ಅಡಿಕೆ ತೋಟದಲ್ಲಿ ಔಷಧ ಸಿಂಪಡಿಸುವಾಗ ವಿದ್ಯುತ್‌ ಶಾಕ್‌, ಸ್ಥಳದಲ್ಲೇ ವ್ಯಕ್ತಿ ಸಾವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SORABA, 26 AUGUST 2024 : ತೋಟದಲ್ಲಿ ಅಡಿಕೆ (Areca) ಮರಗಳಿಗೆ ಔಷಧ ಸಿಂಪಡಿಸುವ ವೇಳೆ ವಿದ್ಯುತ್‌ ಪ್ರವಹಿಸಿ ರೈತ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೊರಬ ತಾಲೂಕು ಓಟೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ.

ಅಡಿಕೆ ಮರಗಳ ಹಿಂಗಾರಕ್ಕೆ ಕೊಳೆ ಔಷಧ ಸಿಂಪಡಿಸುವಾಗ ವಿದ್ಯುತ್ ತಂತಿಗೆ ಕೊಳೆ ಔಷಧ ತಗುಲಿದೆ. ಅದರಿಂದ ವಿದ್ಯುತ್‌ ಪ್ರವಹಿಸಿ ಆನವಟ್ಟಿ ಹೋಬಳಿಯ ಕೋಡಿಹಳ್ಳಿ ಗ್ರಾಮದ ಶ್ರೀಕಾಂತ (35) ಮೃತಪಟ್ಟಿದ್ದಾರೆ.

ತಂದೆ ಮತ್ತು ಅಣ್ಣನ ಜತೆ ಭಾನುವಾರ ಓಟೂರು ಗ್ರಾಮದ ವಿಶ್ವ ಎಂಬುವರ ತೋಟದ ಅಡಿಕೆಗೆ ಕೊಳೆ ಔಷಧ ಸಿಂಪಡಿಸಲು ಹೋಗಿದ್ದರು. ತೋಟದ ಪಕ್ಕದಲ್ಲಿ ವಿದ್ಯುತ್ ತಂತಿ ಹಾದು ಹೋಗಿದೆ. ಸಿಂಪಡಿಸುವ ಔಷಧ ತಂತಿಗೆ ತಗುಲಿದೆ. ಔಷಧ ಸಿಂಪಡಿಸುವ ಪೈಪ್‌ನಿಂದ ವಿದ್ಯುತ್ ಪಸರಿಸಿದ ಪರಿಣಾಮ ಶ್ರೀಕಾಂತ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲ್ಲಾಗಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ⇒ GOOD MORNING ಶಿವಮೊಗ್ಗ | 26 ಆಗಸ್ಟ್‌ 2024 | ಒಂದೇ ಕ್ಲಿಕ್‌ನಲ್ಲಿ ಜಿಲ್ಲೆಯ ಎಲ್ಲಾ ಸುದ್ದಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 26, 2024

Leave a Comment