ಶಿವಮೊಗ್ಗ ಲೈವ್
SHIMOGA NEWS, 2 OCTOBER 2024 : ವರ್ಕ್ಶಾಪ್ನ (Work Shop) ಬಾಗಿಲಿನ ಬೀಗ ಮುರಿದು ಒಳಗಿದ್ದ ಕಾರು ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ವರ್ಕ್ಶಾಪ್ನಲ್ಲಿ ಘಟನೆಯಾಗಿದೆ. (ಈ ಸುದ್ದಿಯನ್ನು ಇನ್ನು 30 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಸಯ್ಯದ್ ಜಮಾಲ್ ಇಮ್ತಿಯಾಜ್ ಎಂಬುವವರಿಗೆ ಸೇರಿದ ವೋಕ್ಸ್ವ್ಯಾಗನ್ ಕಾರು ಕಳುವಾಗಿದೆ. ರಿಪೇರಿ ಇದ್ದಿದ್ದರಿಂದ ತಮ್ಮ ಸಂಬಂಧಿಗೆ ಸೇರಿದ ವರ್ಕ್ಶಾಪ್ನಲ್ಲಿ ಕಾರು ಬಿಟ್ಟಿದ್ದರು. ವರ್ಕ್ಶಾಪ್ನವರು ಕಾರನ್ನು ಒಳಗೆ ನಿಲ್ಲಿಸಿ ರಾತ್ರಿ ಬೀಗ ಹಾಕಿ ತೆರಳಿದ್ದರು. ಮರುದಿನ ಬೆಳಗ್ಗೆ ಬಂದಾಗ ವರ್ಕ್ಶಾಪ್ನ ಬಾಗಿಲಿನ ಬೀಗ ಮುರಿದು ಕಾರನ್ನು ಕಳವು ಮಾಡಲಾಗಿತ್ತು. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಬ್ಯಾಟರಿ ಲೈಟ್ ಬಿಟ್ಟ ವಿಚಾರ, ಕೈ ಕೈ ಮಿಲಾಯಿಸಿದ ಕುಟುಂಬಗಳು
ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:
