ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 3 JULY 2024
SHIMOGA : ನಗರದಲ್ಲಿ ಚಿರತೆ ಪ್ರತ್ಯಕ್ಷವಾದ ಸುದ್ದಿ ವಾಟ್ಸಪ್‌ನಲ್ಲಿ ವೈರಲ್ (viral) ಆಗಿದ್ದು ಜನ ಆತಂಕಕ್ಕೀಡಾಗಿದ್ದಾರೆ. ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ ಈತನಕ ಚಿರತೆಯ ಕುರುಹು ಪತ್ತೆಯಾಗಿಲ್ಲ.
ರಾಗಿಗುಡ್ಡ ಪಕ್ಕದ ಕುವೆಂಪು ನಗರದಲ್ಲಿ ಚಿರತೆ ಪ್ರತ್ಯಕ್ಷವಾದ ವಿಚಾರ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಚಿರತೆ ಮಾದರಿಯ ಪ್ರಾಣಿಯೊಂದು ಹಾದು ಹೋಗಿರುವುದು ಮನೆಯ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ. ಇದೇ ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ.

ಎಲ್ಲಿದೆ? ಹೇಗಿದೆ ಕುವೆಂಪು ನಗರ?
ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜು ಎದುರು, ಸವಳಂಗ ರಸ್ತೆ ಮತ್ತು ರಾಗಿಗುಡ್ಡಕ್ಕೆ ಹೊಂದಿಕೊಂಡಂತೆ ಕುವೆಂಪು ನಗರ ಬಡಾವಣೆ ಇದೆ. ವಿವಿಧ ಬ್ಲಾಕ್‌ಗಳಲ್ಲಿ ಬಡಾವಣೆ ನಿರ್ಮಿಸಲಾಗಿದೆ. ನೂರಾರು ಮನೆಗಳು ಸಾವಿರಾರು ಜನರು ಇಲ್ಲಿ ವಾಸವಾಗಿದ್ದಾರೆ. ಬಡಾವಣೆಯಲ್ಲಿ ಈಗಲು ಬಹುತೇಕ ಖಾಲಿ ನಿವೇಶನಗಳಿವೆ. ಅಲ್ಲೆಲ್ಲ ಗಿಡಗಂಟಿ ಬೆಳೆದು ಕಾಡಿನಂತಹ ವಾತಾವರಣವಿದೆ.

ಚಿರತೆ ಭೀತಿಯಲ್ಲಿ ವಾಕಿಂಗ್ ಕೈಬಿಟ್ಟರು
ಕೆಲವು ತಿಂಗಳ ಹಿಂದೆ ಕುವೆಂಪು ನಗರದಲ್ಲಿ ಚಿರತೆ ಪ್ರತ್ಯಕ್ಷವಾದ ವಿಚಾರ ತೀವ್ರ ಆತಂಕ ಮೂಡಿಸಿತ್ತು. ಕಣ್ಣಾರೆ ಕಂಡವರು ಯಾರು ಇಲ್ಲದ್ದರಿಂದ ಗಾಳಿ ಸುದ್ದಿ ಎಂದು ಭಾವಸಿ ಜನ ಸುಮ್ಮನಾಗಿದ್ದರು. ಜುಲೈ 1ರ ನಡುರಾತ್ರಿ ಕುವೆಂಪು ನಗರದ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್ ಆಗುತ್ತಿದ್ದಂತೆ ಸ್ಥಳೀಯರಲ್ಲಿ ಭೀತಿ ಎದುರಾಗಿದೆ.
[su_quote cite=”ಸಿ.ಜಿ.ಮಧುಸೂದನ್, ಸ್ಥಳೀಯರು”]ಚಿರತೆ ವಿಚಾರ ಬಡಾವಣೆ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಹಲವರು ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವುದನ್ನು ನಿಲ್ಲಿಸಿದ್ದಾರೆ. ಒಂಟಿ ಮನೆಗಳು ಹೆಚ್ಚಿರುವುದರಿಂದ ಭೀತಿಯಲ್ಲಿದ್ದಾರೆ. ಇಲ್ಲಿ ಬೀದಿ ನಾಯಿಗಳು ಹೆಚ್ಚಿವೆ. ಹಾಗಾಗಿ ಚಿರತೆ ಬಂದಿದ್ದರೆ ಬೀದಿ ನಾಯಿಗಳ ಮೇಲೆ ದಾಳಿ ಮಾಡಬೇಕಿತ್ತು. ಆದರೆ ಅಂತಹ ಯಾವುದೇ ಪ್ರಕರಣಗಳು ಆಗಿಲ್ಲ.[/su_quote]
[su_note note_color=”#2C3E50″ text_color=”#ffffff” radius=”1″]
ವೈರಲ್ ವಿಡಿಯೋದಲ್ಲಿ ಏನಿದೆ?

