SHIMOGA, 28 AUGUST 2024 : ನಂಜಪ್ಪ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಫಿಜಿಯೋಥೆರಪಿ ಅಂಡ್ ಹೆಲ್ತ್ ಸೈನ್ಸ್ ಕಾಲೇಜಿನ ಸಹಯೋಗದಲ್ಲಿ ನಂಜಪ್ಪ ಎಜುಕೇಷನ್ ಅಕಾಡೆಮಿಯ ಮೊದಲ ವರ್ಷದ ಪದವಿ ಪ್ರದಾನ ಸಮಾರಂಭ (Convocation) ನಡೆಯಿತು. ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರ‍್ಯಾಂಕ್ ವಿಜೇತರಿಗೆ ಪದಕ ಪ್ರದಾನ ಮಾಡಲಾಯಿತು.
ಯಾರೆಲ್ಲ ಏನೆಲ್ಲ ಹೇಳಿದರು?
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ.ಎನ್.ಸಾಯಿ ಕುಮಾರ್ ಮಾತನಾಡಿ, ನಂಜಪ್ಪ ಸಂಸ್ಥೆ ಅತ್ಯಾಧುನಿಕ ತಾಂತ್ರಿಕತೆ ಮೂಲಕ ಪ್ರಾಯೋಗಿಕವಾಗಿ ಶಿಕ್ಷಣ ನೀಡುತ್ತಿದೆ. ಮೆಟ್ರೋ ನಗರಗಳಿಗೆ ತಮ್ಮ ಮಕ್ಕಳನ್ನು ಅಧ್ಯಯನಕ್ಕೆ ಕಳುಹಿಸುವ ಬದಲು ಪೋಷಕರು ಇಲ್ಲಿಯೇ ದಾಖಲು ಮಾಡಬಹುದು. ಇನ್ನು, ಆರೋಗ್ಯ ಕ್ಷೇತ್ರ ಅತ್ಯಂತ ಭಿನ್ನ ಮತ್ತು ಇಲ್ಲಿ ನಿತ್ಯ ಹೊಸ ಸವಾಲುಗಳು ಎದುರಾಗುತ್ತವೆ. ಆದ್ದರಿಂದ ಚಿನ್ನದ ಪದಕ, ರ‍್ಯಾಂಕ್‌ಗಿಂತಲು ರೋಗಿಗಳಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದು ಮುಖ್ಯ. ಹೊಸ ಕಾಯಿಲೆ, ಚಿಕಿತ್ಸೆ ಕುರಿತು ಅಪ್‌ಡೇಟ್ ಆಗುತ್ತಿರಬೇಕು ಎಂದು ಸಲಹೆ ನೀಡಿದರು.
![]() |
ನಂಜಪ್ಪ ಎಜುಕೇಷನ್ ಅಕಾಡೆಮಿ ಅಧ್ಯಕ್ಷ ಡಾ.ಅವಿನಾಶ್ ಮಾತನಾಡಿ, ಸಹನೆ, ಸಮಾನತೆ, ಕಾಯಕ ತತ್ವಗಳನ್ನು ಅಳವಡಿಸಿಕೊಂಡರೆ ವೃತ್ತಿ ಜೀವನ ಮತ್ತು ಖಾಸಗಿ ಬದುಕಿನಲ್ಲಿ ಯಶಸ್ಸು ಕಾಣಬಹುದು. ಪರಿಶ್ರಮವು ಇರಬೇಕು. ಯಶಸ್ವಿ ವ್ಯಕ್ತಿಗಳು ನಿತ್ಯ 14 ರಿಂದ 15 ಗಂಟೆ ಕಾರ್ಯನಿರ್ವಹಿಸುತ್ತಾರೆ. ವೃತ್ತಿ ಮತ್ತು ಸಹೋದ್ಯೋಗಿಗಳನ್ನು ಗೌರವಿಸುವುದು ಅತಿ ಮುಖ್ಯ ಎಂದು ಸಲಹೆ ನೀಡಿದರು.
» ಗುಣಮಟ್ಟದ ಚಿಕಿತ್ಸೆಗೆ ಖ್ಯಾತಿ
ನಂಜಪ್ಪ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಫಿಜಿಯೋಥೆರಪಿ ವಿಭಾಗದ ಪ್ರಾಚಾರ್ಯ ಡಾ. ಡೊನಿ ಜಾನ್ ಮಾತನಾಡಿ, ಪದವಿ ಪಡೆದವರಿಗೆ ಹೊಸ ಯುಗ ಆರಂಭವಾಗಿದೆ. ಹಣದ ಹಿಂದೆ ಓಡುವ ಬದಲು ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಉತ್ತಮ. ನಂಜಪ್ಪ ಎಜುಕೇಷನ್ ಅಕಾಡೆಮಿಯ ಮೊದಲ ಬ್ಯಾಚ್ ಹೊರ ಬಂದಿದೆ. ಮಲೆನಾಡು ಭಾಗದಲ್ಲಿ ನಂಜಪ್ಪ ಹೆಲ್ತ್ ಕೇರ್ ಅತ್ಯಂತ ಗುಣಮಟ್ಟದ ಚಿಕಿತ್ಸೆಗೆ ಖ್ಯಾತಿ ಪಡೆದಿದೆ. ಮೆಲ್ಟಿಸ್ಪೆಷಾಲಿಟಿ ಜೊತೆಗೆ ಅಂಕಾಲಜಿ, ಕ್ಯಾನ್ಸರ್ ಸ್ಪೆಷಾಲಿಟಿ, ಕಾರ್ಡಿಯಾಲಜಿ ವಿಭಾಗವು ಇದೆ. ಪುಸ್ತಕದ ಜೊತೆಗೆ ಪ್ರಾಯೋಗಿಕವಾಗಿಯು ಇಲ್ಲಿ ತಿಳಿಯಲು, ಕಲಿಯಲು ಅವಕಾಶವಿದೆ.
ಮೊದಲನೆ ಘಟಿಕೋತ್ಸವದಲ್ಲಿ ಸುಮಾರು 75 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ನಂಜಪ್ಪ ಟ್ರಸ್ಟ್‌ನ ಟ್ರಸ್ಟಿ ಅಮೃತ್, ನಂಜಪ್ಪ ಸಮೂಹ ಸಂಸ್ಥೆಗಳ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಇದ್ದರು.
ಇದನ್ನೂ ಓದಿ ⇒ ಬೆಳ್ಳಂಬೆಳಗ್ಗೆ ಪೊಲೀಸರ ದಾಳಿ, ಮೂಲೆ ಮೂಲೆ ಶೋಧಿಸಿದ ಖಾಕಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200