ದಿನ ಭವಿಷ್ಯ | 28 ಆಗಸ್ಟ್‌ 2024 | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

DINA BHAVISHYA, 28 AUGUST 2024

ಮೇಷ : ಕುಜ ಮಿತ್ರ ಗೃಹ ಮತ್ತು ತೃತೀಯ ಸ್ಥಾನದಲ್ಲಿ ಇರುವುದು ತೊಂದರೆ ಇಲ್ಲ. ಆರೋಗ್ಯದ ಬಗ್ಗೆ ನಿಗಾ ಇರಲಿ. ಉದ್ಯೋಗದಲ್ಲಿನ ಆಲಸ್ಯ ಮುಂದುವರೆಯಲಿದೆ. ಗಣೇಶನಿಗೆ ಕಡಳೆಕಾಳು ದಾನ ಮಾಡಿ. ಸುದ್ದಿಯ ಮುಂದಿನ 12 ಪ್ಯಾರಾಗಳು ಕೆಳಗಿವೆ. ಶುಭ ಸಂಖ್ಯೆ: 1-5-8-9

ವೃಷಭ : ನಾಲ್ಕರ ರವಿಗಿಂತ ಪಂಚಮದ ಕೇತು ಬಹಳ ಅಪಾಯಕಾರಿ. ಸಂಬಂಧ ಹಾಗೂ ಶಾರೀರಿಕ ಸೌಖ್ಯ ಹಾಳು ಮಾಡಿಯಾನು. ಗಣಪತಿಗೆ ಅಭಿಷೇಕ ಸೇವೆ ಮಾಡಿಸಿ. ಶುಭ ಸಂಖ್ಯೆ : 2-7-10-11

ಮಿಥುನ : ಬುಧ ನೇರ ಚಲನೆಯಲ್ಲಿ ಹಿತವಿದೆ. ಆದರೆ ಮನಸ್ಸಿನ ವ್ಯಥೆ ಇಂದು ಮುಂದುವರೆಯಲಿದೆ. ಧನಾಗಮನ ಕಡಿಮೆ. ಸೀಮಿತಕ್ಕೆ ಅಷ್ಟೆ ನಿಮ್ಮ ಲಕ್ಕು. ಆದರೂ ಬುದ್ದಿಯಿಂದ ಮುನ್ನಡೆಯಿರಿ.ವಿಷ್ಣು ಸಹಸ್ರನಾಮ ಓದಿ. ಶುಭ ಸಂಖ್ಯೆ : 5-6-10

ಕರ್ಕ : ನಿಮ್ಮ ಮಾತು ಬಹಳ ಖಾರವಾಗಿದೆ. ಹಿಡಿತವಿಲ್ಲ. ಮನಸ್ಸಿನಂತೆ ನಡೆಯಬೇಡಿ. ಅಷ್ಟಮದ ಶನಿ. ಸರ್ಪದೋಷ ಕಾಡಲಿದೆ. ಜೋಪಾನ. ಹುಡುಗರಿಗೆ ಅಗತ್ಯ ವಸ್ತು ದಾನ ಮಾಡಿ. ಶುಭ ಸಂಖ್ಯೆ : 4-5-1

ಸಿಂಹ : ಸಂತೋಷ ನೆಮ್ಮದಿ ನಿಮ್ಮ ಜೊತೆಯಲ್ಲೇ ಇದೆ. ಹಣ ಅಧಿಕ ವ್ಯಯ. ಮದುವೆಯ ವಿಚಾರ ಇಂದು ಇಲ್ಲ. ಶುಭ ಸಂಖ್ಯೆ : 5-6-9-11

ಕನ್ಯಾ : ಕೆಟ್ಟ ಕನಸು ನಿಮ್ಮನ್ನು ಹೆದರಿಸಲಿದೆ. ನೆನ್ನೆಯದ್ದೆ ಮುಂದುವರೆಯಲಿದೆ. ಹಣ ಖರ್ಚಿಲ್ಲದಿದ್ದರೂ. ಮನಸ್ಸಿಗೆ ನೆಮ್ಮದಿ ಕಡಿಮೆ. 21 ಬಾರಿ ಗಣೇಶನಿಗೆ ನಮಸ್ಕರಿಸಿ. ಶುಭ ಸಂಖ್ಯೆ : 7-10-11-03