ಚಿರತೆ ಪ್ರತ್ಯಕ್ಷ ಎಂಬ ಶೀರ್ಷಿಕೆಯೊಂದಿಗೆ 16 ಸೆಕೆಂಡ್‌ನ ವಿಡಿಯೋ ವೈರಲ್ ಆಗಿದೆ. ವಿಡಿಯೋದ ಆರಂಭದಲ್ಲಿ ಚಿರತೆಯಂತೆ ಗೋಚರಿಸುವ ಪ್ರಾಣಿಯೊಂದು ಮನೆಯೊಂದರ ಕಾಂಪೌಂಡ್ ಪಕ್ಕದಲ್ಲಿ ನಡೆದು ಹೋಗುತ್ತದೆ. ಮೂರ್ನಾಲ್ಕು ಕ್ಷಣಕ್ಕೆ ಆ ಪ್ರಾಣಿ ಹಿಂತಿರುಗಿ ಓಡಲು ಆರಂಭಿಸುತ್ತದೆ. ಅದರ ಹಿಂದೆಯೇ ನಾಯಿಯೊಂದು ಬೆನ್ನಟ್ಟಿಕೊಂಡು ಹೋಗುವುದು ವಿಡಿಯೋದಲ್ಲಿ ಸೆರೆಯಾಗಿದೆ. ಜುಲೈ 1ರ ಮಧ್ಯ ರಾತ್ರಿ 12.28ಕ್ಕೆ ಈ ದೃಶ್ಯ ಸೆರೆಯಾಗಿದೆ.[/su_note]
ಅರಣ್ಯ ಇಲಾಖೆಯಿಂದ ಪರಿಶೀಲನೆ
ಸಿಸಿಟಿವಿಯಲ್ಲಿ ಚಿರತೆ ದೃಶ್ಯ ಸೆರೆಯಾದ ಮನೆ ಬಳಿ ಶಂಕರ ವಲಯದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ತೆರಳಿ ಪರಿಶೀಲಿಸಿದರು. ಚಿರತೆಯ ಹೆಜ್ಜೆ ಗುರುತು, ಅದು ಓಡಾಡಿರಬಹುದಾದ ಸ್ಥಳ ಕುರಿತು ಪರಿಶೀಲನೆ ಮಾಡಿದರು.

[su_quote cite=”ಸುಧಾಕರ್, ವಲಯ ಅರಣ್ಯ ಅಧಿಕಾರಿ”]ಮಳೆಯಿಂದಾಗಿ ನೆಲ ಹಸಿ ಇದೆ. ಚಿರತೆಗಳು ಸಾಮಾನ್ಯವಾಗಿ 60 ಕೆ.ಜಿ. ತೂಕವಿರುತ್ತವೆ. ಹಾಗಾಗಿ ಅದು ಓಡಾಡಿದ ಕಡೆಯಲ್ಲಿ ಹೆಜ್ಜೆ ಗುರುತು ಪತ್ತೆಯಾಗಬೇಕಿತ್ತು. ಈತನಕ ಎಲ್ಲಿಯು ಹೆಜ್ಜೆ ಗುರುತು ಸಿಕ್ಕಿಲ್ಲ. ಇನ್ನು, ಕಾಡು ಬೆಕ್ಕುಗಳು ಕೂಡ ಚಿರತೆಯಂತೆಯೇ ಕಾಣುತ್ತವೆ. ಅವುಗಳ ಬಾಲವು ಚಿರತೆಯಂತೆಯೇ ಇರುತ್ತದೆ. ಹಾಗಾಗಿ ಅಲ್ಲಿ ಕಾಣಿಸಿದ್ದು ಚಿರತೆಯೋ, ಕಾಡು ಬೆಕ್ಕೊ ಅನ್ನುವುದು ಸ್ಪಷ್ಟವಾಗಬೇಕಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಾವು ಆ ಭಾಗದಲ್ಲಿ ಗಸ್ತು ಮಾಡುತ್ತಿದ್ದೇವೆ.[/su_quote]
ಸದ್ಯ ಕುವೆಂಪು ನಗರದ ಜನರಲ್ಲಿ ಆತಂಕವಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಗಸ್ತು ಮಾಡುತ್ತಿದ್ದು ಜನರಲ್ಲಿ ತುಸು ನೆಮ್ಮದಿ ಮೂಡಿಸಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವುದು ಚಿರತೆಯೋ, ಕಾಡು ಬೆಕ್ಕೋ ಅನ್ನುವುದು ನಿಖರವಾದರಷ್ಟೆ ಮುಂದಿನ ಕಾರ್ಯಾಚರಣೆಗೆ ಅನುಕೂಲವಾಗಲಿದೆ.
ಇದನ್ನೂ ಓದಿ – ತುಂಗಾ ಮೇಲ್ದಂಡೆ ಯೋಜನೆ ನಾಲೆಗಳಿಗೆ ನೀರು
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದಲ್ಲಿ ಎಷ್ಟಿದೆ ಇವತ್ತಿನ ಅಡಿಕೆ ರೇಟ್? 16 ಮಾರ್ಚ್ 2026 – ಅಡಿಕೆ ಧಾರಣೆ

- ತೀರ್ಥಹಳ್ಳಿ ಮಹಿಳೆಯರಿಗೆ ಮೊದಲ ಮೂರು ಬಹುಮಾನ, ಹೇಗಿತ್ತು ಸ್ಪರ್ಧೆ? ವಿಜೇತರು ಯಾರು?

- ಶಿವಮೊಗ್ಗ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಅಪಘಾತ, ಯುವಕನಿಗೆ ಬಸ್ ಡಿಕ್ಕಿ, ಆಗಿದ್ದೇನು?

- ಶಿವಮೊಗ್ಗದ ಇಂಜಿನಿಯರ್‌ಗೆ ಸಂಕಷ್ಟ ತಂದ ಮರೆವು, ಫ್ಲೈ ಓವರ್ ಬಳಿ ಆಗಿದ್ದೇನು? ಕೇಸ್ ದಾಖಲು

- ಮಲವಗೊಪ್ಪದ ಭದ್ರಾ ನಾಲೆಯಲ್ಲಿ ನಾಪತ್ತೆಯಾಗಿದ್ದ ಹರಿಗೆಯ ಬಾಲಕ ಶವವಾಗಿ ಪತ್ತೆ, ಆಗಿದ್ದೇನು?

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು














