ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 26 JUNE 2024
SHIMOGA: ಕೆಲಸಕ್ಕೆಂದು ಆಫ್ರಿಕಾ ದೇಶಕ್ಕೆ ತೆರಳಿದ್ದ ವ್ಯಕ್ತಿ ಭಾರತಕ್ಕೆ ಮರಳಿದ್ದು ಮನೆಗೆ ಹಿಂತಿರುಗಿಲ್ಲ. ಏಳು ವರ್ಷದಿಂದ ಆತ ಕಾಣೆಯಾಗಿದ್ದಾನೆ (Missing) ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ರಾಹಿಂ ಖಲೀಲ್ ವುಲ್ಲಾ (39) ಕಾಣೆಯಾದಾತ.
ವೆಸ್ಟ್ ಅಫ್ರಿಕಾದ ಸಿರಾ ಲಿಯೋನ್ ಎಂಬಲ್ಲಿಗೆ ಇಬ್ರಾಹಿಂ ಖಲೀಲ್ ವುಲ್ಲಾ ಕೆಲಸಕ್ಕೆ ತೆರಳಿದ್ದ. 2016ರಲ್ಲಿ ಈತ ಭಾರತಕ್ಕೆ ಹಿಂತಿರುಗಿದ್ದ. ಅಂದಿನಿಂದ ಈತ ಮನೆಗೆ ಬಂದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ 2023ರ ಏಪ್ರಿಲ್ ತಿಂಗಳಲ್ಲಿ ಕೆಲಸಕ್ಕೆಂದು ಮನೆಯಿಂದ ತೆರಳಿದ್ದ ಕಿರಣ್ ಎಂಬಾತ ನಾಪತ್ತೆಯಾಗಿದ್ದಾನೆ. ಇವರಿಬ್ಬರ ಸುಳಿವು ಸಿಕ್ಕಲ್ಲಿ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ಅಥವಾ 9480803308 ಮತ್ತು 9480803300 ಮೊಬೈಲ್ ನಂಬರ್‌ಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಜಿಲ್ಲಾ ಮಟ್ಟದ ಜನ ಸ್ಪಂದನಕ್ಕೆ ದಿನಾಂಕ, ಸ್ಥಳ ನಿಗದಿ, ಯಾರೆಲ್ಲ ಸಚಿವರಿಗೆ ಮನವಿ ಸಲ್ಲಿಸಬಹುದು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422