DINA-BHAVISHYA

ತುಲಾ : ಪೂರ್ತಿ ನೆಮ್ಮದಿ. ಪಂಚಮದ ಶನಿ ಅನುಕೂಲನೂ ಹೌದು. ಅನಾನುಕೂಲವೂ ಹೌದು. ನಾಗನ ಆರಾಧನೆ ಮಾಡಿ. ಶುಭ ಸಂಖ್ಯೆ : 8-9-4

ವೃಶ್ಚಿಕ : ಸರ್ಪದೋಷ ಕಾಡಲಿದೆ. ನಾಗನಿಗೆ ತನು ಸೇವೆಯಿಂದ ನಿಮ್ಮ ತನುವಿನ ಸೌಖ್ಯ ಉತ್ತಮ. ಗ್ರಹಗಳು ನಿಮ್ಮ ಕಾರ್ಯ ಮುಗಿಸುತ್ತದೆ. ಶುಭ ಸಂಖ್ಯೆ : 8-1-5

SANDESH-UPADHYA-DINA-BHAVISHYA-SHIMOGA

ಧನು : ಆರೋಗ್ಯ ಸೌಖ್ಯದಿಂದ ಕೂಡಿದೆ. ಈದಿನ ನೆಮ್ಮದಿ ಎದ್ದು ಕಾಣಲಿದೆ. ಕುಟುಂಬದ ಚಿಂತೆ ಬಿಡಿ. ಮಾತು ಕಡಿಮೆ ಇರಲಿ. ಶುಭ ಸಂಖ್ಯೆ : 9-12-04

ಮಕರ : ಮನೆಯಲ್ಲಿ ಮನಸ್ತಾಪ. ಇದು ಮುಗಿಯದ ಕಥೆ. ಅಷ್ಟೇನು ಭಾಗ್ಯೋದಯವಿಲ್ಲ. ಆರ್ಥಿಕ ಸಮಸ್ಯೆ ಕಾಡದು. ಶುಭ ಸಂಖ್ಯೆ: 10-11-02

ಕುಂಭ : ಒಂದು ರೀತಿ ನೀವು ಸುಖಿ. ಯೋಚನೆ ಮಾಡಬಾರದು ಅಷ್ಟೇ. ವಿಷ್ಣುವಿನ ಪೂಜೆ ಆರೋಗ್ಯ ಹೆಚ್ಚಿಸುತ್ತದೆ. ಮನೆ, ಪತಿ-ಪತ್ನಿ ಸೌಖ್ಯ ಉತ್ತಮ. ಶುಭ ಸಂಖ್ಯೆ : 11-03-06

ಮೀನ : ಹಿನ್ನಡೆ ಮುಂದುವರೆಯಲಿದೆ. ಸಿಟ್ಟು ನಿಮ್ಮನ್ನು ಬಾಧಿಸಲಿದೆ. ಮಕ್ಕಳ ಮನೊನಂದನ ಎದ್ದು ಕಾಣಲಿದೆ. ಕುಟುಂಬದಲ್ಲಿ ಉತ್ತಮ ಫಲ ಈದಿನ. ಕೃಷ್ಣ – ಶಿವನ ಆರಾಧನೆ ಫಲ ನೀಡುತ್ತದೆ. ಶುಭ ಸಂಖ್ಯೆ : 12-1-8-5

ಇದನ್ನೂ ಓದಿ ⇒ ಲಿಂಗನಮಕ್ಕಿ ಡ್ಯಾಮ್‌ನಿಂದ ಮತ್ತೆ ನೀರು ಹೊರಕ್ಕೆ, ಮೈದುಂಬಿದ ಜೋಗ ಜಲಪಾತ

Leave a Comment