ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 21 AUGUST 2024 : ಬ್ಯಾಂಕ್ ಒಂದರ ಹೆಸರಿನಲ್ಲಿ ವಾಟ್ಸಪ್ ಮಾಡಿ ರೈತರೊಬ್ಬರ ಫಿಕ್ಸೆಡ್ ಡೆಪಾಸಿಟ್ (Fixed Deposit) ಖಾತೆಯಿಂದ 2.99 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ತೀರ್ಥಹಳ್ಳಿ ತಾಲೂಕಿನ ಕೃಷಿಕರೊಬ್ಬರಿಗೆ ಆನ್ಲೈನ್ ಮೂಲಕ ವಂಚಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ವಾಟ್ಸಪ್ಗೆ ಬಂತು APK ಫೈಲ್
ವಾಟ್ಸಪ್ನಲ್ಲಿ ಕೃಷಿಕನಿಗೆ ಆ್ಯಕ್ಸಿಸ್ ಬ್ಯಾಂಕ್ಗೆ ಕೆವೈಸಿ ಅಪ್ಡೇಟ್ ಮಾಡಬೇಕು ತಿಳಿಸಿ ಒಂದು APK ಫೈಲ್ ಕಳುಹಿಸಲಾಗಿತ್ತು. ಅನುಮಾನಗೊಂಡ ಕೃಷಿಕ ತಮ್ಮ ಖಾತೆ ಇರುವ ಆ್ಯಕ್ಸಿಸ್ ಬ್ಯಾಂಕ್ ಶಾಖೆಗೆ ತೆರಳಿ ಸಿಬ್ಬಂದಿಯಲ್ಲಿ ವಿಚಾರಿಸಿದ್ದರು. ಪರಿಶೀಲನೆ ವೇಳೆ ಅವರ ಫಿಕ್ಸೆಡ್ ಡೆಪಾಸಿಟ್ ಖಾತೆಯಿಂದ 2.99 ಲಕ್ಷ ರೂ. ಕಣ್ಮರೆಯಾಗಿರುವುದು ಗೊತ್ತಾಗಿದೆ.
ಖದೀಮರು APK ಫೈಲ್ ಕಳುಹಿಸಿ, ಆ್ಯಕ್ಸಿಸ್ ಬ್ಯಾಂಕ್ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡು, ಆ್ಯಕ್ಸಿಸ್ ಬ್ಯಾಂಕ್ನಿಂದ ಬಂದ ಒಟಿಪಿ ಬಳಿಸಿಕೊಂಡಿರುವ ಶಂಕೆ ಇದೆ. ಫಿಕ್ಸೆಡ್ ಡೆಪಾಸಿಟ್ ಖಾತೆಯಲ್ಲಿದ್ದ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಹಣ ಲಪಟಾಯಸಿದ್ದಾರೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ⇒ ನಮ್ಮೂರಲ್ಲೇ ರೆಡಿಯಾಗುತ್ತವೆ ಈ ಬಟ್ಟೆ, ಇದನ್ನು ಧರಿಸಿದರೆ ಆರೋಗ್ಯವು ಉತ್ತಮವಾಗಿರುತ್ತೆ, ಎಲ್ಲಿದೆ ಅಂಗಡಿ?