ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA NEWS, 2 OCTOBER 2024 : ನಷ್ಟದ ಸುಳಿಗೆ ಸಿಲುಕಿರುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟವು (ಶಿಮುಲ್), ರೈತರಿಂದ ಖರೀದಿಸುವ ಹಾಲಿನ (Milk) ದರವನ್ನು 90 ಪೈಸೆ ಇಳಿಸಿದೆ. ಈ ಕುರಿತು ಸೋಮವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಪ್ರಸ್ತುತ ಶಿಮುಲ್ 7 ಕೋಟಿ ರೂ. ನಷ್ಟದಲ್ಲಿದೆ. ಅದರಿಂದ ಹೊರಬರಲು ಹಾಲು ಖರೀದಿ ದರ ಇಳಿಸಿದೆ.
ನಷ್ಟದಿಂದ ಪಾರಾಗಲು ಹರ ಸಾಹಸ
2023ರಲ್ಲಿ ಹಾಲು ಮಾರಾಟದ ದರವನ್ನು ಮೂರು ರೂಪಾಯಿ ಏರಿಕೆ ಮಾಡಿದ್ದರಿಂದ 27 ಕೋಟಿ ರೂ.ಗು ಅಧಿಕ ನಷ್ಟದಲ್ಲಿದ್ದ ಶಿಮುಲ್ ನಷ್ಟದಿಂದ ಹೊರಬರಲು ಹರಸಾಹಸ ಪಟ್ಟಿತ್ತು. ಈ ನಡುವೆ ಸರ್ಕಾರ ಮತ್ತೊಮ್ಮೆ 2 ರೂ.ಹೆಚ್ಚಳ ಮಾಡಿ ಅಷ್ಟು ಹಣವನ್ನು ರೈತರಿಗೆ ವರ್ಗಾಯಿಸಿದ್ದರಿಂದ ಹಾಲು ಒಕ್ಕೂಟಗಳಿಗೆ ಮತ್ತೊಮ್ಮೆ ಬರೆ ಬಿದ್ದಂತಾಗಿತ್ತು.
» ಅಧ್ಯಕ್ಷರು ಹೇಳಿದ್ದೇನು?
ಪರಿಷ್ಕೃತ ದರ ಎಷ್ಟು?
ಈವರೆಗೂ ಸಂಘಗಳಿಂದ ಪ್ರತಿ ಕೆ.ಜಿ ಹಾಲಿಗೆ 33.03 ರೂ.ನಂತೆ ಖರೀದಿಸಲಾಗುತ್ತಿತ್ತು. ಪ್ರಸ್ತುತ ಶಿಮುಲ್ ಏಳು ಕೋಟಿ ರೂ. ನಷ್ಟದಲ್ಲಿದೆ. ಅದರಿಂದ ಹೊರಬರಲು ರೈತರಿಂದ ಖರೀದಿಸುವ ದರ ಇಳಿಸಿದೆ. ಪರಿಷ್ಕೃತ ದರ ಅಕ್ಟೋಬರ್ ಒಂದರಿಂದಲೇ ಅನ್ವಯವಾಗಲಿದೆ.
ಒಕ್ಕೂಟದಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರತಿ ಕೆ.ಜಿಗೆ 32.09 ರೂ. ನೀಡಲಾಗುತ್ತದೆ. ಸಂಘಗಳಿಂದ ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 30.13 ರೂ. ನೀಡಲಾಗುತ್ತದೆ ಎಂದು ಸಭೆಯಲ್ಲಿ ನಿರ್ಣಯಿಸಿ ಸುತ್ತೋಲೆ ಹೊರಡಿಸಲಾಗಿದೆ.
ಶಿಮುಲ್ ವ್ಯಾಪ್ತಿಯಲ್ಲಿ ಪ್ರತಿದಿನ 7.17 ಲಕ್ಷ ಲೀಟರ್‌ಗು ಹೆಚ್ಚು ಹಾಲು ಶೇಖರಣೆ ಆಗುತ್ತಿದೆ. ಈ ಪೈಕಿ 3.49 ಲಕ್ಷ ಲೀಟರ್ ಹಾಲು ಮತ್ತು ಹಾಲಿನ ಉತ್ಪನ್ನ ಮಾರಾಟವಾಗತ್ತಿದೆ. ಅಂತಾರಾಜ್ಯ ಡೈರಿಗಳಿಗೆ 1.34 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಉಳಿದ 2.20 ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿ ಮತ್ತು ಬೆಣ್ಣೆ ಪರಿವರ್ತನೆಗೆ ಕಳುಹಿಸಲಾಗುತ್ತಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.ನಿತ್ಯ 7 ಲಕ್ಷ ಲೀಟರ್ ಉತ್ಪಾದನೆ
ಇದನ್ನೂ ಓದಿ » ಅಂಬಾರಿ ಹೊರಲು ಶಿವಮೊಗ್ಗಕ್ಕೆ ಮೂರು ಗಂಡಾನೆ, ಯಾವಾಗ ಬರ್ತವೆ?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422