ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 29 APRIL 2024
ELECTION NEWS : ಶಿವಮೊಗ್ಗದ ಸಿಟಿ ಸೆಂಟರ್ ಮಾಲ್‌ನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಮತದಾನ ಜಾಗೃತಿ ವೇದಿಕೆ ವತಿಯಿಂದ ಚುನಾವಣ ಮಾಡಲ್ ಸ್ಥಾಪಿಸಲಾಗಿದೆ. ಮಾಲ್‌ನ ಪ್ರವೇಶ ದ್ವಾರದಲ್ಲಿ ತೋರು ಬೆರಳಿಗೆ ಶಾಹಿ ಹಾಕಿರುವ ಮಾದರಿಯನ್ನು ಸ್ಥಾಪಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ಉದ್ಘಾಟಿಸಿದರು. ಕಲಾವಿದ ಸತೀಶ ಪುರಪ್ಪೆಮನೆ ಮಾಡಲ್ ಸಿದ್ಧಪಡಿಸಿದ್ದಾರೆ.
ಕಳೆದ ಬಾರಿ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಶೇ.76 ರಷ್ಟು ಮತದಾನವಾಗಿದೆ. ನಗರ ಪ್ರದೇಶದಲ್ಲಿ ಶೇ.60 ರಷ್ಟು ಮತದಾನವಾಗಿದೆ. ನಗರದ ನಿವಾಸಿಗಳು ಮತದಾನದತ್ತ ಇನ್ನಷ್ಟು ಆಸಕ್ತಿ ತೋರಬೇಕು. ದೇಶದ ಅಭಿವೃದ್ಧಿ ಮತ್ತು ಜನರ ಜೀವನ ರೂಪಿಸುವುದಕ್ಕೆ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ.ಗಾಯತ್ರಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ
ಸ್ವೀಪ್ ಐಕಾನ್ ನಿವೇದನ್ ನೆಂಪೆ, ಮಹಾನಗರಪಾಲಿಕೆ ಅಧಿಕಾರಿ ಸುಪ್ರಿಯ, ಸಿಟಿ ಸೆಂಟರ್ ಮಾಲ್‌ನ ದರ್ಶನ್, ಪಾಲಿಕೆ ಮತ್ತು ಜಿಲ್ಲಾ ಪಂಚಾಯತ್ ಸಿಬ್ಬಂದಿ ಇದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಇಸ್ರೋ ವಿಜ್ಞಾನಿ, ‘ಯುವಕರಿಗಿದೆ ಹಲವು ಅವಕಾಶ, ಸ್ಟಾರ್ಟ್ ಅಪ್‌ಗಳಿಗೆ ಸಿಗಲಿದೆ ನೆರವುʼ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422