ಗಳನ್ನು ಪ್ರಾರಂಭವಾಗಿವೆ. 2047ರವರೆಗೆ ಇಸ್ರೋ ಸಂಸ್ಥೆ ವಿವಿಧ ಬಾಹ್ಯಾಕಾಶ ಯೋಜನೆಗಳನ್ನು ರೂಪಿಸಿದೆ. ಮತ್ತಷ್ಟು ಸ್ಟಾರ್ಟ್ ಅಪ್‌ಗಳಿವೆ ಅವಕಾಶವಾಗಲಿದೆ. ಈ ಮೂಲಕ ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸುತ್ತಿದೆ ಎಂದರು.
ಕನ್ನಡ ಮಾಧ್ಯಮದಲ್ಲಿ ಓದಿದವರು ಎಂಬ ಹಿಂಜರಿಕೆ ಬೇಡ. ಕಠಿಣ ಪರಿಶ್ರಮದಿಂದ ಸಾಧನೆ ಮಾಡಬಹುದು. ಮಹಿಳೆಯರಿಗು ಇಸ್ರೋ ಸಂಸ್ಥೆಯಲ್ಲಿ ವಿಫುಲ ಅವಕಾಶಗಳಿವೆ ಎಂದರು.
ಬಹುಮುಖಿ ಸಂಸ್ಥೆಯ ಡಾ.ನಾಗಭೂಷಣ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ – ಇನ್ನು ಎಂಟೆ ದಿನ ಬಾಕಿ, ಯಾವ್ಯಾವ ಅಭ್ಯರ್ಥಿಗಳು ಯಾವೆಲ್ಲ ಅಜೆಂಡ ಇಟ್ಟುಕೊಂಡು ಪ್ರಚಾರ ನಡೆಸ್ತಿದ್ದಾರೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422