GOOD MORNING NEWS, 22 AUGUST 2024
ಸಣ್ಣ ವಿಷಯಗಳನ್ನು ಆನಂದಿಸಲು ಪ್ರಾರಂಭಿಸಿ. ನಿಮ್ಮ ದಿನವು ಪ್ರಕಾಶಮಾನವಾಗಿರುತ್ತದೆ.
ಇದನ್ನೂ ಓದಿ ⇒ ದಿನ ಭವಿಷ್ಯ | 22 ಆಗಸ್ಟ್ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ? ಶುಭ ಸಂಖ್ಯೆ ಎಷ್ಟು?
ಶಿವಮೊಗ್ಗದಲ್ಲಿ ಮಳೆ ಕಡಿಮೆಯಾಗಿದೆ. ಆದರೆ ಧಗೆ ಹೆಚ್ಚಿದೆ. ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಇವತ್ತು ಗರಿಷ್ಠ 31 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ತೀರ್ಥಹಳ್ಳಿಯಲ್ಲಿ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್, ಕನಿಷ್ಠ 25 ಡಿಗ್ರಿ ಸೆಲ್ಸಿಯಸ್, ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರತ ತಾಲೂಕುಗಳಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್, ಕನಿಷ್ಠ 26 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
SHIMOGA CITY NEWS
ನೆಹರು ಕ್ರೀಡಾಂಗಣ : ಇಂದಿನಿಂದ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ಆರಂಭ. ಆ.31ರವರೆಗೆ 11 ಜಿಲ್ಲೆಯ ಅಭ್ಯರ್ಥಿಗಳ ನೇಮಕಾತಿ ರಾಲಿ ನಡೆಯಲಿದೆ.
ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಇದೇ ಮೊದಲು ಸೇನೆಗೆ ಅಗ್ನಿವೀರರ ನೇಮಕಾತಿ ರ‍್ಯಾಲಿ, ನಾಳೆಯಿಂದ ಆಯ್ಕೆ ಶುರು, ಹೇಗಿದೆ ಸಿದ್ಧತೆ?
ಬಿಜೆಪಿ ಕಚೇರಿ : ಪರಿಶಿಷ್ಟ ಜಾತಿ, ಪಂಗಡದ ಎಲ್ಲ ಅನುದಾನಗಳಿಗೆ ರಾಜ್ಯ ಸರ್ಕಾರ ಕತ್ತರಿ ಹಾಕಿದೆ. ಗ್ಯಾರಂಟಿ ಯೋಜನೆಗೆ ಆ ಅನುದಾನ ಬಳಕೆಯಾಗುತ್ತಿದೆ. ಮಾಜಿ ಸಚಿವ ಎನ್.ಮಹೇಶ್ ಆರೋಪ.
ಪತ್ರಿಕಾ ಭವನ : ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಬಂಧಿಸಬೇಕು. ಮಾಜಿ ಸಚಿವ ಈಶ್ವರಪ್ಪ ಆಗ್ರಹ.
ಡಿಸಿ ಕಚೇರಿ : ಕೇರಳದ ವಯನಾಡ್ ಮಾದರಿ ಭೂಕುಸಿತ ತಪ್ಪಿಸಲು ಮಾಧವ್ ಗಾಡ್ಗೀಳ್ ವರದಿ ಜಾರಿಗೊಳಿಸಬೇಕು. ಪರಿಸರಕ್ಕಾಗಿ ನಾವು ಸಂಘಟನೆಯಿಂದ ಜಿಲ್ಲಾಧಿಕಾರಿಗೆ ಮನವಿ.
ಪತ್ರಿಕಾ ಭವನ : ಶ್ರೀಗಂಧ ಸಂಸ್ಥೆ ವತಿಯಿಂದ ಆ.24ರಂದು ವಿನೋಬನಗರ ಶುಭ ಮಂಗಳ ಕಲ್ಯಾಣ ಮಂಟಪದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಚಾಲಕ ಕೃಷ್ಣಾನಂದ ತಿಳಿಸಿದರು.
ಜೆಎನ್‌ಎನ್ ಕಾಲೇಜು : ಅವರಣದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ. ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರಿಂದ ಗುದ್ದಲಿ ಪೂಜೆ.
ಪತ್ರಿಕಾ ಭವನ : ಕಾಗೋಡು ತಿಮ್ಮಪ್ಪ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು, ಯಡೆಹಳ್ಳಿಯಲ್ಲಿ ರೈತರ ಮೇಲಿನ ದೌರ್ಜನ್ಯ ವಿರೋಧಿಸಿ ಮಾನವ ಹಕ್ಕುಗಳು ಹೋರಾಟ ಸಮಿತಿಯಿಂದ ಆ.27ರಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ.
ಕುರುಬರ ಸಂಘ : ಬಾಲರಾಜ್ ಅರಸ್ ರಸ್ತೆಯಲ್ಲಿ ಕುರುಬರ ಸಂಘದ ನೂತನ ಸಮುದಾಯ ಭವನ ಕಟ್ಟಡಕ್ಕೆ ಶಂಕುಸ್ಥಾಪನೆ.
SHIMOGA | BHADRAVATHI | THIRTHAHALLI NEWS
ಉಂಬ್ಳೆಬೈಲು : ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ನೊಟೀಸ್. ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಭೇಟಿಯಾದ ರೈತರು.
ಆಯನೂರು : ಬೇಕರಿಯಲ್ಲಿ ಅಗ್ನಿ ಅವಘಡ. ಮೂರು ಬಾರಿ ಸ್ಪೋಟ. ಸುಟ್ಟು ಕರಕಲಾದ ವಸ್ತುಗಳು
ತೀರ್ಥಹಳ್ಳಿ : ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ. ಶಿಕ್ಷಕನ ಬಂಧನ. ಪೊಲೀಸ್ ಠಾಣೆಗೆ ಶಾಸಕ ಆರಗ ಜ್ಞಾನೇಂದ್ರ, ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಭೇಟಿ.
ತೀರ್ಥಹಳ್ಳಿ : ಪತ್ರಕರ್ತ ನಿರಂಜನ್ ಮೇಲೆ ಇನ್ಸ್‌ಪೆಕ್ಟರ್ ಅಶ್ವಥಗೌಡ ಹಲ್ಲೆ ಯತ್ನ. ಮೊಬೈಲ್ ಕಸಿದುಕೊಂಡ ಆರೋಪ. ಠಾಣೆ ಮುಂದೆ ಪತ್ರಕರ್ತರ ಧರಣಿ. ಪತ್ರಕರ್ತ ಸಂಘದಿಂದ ಘಟನೆಗೆ ಖಂಡನೆ.
ಹೊಳೆಹೊನ್ನೂರು : ಜಂಬರಗಟ್ಟ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಉಪ್ಪಾರ ಬೀದಿ ವಾಸಿ ಶಿಲ್ಪಿ ಹೆಚ್.ಎನ್.ಶರತ್ ಸಾವು.
ಹೊಳೆಹೊನ್ನೂರು : ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಕೆ.ರಂಗಸ್ವಾಮಿ ಭೇಟಿ, ಪರಿಶೀಲನೆ. ಸಿಬ್ಬಂದಿ ಕಾರ್ಯವೈಖರಿ ಕುರಿತ ಮಾಹಿತಿ ಸಂಗ್ರಹ.
HOSANAGARA | SAGARA NEWS
ಆನಂದಪುರ : ಸುತ್ತಮುತ್ತಲು ಭಾರಿ ಮಳೆ. ಮನೆಗಳು, ಮಳಿಗೆಗಳಿಗೆ ನುಗ್ಗಿದ ನೀರು. ಹೆದ್ದಾರಿ ಮೇಲೆ ಹರಿದ ಚರಂಡಿ ನೀರು.
ಸಾಗರ : ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆ ಅವೈಜ್ಞಾನಿಕ. ಹೋರಾಟಗಾರರಿಗೆ ಪಕ್ಷಾತೀತ ಬೆಂಬಲ. ಮಾಜಿ ಸಚಿವ ಹರತಾಳು ಹಾಲಪ್ಪ ಘೋಷಣೆ.
ಹೊಸನಗರ : ಸೆ.1ರಿಂದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯೋಜನೆ. ಅಥ್ಲೆಟಿಕ್ಸ್, ವಾಲಿಬಾಲ್, ಕಬಡ್ಡಿ, ಥ್ರೋಬಾಲ್, ಕೊಕ್ಕೊ ಪಂದ್ಯಾವಳಿ ಇರಲಿದೆ.
ಸಾಗರ : ಗಾಂಧಿ ಮೈದಾನದಲ್ಲಿ ಆ. 24ರಂದು ಚರಕ, ಜೀವನ್ಮುಖಿ ಸಂಸ್ಥೆಯಿಂದ ‘ಅವ್ವ’ ಮಹಿಳಾ ಮಹಾಸಂತೆ ನಡೆಯಲಿದೆ ಎಂದು ಆಯೋಜಕರಾದ ಎಂ.ವಿ.ಪ್ರತಿಭಾ ತಿಳಿಸಿದ್ದಾರೆ.
ಕಾರ್ಗಲ್ : ಆ.27ರಂದು ಜೋಗ – ಕಾರ್ಗಲ್ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನಿಗದಿಯಾಗಿದೆ.
ಕಾರ್ಗಲ್ : ಬಿದರೂರು ಗ್ರಾಮದ ತಳಕಳಲೆ ಹಿನ್ನೀರು ಪಕ್ಕದ ಕರಿಚಾನಲ್‌ನಲ್ಲಿ ಮೊಸಳೆ ಪ್ರತ್ಯಕ್ಷ. ಕೂಡಲೆ ಮೊಸಳೆ ಸೆರೆ ಹಿಡಿಯುವಂತೆ ಗ್ರಾಮಸ್ಥರ ಆಗ್ರಹ.
SORABA | SHIKARIPURA NEWS
ಶಿಕಾರಿಪುರ : ಪುರಸಭೆ ನೂತನ ಅಧ್ಯಕ್ಷೆಯಾಗಿ ಬಿಜೆಪಿಯ ಶೈಲಾ, ಉಪಾಧ್ಯಕ್ಷೆಯಾಗಿ ಎಂ.ಎಸ್.ರೂಪಾ ಆಯ್ಕೆ. ಸಂಸದ ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ ಅಭಿನಂದನೆ.
ಶಿರಾಳಕೊಪ್ಪ : ಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮಮತಾ ನಿಂಗಪ್ಪ, ಉಪಾಧ್ಯಕ್ಷರಾಗಿ ಮುದಾಸೀರ್ ಅಹಮ್ಮದ್ ಆಯ್ಕೆ. ಕಾಂಗ್ರೆಸ್ ಮುಖಂಡ ನಾಗರಾಜಗೌಡ ಅಭಿನಂದನೆ.
ಸೊರಬ : ಕೈಗಾರಿಕಾ ವಸಾಹತು ಸಮೀಪ ರೈತರ ಗದ್ದೆಯಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಾಟಿ ಸಂಭ್ರಮ. ಪ್ರಗತಿಪರ ರೈತರು ಸೇರಿದ ಹಲವರು ಭಾಗಿ.
ಆನವಟ್ಟಿ : ಕುರುಬರ ಓಣಿಯ ಪಿತ್ರಾರ್ಜಿತ ಆಸ್ತಿಯನ್ನು ಅಧಿಕಾರಿಗಳು ಬೇನಾಮಿ ವ್ಯಕ್ತಿಯ ಹೆಸರಿಗೆ ಖಾತೆ ಬದಲಾವಣೆ ಮಾಡುತ್ತಿದ್ದಾರೆಂದು ಆರೋಪ. ಪಟ್ಟಣ ಪಂಚಾಯಿತಿ ಮುಂದೆ ಪ್ರತಿಭಟನೆ.
ಸೊರಬ : ಒಂದು ಗಂಟೆಗು ಹೆಚ್ಚು ಹೊತ್ತು ಸುರಿದ ಮಳೆ. ಪಟ್ಟಣದ ವಿವಿಧೆಡೆ ಚರಂಡಿಗಳು ಭರ್ತಿಯಾಗಿ ರಸ್ತೆ ಮೇಲೆ ಹರಿದ ನೀರು. ಕೆಲ ಹೊತ್ತು ಸಂಚಾರ ಅಸ್ತವ್ಯಸ್ತ.
ಇದನ್ನೂ ಓದಿ ⇒ ಮೆಗ್ಗಾನ್ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಬಳಿಕ ಮಹಿಳೆಗೆ ಬಂತು ಸಾಲು ಸಾಲು ಮೆಸೇಜ್, ಆಮೇಲೆ ಕಾದಿತ್ತು ಶಾಕ್
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200