ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
THIRTHAHALLI, 22 AUGUST 2024 | ಪತ್ರಕರ್ತನ ಮೊಬೈಲ್ ಕಸಿದುಕೊಂಡು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡುವುದಾಗಿ ಬೆದರಿಕೆ ಹಾಕಿ ದೌರ್ಜನ್ಯ ಎಸಗಿದ ತೀರ್ಥಹಳ್ಳಿ ಇನ್ಸ್‌ಪೆಕ್ಟರ್ ಅಶ್ವತ್ಥಗೌಡ ಕ್ರಮ ಖಂಡಿಸಿ ಪತ್ರಕರ್ತರು (Journalists) ಪೊಲೀಸ್ ಠಾಣೆ ಮುಂಭಾಗ ಧರಣಿ ನಡೆಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಬುಧವಾರ ಸಂಜೆ ಭೇಟಿ ನೀಡದ್ದರು. ಈ ಸಂದರ್ಭ ಪತ್ರಕರ್ತ ವಿ.ನಿರಂಜನ ವರದಿಗಾರಿಕೆಗೆ ತೆರಳಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಠಾಣೆಯಿಂದ ನಿರ್ಗಮಿಸುವಾಗ ಟ್ರಾಫಿಕ್ ಜಾಮ್ ಆಗಿತ್ತು. ಕರ್ತವ್ಯದ ಸಲುವಾಗಿ ಪತ್ರಕರ್ತ ನಿರಂಜನ್ ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದರು. ಈ ವೇಳೆ ಏಕಾಏಕಿ ಅವರ ಮೇಲೇರಿ ಬಂದ ಇನ್ಸ್‌ಪೆಕ್ಟರ್ ಅಶ್ವತ್ಥಗೌಡ ಮೊಬೈಲ್ ಕಸಿದುಕೊಂಡು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಧರಣಿ ನಡೆಸಲಾಯಿತು.
ಇದನ್ನೂ ಓದಿ ⇒ ಮೆಗ್ಗಾನ್ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಬಳಿಕ ಮಹಿಳೆಗೆ ಬಂತು ಸಾಲು ಸಾಲು ಮೆಸೇಜ್, ಆಮೇಲೆ ಕಾದಿತ್ತು ಶಾಕ್
ಇದರಿಂದ ಅಸಮಾಧಾನಗೊಂಡ ಪತ್ರಕರ್ತರು ಪೊಲೀಸ್ ಠಾಣೆ ಎದುರಿನಲ್ಲೇ ಧರಣಿ ಕುಳಿತರು. ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಭೇಟಿ ನೀಡಿದ್ದರು.
ಇದನ್ನೂ ಓದಿ ⇒ ಗುಡ್ ಮಾರ್ನಿಂಗ್ ಶಿವಮೊಗ್ಗ | ಒಂದೇ ಕ್ಲಿಕ್‌ನಲ್ಲಿ ಇಡೀ ಜಿಲ್ಲೆಯ ಸುದ್ದಿ