ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 MAY 2024
BHADRAVATHI : ಹಾವಿನ ಹೊಟ್ಟೆ ಸೇರಿದ್ದ ಪ್ಲಾಸ್ಟಿಕ್ (Plastic) ಹೊರ ತೆಗೆದು ಉರಗ ರಕ್ಷಕರೊಬ್ಬರು ಅದರ ಪ್ರಾಣ ಉಳಿಸಿದ್ದಾರೆ. ಭದ್ರಾವತಿಯ ಬಸವೇಶ್ವರ ಸರ್ಕಲ್ನಲ್ಲಿ ಕೆರೆಗೊಡ್ಡು ಹಾವು ಕಪ್ಪೆಯ ಜೊತೆಗೆ ಪ್ಲಾಸ್ಟಿಕ್ ನುಂಗಿತ್ತು. ಹೊರಳಾಡಲಾಗದೆ, ಅತ್ತಿತ್ತ ಚಲಿಸದೆ ನಿತ್ರಾಣಗೊಂಡು ಲಾರಿಯೊಂದರ ಅಡಿ ಸೇರಿತ್ತು.
ವಿಷಯ ತಿಳಿಯುತ್ತಿದ್ದಂತೆ ಉರಗ ರಕ್ಷಕ ಪ್ರಹ್ಲಾದ್ ರಾವ್ ಅವರು ಹಾವು ಹಿಡಿದು ಪ್ಲಾಸ್ಟಿಕ್ ಹೊರ ತೆಗೆದಿದ್ದರೆ. ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಪ್ರಹ್ಲಾದ್ ರಾವ್, ‘ಪರಿಚಯದವರೊಬ್ಬರು ಕರೆ ಮಾಡಿ ವಿಷಯ ತಿಳಿಸಿದರು. ಕಪ್ಪೆಯ ಜೊತೆಗೆ ಪ್ಲಾಸ್ಟಿಕ್ ನುಂಗಿತ್ತು. ಹಾವು ತನ್ನ ಆಹಾರವನ್ನು ಹೊರ ಹಾಕುವ ಸಾಮರ್ಥ್ಯ ಹೊಂದಿದೆ. ಆದರೆ ಪ್ಲಾಸ್ಟಿಕ್ ಹೊರ ತೆಗೆಯಲು ಆಗುವುದಿಲ್ಲ. ಅದು ಅಲ್ಲಿಯೇ ಸಾವನ್ನಪ್ಪುತ್ತಿತ್ತು. ಹಾವನ್ನು ಹಿಡಿದು ಕೂಡಲೆ ಪ್ಲಾಸ್ಟಿಕ್ ಹೊರ ತೆಗೆದು, ಬಿಡಲಾಯಿತು. ಹಾವು ಚೇತರಿಸಿಕೊಂಡಿದೆʼ ಎಂದು ತಿಳಿಸಿದರು.
ಇದನ್ನೂ ಓದಿ – ನಿದಿಗೆ ಬಳಿ ಟ್ಯಾಕ್ಸಿಯಿಂದ ಬಲಗಾಲು ಹೊರಗಿಟಿದ್ದಷ್ಟೇ, ಕಾಲು ಜಖಂ, ಪ್ರಜ್ಞಾಹೀನರಾದ ವ್ಯಕ್ತಿ
ಪ್ರಹ್ಲಾದ್ ರಾವ್ ಅವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಹ್ಲಾದ್ ರಾವ್ ಅವರು ಶ್ರೀ ಕಾಳಿಕಾಪರಮೇಶ್ವರಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಆಭರಣ ಪರಿವೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಹಾವುಗಳ ರಕ್ಷಣ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422